ಬೀಜಿಂಗ್: ಸದಾ ಬ್ಯುಸಿಯಾಗಿ ವಾಹನಗಳು ಒಡಾಡುವ ಹೈವೇಯೊಂದರಲ್ಲಿ ಚಾಲಕನೊಬ್ಬ ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿರುವ ಘಟನೆ ಚೀನಾದ ಶಾಂಗ್ ಹೈವಿಸ್ಟ್ ಹೈವೇನಲ್ಲಿ ನಡೆದಿದೆ.
ಸದ್ಯ ಈ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣ ವರ್ಲ್ಡ್ ವರ್ಸ್ಟ್ ಡ್ರೈವರ್ ಎಂಬ ಹಣೆ ಪಟ್ಟಿ ಹೊಂದಿಗೆ ವೈರಲ್ ಆಗಿದೆ. ಈ ಘಟನೆ ಏಪ್ರಿಲ್ 10 ರಂದು ನಡೆದಿದ್ದು, ವೇಗವಾಗಿ ವಾಹನಗಳು ಚಾಲಿಸುತ್ತಿದ್ದ ವೇಳೆ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿ ನಡುರಸ್ತೆಯಲ್ಲೇ ಕಾರು ನಿಲ್ಲಿಸಿದ್ದಾನೆ. ಈ ವೇಳೆ ಕಾರಿನ ಹಿಂದೆ ಬರುತ್ತಿದ್ದ ಕಂಟೈನರ್ ಲಾರಿ ಚಾಲಕ ಕಾರಿನೊಂದಿಗೆ ಅಪಘಾತ ತಪ್ಪಿಸಲು ಯತ್ನಿಸಿದ್ದಾನೆ. ಪರಿಣಾಮವಾಗಿ ಕಂಟೈನರ್ ಲಾರಿ ಪಲ್ಟಿಯಾಗಿದೆ. ಕಂಟೈನರ್ ಪಲ್ಟಿಯಾಗುತ್ತಿದ್ದಂತೆ ಮತ್ತೊಬ್ಬ ಲಾರಿ ಚಾಲಕ ಮುನ್ನೆಚ್ಚರಿಕೆ ವಹಿಸಿ ತನ್ನ ವಾಹನ ನಿಲ್ಲಿಸಿದ್ದಾನೆ. ಬಳಿಕ ಕಾರು ಚಾಲಕ ಹೈವೇಯ ಮತ್ತೊಂದು ದಾರಿ ಬಳಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ 2.2 ಲಕ್ಷ ಬಾರಿ ಜನರು ನೋಡಿದ್ದು, 3 ಸಾವಿರ ಜನರು ವಿಡಿಯೋವನ್ನು ಶೇರ್ ಮಾಡಿದ್ದಾರೆ. 4,200 ಮಂದಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಕಾರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.facebook.com/shanghaiist/videos/10156824030896030/