ಲಾಕ್‍ಡೌನ್‍ನಿಂದಾಗಿ ಜನಸಂಖ್ಯಾ ಸ್ಫೋಟ – 70 ಲಕ್ಷ ಗರ್ಭಿಣಿಯರು ಸೃಷ್ಟಿ

Public TV
1 Min Read
SUMMER PREGNANR

ನ್ಯೂಯಾರ್ಕ್: ಮಹಾಮಾರಿ ಕೋವಿಡ್ 19 ತಡೆಗಟ್ಟಲು ಹಲವು ದೇಶಗಳಲ್ಲಿ ಲಾಕ್‍ಡೌನ್ ಜಾರಿಯಾದ ಪರಿಣಾಮ ವಿಶ್ವಾದ್ಯಂತ 70 ಲಕ್ಷ ಗರ್ಭಿಣಿಯರು ಸೃಷ್ಟಿಯಾಗಲಿದ್ದಾರೆ ಎಂದು ವಿಶ್ವಸಂಸ್ಥೆಯ ಅಧ್ಯಯನ ತಿಳಿಸಿದೆ.

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ(ಯುಎನ್‍ಎಫ್‍ಪಿಎ) ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯಾದ ವಿಕ್ಟೋರಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಅಧ್ಯಯನ ನಡೆಸಿದೆ. ಲಾಕ್‍ಡೌನ್‍ನಿಂದಾಗಿ ಆಧುನಿಕ ಗರ್ಭ ನಿರೋಧಕಗಳು ಸರಿಯಾದ ಸಮಯಕ್ಕೆ ಸಿಗದ ಪರಿಣಾಮ ಮಹಿಳೆಯರು ಇಚ್ಛೆ ಇಲ್ಲದಿದ್ದರೂ ಗರ್ಭವತಿಯಾಗಲಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

Condom 1

ಬಡ ಮತ್ತು ಮಧ್ಯಮ ವರ್ಗದ ಸುಮಾರು 4.7 ಕೋಟಿ ಮಹಿಳೆಯರಿಗೆ ಗರ್ಭ ನಿರೋಧಕ ಬಳಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ 70 ಲಕ್ಷ ಗರ್ಭಿಣಿಯರು ಸೃಷ್ಟಿಯಾಗಲಿದ್ದಾರೆ ಎಂದು ಅಧ್ಯಯನ ಹೇಳಿದೆ.

ಲಾಕ್ ಡೌನ್ ಬಿಕ್ಕಟ್ಟಿನಿಂದಾಗಿ ಮಹಿಳೆಯರು ಕುಟುಂಬ ಯೋಜನೆ ಪಾಲಿಸಲು ಸಾಧ್ಯವಾಗುತ್ತಿಲ್ಲ. ಜನಸಂಖ್ಯಾ ಸ್ಫೋಟದಿಂದಾಗಿ ಮುಂದಿನ 10 ವರ್ಷದಲ್ಲಿ 2 ಲಕ್ಷ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಬಹುದು ಎಂದು ಅಂದಾಜಿಸಿದೆ.  ಇದನ್ನೂ ಓದಿ: ಜಾಗತಿಕ ಕೊರತೆ – ಕಾಂಡೋಮ್ ಕಾರ್ಖಾನೆಯ ನೌಕರರನ್ನು ‘ಅಗತ್ಯ ಸೇವೆ’ ಪಟ್ಟಿಗೆ ಸೇರ್ಪಡೆ

Condom Factory

ಯುಎನ್‍ಎಫ್‍ಪಿಎ ಕಾರ್ಯಕಾರಿ ನಿರ್ದೇಶಕಿ ನಟಾಲಿಯಾ ಕನೇಮ್ ಪ್ರತಿಕ್ರಿಯಿಸಿ, ಈ ಅವಧಿಯಲ್ಲಿ ಲಕ್ಷಾಂತರ ಮಹಿಳೆಯರು ಕೌಟುಂಬಿಕ ದೌರ್ಜನ್ಯ, ಲೈಂಗಿಕ ಹಿಂಸಾಚಾರ ಮತ್ತು ಇತರ ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಲಕ್ಷಾಂತರ ಮಹಿಳೆಯರು ಮತ್ತು ಯುವತಿಯರ ಆರೋಗ್ಯ ಮತ್ತು ದೇಹದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗರ್ಭಿಣಿ ವೈದ್ಯೆಯನ್ನ ತಡರಾತ್ರಿ ಮನೆಯಿಂದ ಹೊರ ಹಾಕಿದ ಟೆಕ್ಕಿ ಪತಿ

 

Share This Article