ಕನ್ನಡತಿ, ಸೀತಾರಾಮ (Seetharama Serial) ಸೀರಿಯಲ್‌ಗಳ ಮೂಲಕ ಗಮನ ಸೆಳೆದಿರುವ ನಟಿ ರಮೋಲ (Ramola) ಒಂದು ದಿನ ಖರ್ಚು ಮಾಡುವ ಹಣದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಒಂದು ದಿನಕ್ಕೆ ನಟಿಯು ಖರ್ಚು ಮಾಡುವ ಹಣದ ಬೆಲೆ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ. ಇದನ್ನೂ ಓದಿ:ಒಳಉಡುಪು ಧರಿಸದೆ ಬ್ಲೇಜರ್‌ನಲ್ಲಿ ಬೋಲ್ಡ್ ಪೋಸ್ ಕೊಟ್ಟ ‘ಅಖಂಡ’ ಚಿತ್ರದ ನಟಿ
ರಮೋಲ ಸದ್ಯ ‘ಭರ್ಜರಿ ಬ್ಯಾಚುಲರ್ಸ್ 2’ (Bharjari Bachelors 2) ಆ್ಯಕ್ಟೀವ್ ಆಗಿದ್ದಾರೆ. ಈ ಶೋನಲ್ಲಿ ಮೆಂಟರ್ ಆಗಿರುವ ಅಮೃತಾಗೆ ಅವರ ಒಂದು ದಿನದ ಖರ್ಚು ಎಷ್ಟು ಎಂದು ನಿರೂಪಕ ನಿರಂಜನ್ ಪ್ರಶ್ನೆ ಕೇಳಿದ್ದಾರೆ. ಆಗ ಅವರು ಒಂದು ದಿನಕ್ಕೆ 3000 ರೂ. ಖಾಲಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟಿ ಜೊತೆ ‘ಬಿಗ್ ಬಾಸ್’ ಕಿಶನ್ ಡ್ಯಾನ್ಸ್- ಬೆರಗಾದ ಫ್ಯಾನ್ಸ್
ಬಳಿಕ ‘ಬಿಗ್ ಬಾಸ್’ ಖ್ಯಾತಿಯ ಪವಿ ಪೂವಪ್ಪಗೆ ಎಷ್ಟು ಖರ್ಚು ಮಾಡ್ತೀರಾ? ಎಂದು ಕೇಳಲಾಗಿದೆ. ಅದಿಕ್ಕೆ, ಇದಿಕ್ಕೆ ಅಂತ ದಿನಕ್ಕೆ 1500 ರೂ. ಮೇಲೆ ಬೇಕು ಎಂದಿದ್ದಾರೆ. ಆ ನಂತರ ಇದೇ ಪ್ರಶ್ನೆಯನ್ನು ರಮೋಲಗೆ ಕೇಳಲಾಗಿದೆ. ಆಗ ಅವರು ದಿನಕ್ಕೆ 10,000 ರೂ. ಬೇಕು ಎಂದು ಹೇಳಿದ್ದಾರೆ. ಈ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ನಟಿಯ ಈ ವಿಡಿಯೋ ವೈರಲ್ ಆಗ್ತಿದೆ. ‘ನಿಮ್ಮ ಗಂಡ ಪುಣ್ಯವಂತ ಬಿಡಿ’ ಎಂದೆಲ್ಲಾ ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ.
ಅಂದಹಾಗೆ, ‘ಭರ್ಜರಿ ಬ್ಯಾಚುಲರ್ಸ್ 2’ನಲ್ಲಿ ರಕ್ಷಕ್ ಬುಲೆಟ್‌ಗೆ ರಮೋಲ ಮೆಂಟರ್ ಆಗಿದ್ದಾರೆ. ರವಿಚಂದ್ರನ್ ಮತ್ತು ರಚಿತಾ ರಾಮ್ ಕಾರ್ಯಕ್ರಮ ಜಡ್ಜ್ ಆಗಿದ್ದಾರೆ.