ಜೈಪುರ: ವಿಶ್ವದಲ್ಲೇ ಅತೀ ಎತ್ತರದ ಶಿವನ ಪ್ರತಿಮೆ (Lord ShivaStatue) `ವಿಶ್ವಾಸ್ ಸ್ವರೂಪಂ’ (Viswas Swaroopam) ರಾಜಸ್ಥಾನದ (Rajasthan) ರಾಜ್‌ಸಮಂದ್ ಜಿಲ್ಲೆಯಲ್ಲಿ ಅನಾವರಣಗೊಂಡಿದೆ.
#LordShiva Statue: 30,000 tonne weight, #369feet height, #tallestidol of Mahadev to be launched today in #Rajsamand in #Rajasthan#Rajasthantourism#statueofbelief pic.twitter.com/3wcjDwoiiN
— V V Ramana (@vvramans) October 29, 2022
Advertisement
ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿ ಸ್ಥಾಪಿಸಲಾದ 369 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಗುಜರಾತ್‌ನ ಆಧ್ಯಾತ್ಮಿಕ ನಾಯಕ ಮತ್ತು ಧರ್ಮ ಪ್ರಚಾರಕ ಮೊರಾರಿ ಬಾಪು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹಾಗೂ ವಿಧಾನಸಭಾ ಸಭಾಪತಿ ಸಿ.ಪಿ ಜೋಶಿ ಅನಾವರಣಗೊಳಿಸಿದ್ದು, ಬಳಿಕ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ. ಇದನ್ನೂ ಓದಿ: ಸತತ ಸೋಲಿನ ರುಚಿ – ಭಾರತದ ಗೆಲುವಿಗಾಗಿ ಪಾಕ್ ತಂಡ ಪ್ರಾರ್ಥನೆ
Advertisement
Advertisement
ಪ್ರತಿಮೆ (Statue) ಉದ್ಘಾಟನೆಗೊಂಡ ನಂತರ ರಾಜ್ಯದಲ್ಲಿ ಒಂಭತ್ತು ದಿನಗಳ ಕಾಲ ಅಂದರೆ ಅಕ್ಟೋಬರ್ 29 ರಿಂದ ನವೆಂಬರ್ 6ರ ವರೆಗೆ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸಂಸ್ಥಾನದ ಟ್ರಸ್ಟಿ ಹಾಗೂ ಮೀರಜ್ ಗ್ರೂಪ್ ಅಧ್ಯಕ್ಷ ಮದನ್ ಪಲಿವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ: ಕನ್ನಡದಲ್ಲಿಯೇ ಕೇಜ್ರಿವಾಲ್ ಟ್ವೀಟ್
Advertisement
ಏನಿದರ ವಿಶೇಷತೆ?
ರಾಜಸ್ಥಾನದ (Rajasthan) ಉದಯಪುರದಿಂದ 45 ಕಿಮೀ ದೂರದಲ್ಲಿ ವಿಶಾಲ ವಾತಾವರಣದಲ್ಲಿ ನಿರ್ಮಾಣಗೊಂಡಿರುವ 369 ಅಡಿ ಎತ್ತರದ ಶಿವನ (Lord Shiva) ಪ್ರತಿಮೆಯು ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುತ್ತದೆ. ಧ್ಯಾನ ಭಂಗಿಯಲ್ಲಿರುವ ಈ ಪ್ರತಿಮೆ ಸುಮಾರು 20 ಕಿಮೀ ದೂರದಿಂದಲೂ ವೀಕ್ಷಿಸಬಹುದು. `ವಿಶ್ವಾಸ್ ಸ್ವರೂಪಂ’ (Viswas Swaroopam) ವಿಶ್ವದ ಅತೀ ಎತ್ತರದ ಶಿವನ ಪ್ರತಿಮೆಯಾಗಿದ್ದು, ಭಕ್ತರಿಗೆ ನಾಲ್ಕು ವಿಭಾಗದಲ್ಲಿ ಲಿಫ್ಟ್ ಹಾಗೂ ಮೂರು ವಿಭಾಗದಲ್ಲಿ ಮೆಟ್ಟಿಲು ವ್ಯವಸ್ಥೆಯನ್ನೂ ಮಾಡಲಾಗಿದೆ.
10 ವರ್ಷಗಳ ಬಳಿಕ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2012ರ ಆಗಸ್ಟ್ನಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ಮೊರಾರಿ ಬಾಪು ಅವರ ಸಮ್ಮುಖದಲ್ಲಿ ಯೋಜನೆಗೆ ಅಡಿಪಾಯ ಹಾಕಲಾಗಿತ್ತು. ಇದರ ನಿರ್ಮಾಣಕ್ಕೆ 3 ಸಾವಿರ ಟನ್ ಉಕ್ಕು ಮತ್ತು ಕಬ್ಬಿಣ, 2.5 ಲಕ್ಷ ಕ್ಯೂಬಿಕ್ ಟನ್ ಮರಳು ಬಳಸಲಾಗಿದೆ. ತಾಮ್ರದ ಬಣ್ಣ, ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಜಿಂಕ್ ಮಿಶ್ರಲೋಹ ಲೇಪಿಸಲಾಗಿದೆ. ಮುಂದಿನ 250 ವರ್ಷಗಳ ಕಾಲ ಬಾಳಿಕ ಬರುವಂತೆ ನಿರ್ಮಿಸಿದ್ದು, ಇದು 250 ಕಿಮೀ ವೇಗದಲ್ಲಿ ಬೀಸುವ ಗಾಳಿಯನ್ನೂ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.