ಬಳ್ಳಾರಿ: ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ತೊಗರಿಬೇಳೆ ಪಾಕೆಟ್ ನಲ್ಲಿ ಹುಳು ಪತ್ತೆಯಾಗಿದ್ದು ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ.
ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಖಾನಾ ಹೊಸಹಳ್ಳಿ ಗ್ರಾಮದಲ್ಲಿ ಪಡಿತರ ವಿತರಣೆ ಮಾಡಲಾಗಿದೆ. ಆದರೆ ಇಲ್ಲಿ ನೀಡಲಾದ ತೊಗರಿ ಬೇಳೆ ಪಾಕೆಟ್ ನಲ್ಲಿ ಹುಳು ಪತ್ತೆಯಾಗಿದೆ. ಹೊಸಹಳ್ಳಿ ನಿವಾಸಿ ಬಸವರಾಜ್ ಎನ್ನುವವರು ಪಡಿತರ ಖರೀದಿ ವೇಳೆ ತೊಗರಿಬೇಳೆ ಪಾಕೆಟ್ ನಲ್ಲಿ ಹುಳು ಕಾಣಿಸಿಕೊಂಡಿದೆ.
Advertisement
ಖಾನಾ ಹೊಸಹಳ್ಳಿ ಮುಖ್ಯರಸ್ತೆಯಲ್ಲಿರುವ 8ನೇ ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ತೊಗರಿಬೇಳೆ ಪಾಕೆಟ್ ನಲ್ಲಿ ಈ ರೀತಿಯ ಹುಳಗಳು ಹುಳಗಳು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿವೆ. ಹೀಗೆ ಹುಳು ಪತ್ತೆಯಾಗಿರುವುದನ್ನು ವಿಡಿಯೋ ಮಾಡಿದ ಗ್ರಾಮಸ್ಥರು ಅನ್ನಭಾಗ್ಯದ ಅವಾಂತರವನ್ನು ಬಯಲಿಗೆ ಎಳೆದಿದ್ದಾರೆ. ಹೀಗೆ ತಿನ್ನುವ ಆಹಾರದಲ್ಲಿ ಹುಳುಗಳು ಪತ್ತೆಯಾದರೆ ತಿನ್ನುವುದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
Advertisement
ಮಾಜಿ ಸಿಎಂ ಸಿದ್ದರಾಮಯ್ಯರ ಅನ್ನಭಾಗ್ಯ ಯೋಜನೆ ಅಕ್ಕಿ ಸಾಕಷ್ಟು ಬಡವರಿಗೆ ಅನೂಕೂಲವಾಗಿದೆ. ಆದ್ರೆ ಅನ್ನಭಾಗ್ಯ ಯೋಜನೆ ಇದೀಗ ಹುಳುಗಳ ಭಾಗ್ಯ ಎನ್ನುವಂತಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ನೀಡುವ ಈ ಆಹಾರ ಧಾನ್ಯಗಳಲ್ಲಿ ಈಗ ಹುಳುಗಳದ್ದೇ ಸಾಮ್ರಾಜ್ಯ ಎನ್ನುವಂತಾಗಿದೆ. ಇನ್ನಾದರೂ ಆಹಾರ ಇಲಾಖೆ ಎಚ್ಚತ್ತುಕೊಂಡು ಈ ಕಡೆಗೆ ಗಮನ ನೀಡಬೇಕಿದೆ.