ನವದೆಹಲಿ: ವಿದೇಶಿ ಕರೆನ್ಸಿಯನ್ನಯನ್ನು ಲೆಹೆಂಗಾ ಗುಂಡಿಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದವನನ್ನು ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, 41 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ಬಂಧಿತ ಪ್ರಯಾಣಿಕ ಮಿಸಾಮ್ ರಾಝಾ ಎಂದು ಗುರುತಿಸಲಾಗಿದೆ. ಈತ ಸ್ಪೈಸ್‌ಜೆಟ್ ವಿಮಾನದಲ್ಲಿ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದನು. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ (ಸಿಐಎಸ್‌ಎಫ್) ಹಾಗೂ ವಿಮಾನ ನಿಲ್ದಾಣದಲ್ಲಿನ ಗುಪ್ತಚರ ಅಧಿಕಾರಿಗಳು ಟರ್ಮಿನಲ್-3ರಲ್ಲಿ ನಿಂತಿದ್ದ ಈ ವ್ಯಕ್ತಿಯ ವರ್ತನೆಯನ್ನು ಕಂಡು ಅನುಮಾನಗೊಂಡಿದ್ದಾರೆ. ಬಳಿಕ ಈತನ ಚಟುವಟಿಕೆಗಳನ್ನು ಗಮನಿಸಿದ್ದಾರೆ. ಅನುಮಾನದ ಮೇಲೆ ಆತನ ಲಗೇಜ್‌ಗಳನ್ನು ಪರಿಶೀಲಿಸಲಾಯಿತು. ಇದನ್ನೂ ಓದಿ: ನಿಮಗೆ ಅಧಿಕಾರದ ಅಮಲೇರಿದೆ: ಕೇಜ್ರಿವಾಲ್‍ಗೆ ಅಣ್ಣಾ ಹಜಾರೆ ಪತ್ರ
Advertisement
ಎಕ್ಸ್ರೇ ಮೂಲಕ ಲಗೇಜ್ ಬ್ಯಾಗ್ ಅನ್ನು ತಪಾಸಣೆ ನಡೆಸಿದಾಗ ದೊಡ್ಡ ಗಾತ್ರದ ಗುಂಡಿಗಳು ಪತ್ತೆಯಾಗಿದೆ. ಅದನ್ನು ಪರಿಶೀಲಿಸಿದಾಗ ಕರೆನ್ಸಿ ನೋಟುಗಳನ್ನೇ ಗುಂಡಿ ರೂಪದಲ್ಲಿಟ್ಟು ಸಾಗಿಸಲಾಗುತ್ತಿತ್ತು ಎಂಬುದು ಗೊತ್ತಾಗಿದೆ. ಬ್ಯಾಗ್‌ನಿಂದ ಹೊರತೆಗೆದಾಗ 1,85,500 ಸೌದಿ ರಿಯಾಲ್(41 ಲಕ್ಷ ರೂ.) ಲೆಹೆಂಗಾ ಬಟನ್‌ನಲ್ಲಿ ಇದ್ದದ್ದು ಕಂಡುಬಂದಿದೆ.
Advertisement
ಸಿಐಎಸ್‌ಎಫ್ ಸಿಬ್ಬಂದಿ ಕಸ್ಟಮ್ಸ್ ಕಚೇರಿಗೆ ಆತನನ್ನು ಕರೆತಂದಿದ್ದು, ತನಿಖೆ ಮುಂದುವರಿದಿದೆ.