– ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಿದ್ದ ಕಾರು
ವಾಷಿಂಗ್ಟನ್: ಇತ್ತೀಚೆಗೆ ಸೂರ್ಯಗ್ರಹಣದ ಬಗ್ಗೆ ಆತಂಕಗೊಂಡಿದ್ದ ಅಮೆರಿಕದ ಜೊತಿಷ್ಯ ಪ್ರಭಾವಿ ಮಹಿಳೆಯೊಬ್ಬಳು (Astrology Influencer) ತನ್ನ ಸಂಗಾತಿ, ಮಕ್ಕಳನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಸಂಗಾತಿಯನ್ನ ಇರಿದು ಕೊಂದಿರುವ ಮಹಿಳೆ ಬಳಿಕ ಚಲಿಸುತ್ತಿದ್ದ ಕಾರಿನಿಂದ ಹೊರಕ್ಕೆ ತಳ್ಳಿ ಮಕ್ಕಳನ್ನ ಕೊಂದಿದ್ದಾಳೆ. ನಂತರ ದೊಡ್ಡದೊಂದು ಮರಕ್ಕೆ ಕಾರನ್ನು ಗುದ್ದಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಘಟನೆಯು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ (Los Angeles) ನಡೆದಿದ್ದು, ಮಹಿಳೆಯನ್ನ ಡೇನಿಯಲ್ ಜಾನ್ಸನ್ ಎಂದು ಗುರುತಿಸಲಾಗಿದೆ.
Advertisement
Advertisement
ತನ್ನ ವೆಬ್‌ಸೈಟ್ಸ್‌ನಲ್ಲಿ ಅಂದು ರಾಶಿ-ಭವಿಷ್ಯ (Astrology) ಪ್ರಕಟಿಸಿ, ವಾಚನಗೋಷ್ಠಿಯನ್ನೂ ನೀಡಿದ್ದ ಡೇನಿಯಲ್ ಜಾನ್ಸನ್, ಈ ಬಾರಿಯ ಸಂಪೂರ್ಣ ಸೂರ್ಯಗ್ರಹಣವು ಆಧ್ಯಾತ್ಮಿಕ ಯುದ್ಧದ ಸಾರಾಂಶವಾಗಿದೆ ಎಂದು ಅನುಯಾಯಿಗಳಿಗೆ ಹೇಳಿದ್ದಳು. ಅಲ್ಲದೇ ನಿಮ್ಮ ರಕ್ಷಣೆಗೆ ಅಗತ್ಯ ಕ್ರಮ ವಹಿಸಿ, ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ. ಪ್ರಪಂಚವು ಇದೀಗ ಬಹಳ ಸ್ಪಷ್ಟವಾಗಿ ಬದಲಾಗುತ್ತಿದೆ. ನೀವು ಯಾವುದಾದರೂ ಒಂದು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ, ನಿಮ್ಮ ಜೀವನದಲ್ಲಿ ಸರಿಯಾದ ಆಯ್ಕೆ ಮಾಡಿಕೊಳ್ಳುವ ಕಾಲ ಈಗ ಬಂದಿದೆ ಎಂದು ಸಹ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಳು.
Advertisement
ಗ್ರಹಣ ಸಂಭವಿಸುವ ದಿನ ಮುಂಜಾನೆ ತನ್ನ ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಹಿಳೆ ತನ್ನ ಸಂಗಾತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಬಳಿಕ ಮಕ್ಕಳನ್ನ ಕಾರಿನಿಂದ ಹೊರಕ್ಕೆ ತಳ್ಳಿ ಹತ್ಯೆಗೈದಿದ್ದಾಳೆ. ಬಳಿಕ ಗಂಟೆಗೆ 160 ಕಿಮೀ ವೇಗದಲ್ಲಿ ಕಾರು ಓಡಿಸಿ ದೊಡ್ಡ ಮರಕ್ಕೆ ಡಿಕ್ಕಿ ಹೊಡೆದು ತಾನೂ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ.
Advertisement
ಆಕೆಯ ಒಂದು ಮಗುವಿಗೆ 8 ತಿಂಗಳು ವಯಸ್ಸಾಗಿದ್ದರೆ, ಮತ್ತೊಂದು ಮಗುವಿಗೆ 9 ವರ್ಷ ವಯಸ್ಸು, ಆಕೆಯ ಪತಿ ಅಮೆರಿಕದ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಎಲ್ಲೆಲ್ಲಿ ಗ್ರಹಣ ಗೋಚರ?
ವರ್ಷದ ಮೊದಲ ಸೂರ್ಯಗ್ರಹಣವು ಸೋಮವಾರ (ಏ.8) ಗೋಚರವಾಗಿತ್ತು. ಮೆಕ್ಸಿಕೊ, ಕೆನಡಾ ಹಾಗೂ ಅಮೆರಿಕದಂತಹ ದೇಶಗಳಲ್ಲಿ ಸೂರ್ಯಗ್ರಹಣ (Solar Eclipse) ಗೋಚರವಾಗಿದೆ. ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವಮೊರ್ಂಟ್, ನ್ಯೂ ಹ್ಯಾಂಪ್‍ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಿತ್ತು. ಅಮೆರಿಕದ ಲಾಸ್ ಏಂಜಲೀಸ್‌ನಲ್ಲೂ ಭಾಗಶಃ ಗ್ರಹಣ ಗೋಚರವಾಗಿತ್ತು. ಇನ್ನೂ 2044ರ ವರೆಗೆ ಅಮೆರಿಕದಲ್ಲಿ ಸೂರ್ಯಗ್ರಹಣ ಗೋಚರ ಆಗುವುದಿಲ್ಲ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.