ಜಕಾರ್ತಾ: ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಇಂಡೋನೇಷ್ಯಾದ 146 ವರ್ಷದ ಹಿರಿಯಜ್ಜ ವಯೋ ಸಹಜ ಸಮಸ್ಯೆಯಿಂದ ನಿಧನರಾಗಿದ್ದಾರೆ.
Advertisement
ಇಂಡೋನೇಷ್ಯಾದ ಸಪರ್ಮಾನ್ ಸೋಡಿಮೆಜೋ ಅಲಿಯಾಸ್ ಎಮ್‍ಬಾ ಘೋಟೋ ಎಂಬ ಹೆಸರಿನ ಹಿರಿಯಜ್ಜ ಕಳೆದ ತಿಂಗಳಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ರು. ಆಸ್ಪತ್ರೆಯಲ್ಲಿ ಸಂಪೂರ್ಣ ಚಿಕಿತ್ಸೆ ಪಡೆದ ಬಳಿಕ ಮರಳಿ ಮನೆ ಸೇರಿದ್ರು. ಆದ್ರೆ ಘೋಟೋ ಮೇ 1ರಂದು ಇಹಲೋಕ ತ್ಯಜಿಸಿದ್ದಾರೆ.
Advertisement
ಘೋಟೋ ಅವರ ಬಳಿ ಇಂಡೋನೇಷ್ಯಾದ ಒಂದು ಐಡಿ ಕಾರ್ಡ್ ಇದ್ದು, ಇದರಲ್ಲಿ ಅವರ ಜನ್ಮದಿನಾಂಕ ಡಿಸೆಂಬರ್ 31, 1870 ಎಂದು ನಮೂದಿಸಲಾಗಿದೆ. ಆದ್ರೆ ಇವರ ಜನ್ಮದಿನಾಂಕವನ್ನು ಪ್ರತ್ಯೇಕವಾಗಿ ಪರಿಶೀಲಿಸದ ಕಾರಣ ಅಧಿಕೃತವಾಗಿ ಇವರ ಹೆಸರನ್ನ ಅತ್ಯಂತ ಹಿರಿಯ ವ್ಯಕ್ತಿ ಎಂದು ಪಟ್ಟಿ ಮಾಡಲಾಗುತ್ತದಾ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ.
Advertisement
Advertisement
ಘೋಟೋ ಅವರ ಸುದೀರ್ಘ ಜೀವನದ ಬಗ್ಗೆ ಕಳೆದ ವರ್ಷ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು, ತಾಳ್ಮೆ ನನ್ನನ್ನು ಇಷ್ಟು ವರ್ಷ ಬದುಕುವಂತೆ ಮಾಡಿದೆ. ನನ್ನನ್ನು ಪ್ರೀತಿಸುವ ಜನರು ನನ್ನನ್ನು ನೋಡಿಕೊಳ್ಳುತ್ತಿರೋದ್ರಿಂದ ಸುದೀರ್ಘ ಜೀವನ ನಡೆಸುತ್ತಿದ್ದೇನೆ ಎಂದಿದ್ದರು.
ಸಾಕಷ್ಟು ವರ್ಷಗಳ ಜೀವನಾನುಭವದಿಂದ ಘೋಟೋ ಕಥೆಗಳನ್ನ ಹೇಳೋದ್ರಲ್ಲಿ ತಮ್ಮ ಹಳ್ಳಿಯಲ್ಲಿ ತುಂಬಾ ಹೆಸರುವಾಸಿಯಾಗಿದ್ರು. ಘೋಟೋ ಅವರು 10 ಸಹೋದರರು ಹಾಗೂ ನಾಲ್ವರು ಹೆಂಡತಿಯರು ಈ ಹಿಂದೆಯೇ ಮೃತಪಟ್ಟಿದ್ದರು. ಅಲ್ಲದೆ ಘೋಟೋ ಅವರ ಎಲ್ಲಾ ಮಕ್ಕಳೂ ಕೂಡ ಈ ಹಿಂದೆಯೇ ಸಾವನ್ನಪ್ಪಿದ್ದಾರೆ.
ಘೋಟೋ ಸೆಂಟ್ರಲ್ ಜಾವಾದ, ಸೆರಗಿಯನ್ ಜಿಲ್ಲೆಯ ತನ್ನ ಗ್ರಾಮದಲ್ಲಿ ಸಾವನ್ನಪ್ಪಿದ್ದು, ಇಂದು ಅಂತ್ಯಸಂಸ್ಕಾರ ನಡೆದಿದೆ.
ಅನಧಿಕೃತ ದಾಖಲೆಗಳ ಪ್ರಕಾರ ಘೋಟೋ ಅವರಿಗಿಂತ ಹಿರಿಯರಾದ ವ್ಯಕ್ತಿಗಳೂ ಇದ್ದಾರೆ. ನೈಜೀರಿಯಾದ ಜೇಮ್ಸ್ ಒಲೊಫಿಂಟುಯಿ ಅವರಿಗೆ 171ವರ್ಷ ಹಾಗೂ ಇಥಿಯೋಪಿಯಾದ ದಖಾಬೂ ಎಬ್ಬಾ ಅವರಿಗೆ 163 ವರ್ಷ ವಯಸ್ಸು ಎಂದು ವರದಿಯಾಗಿದೆ. ಆದ್ರೆ ಅಧಿಕೃತವಾಗಿ ಇವರ ಜನ್ಮದಿನಾಂಕದ ಪರಿಶೀಲನೆಯಾಗಿಲ್ಲ.