ಬೆಂಗಳೂರು : ಶತ್ರುಗಳ ಸಂಹಾರ ಮತ್ತು ಅಧಿಕಾರಕ್ಕಾಗಿ ಡಿಕೆ ಶಿವಕುಮಾರ್ (DK Shivakumar) ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ ಅಂತ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ಡಿಕೆಶಿಯಿಂದ ಶತ್ರು ಸಂಹಾರ ಪೂಜೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರನ್ನು ದೇವರೇ ಕಾಪಾಡಬೇಕು. ಅಧಿಕಾರ ಬೇಕು ಅಂತ ಅಲ್ಲಿ ಎಲ್ಲೋ ಶತ್ರು ನಾಶಕ್ಕೆ ಹೋಗುವುದು. ಅಲ್ಲೂ ಕೂಡಾ ದೇವರನ್ನ ಕೇಳೋದು ಅಧಿಕಾರ ಕೊಡಪ್ಪ, ಶತ್ರು ನಾಶ ಮಾಡು ಅಂತಾನೆ ಅನ್ನೋ ಮೂಲಕ ಹೆಸರು ಹೇಳದೇ ಡಿಕೆಶಿವಕುಮಾರ್ ಶತ್ರು ಸಂಹಾರ ಪೂಜೆ ಮಾಡಿದ್ದಾರೆ ಅಂತ ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಹೆಚ್‌ಡಿಕೆ ಆರೋಪ
Advertisement
Advertisement
ಇದೇ ವೇಳೆ ವೈಕುಂಠ ಏಕಾದಶಿ ಶುಭಾಶಯ ಕೋರಿದ ಕುಮಾರಸ್ವಾಮಿ, ಇವತ್ತು ವೈಕುಂಠ ಏಕಾದಶಿ. ವೈಕುಂಠದ ಬಾಗಿಲು ತೆಗೆಯುತ್ತೆ ಅಂತ ಪ್ರತೀತಿ ಇದೆ. ದೇವರಲ್ಲಿ ಪ್ರಾರ್ಥನೆ ಮಾಡಿ ಒಳ್ಳೆದು ಮಾಡಲಿ ಕೊಡಪ್ಪ ಅಂತ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇವತ್ತು ಪವಿತ್ರವಾದ ದಿನ. ಅ ವಿಷ್ಣು ದೇಶ ಆಳುವವರಿಗೆ, ರಾಜ್ಯ ಆಳುವವರಿಗೆ ಎಲ್ಲರಿಗೂ ಸದ್ಬುದ್ದಿ ಕೊಟ್ಟು ಜನತೆಯ ಸಮಸ್ಯೆಗೆ ಒಳ್ಳೆಯ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.