ವಾಷಿಂಗ್ಟನ್: ಜೀನ್ಸ್ ಪ್ಯಾಂಟ್ (Jeans Pant) ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ. ಇಂದಿನ ಯುವಕ-ಯುವತಿಯರಿಗೆ ಟ್ರೆಂಡಿಯಾದ ಜೀನ್ಸ್ ಧರಿಸೋದು ಗೀಳಾಗಿಬಿಟ್ಟಿದೆ. ಅದಕ್ಕಾಗಿ ಸಾವಿರಾರು ರೂ.ಗಳನ್ನ ಕೊಟ್ಟು ಖರೀದಿಸುತ್ತಾರೆ. ಆದ್ರೆ ವಿಶ್ವದ ಹಳೆಯ ಜೀನ್ಸ್ಪ್ಯಾಂಟ್ವೊಂದನ್ನು ಲಕ್ಷ ಲಕ್ಷ ಕೊಟ್ಟು ಖರೀದಿರುವ ಅಚ್ಚರಿ ವಿಷಯ ಬೆಳಕಿಗೆ ಬಂದಿದೆ.
Advertisement
ಹೌದು. ಶತಮಾನಗಳಿಂದಲೂ, ಲೆಕ್ಕವಿಲ್ಲದಷ್ಟು ಪ್ರಸಿದ್ಧ ಕಲಾಕೃತಿಗಳನ್ನು ತಜ್ಞರು ಕಂಡುಹಿಡಿದಿದ್ದಾರೆ. ಅವು ಹಿಂದಿನ ಯುಗದ ನೋಟವನ್ನು ತೆರೆದಿಡುತ್ತವೆ. ವರ್ಷ ಕಳೆದಂತೆ ಐತಿಹಾಸಿಕ ಕಲಾಕೃತಿಗಳ ಮೌಲ್ಯ ಹೆಚ್ಚಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಹಾಗೆಯೇ 1857ರಲ್ಲಿ ಉತ್ತರ ಕೆರೊಲಿನಾದ ಕರಾವಳಿಯಲ್ಲಿ ಸಂಭವಿಸಿದ ಹಡಗು ದುರಂತದಲ್ಲಿ ಕಳೆದುಹೋಗಿದ್ದ ಜೀನ್ಸ್ಪ್ಯಾಂಟ್ವೊಂದು (Jeans Pant) ಪತ್ತೆಯಾಗಿದೆ. ಇದನ್ನು ವಿಶ್ವದ ಹಳೆಯ ಜೀನ್ಸ್ಪ್ಯಾಂಟ್ ಎಂದು ಗುರುತಿಸಲಾಗಿದ್ದು, 94 ಲಕ್ಷ ರೂ.ಗಳಿಗೆ (1,14,000 US Dollars) ಮಾರಾಟ ಮಾಡಲಾಗಿದೆ. ಇದನ್ನೂ ಓದಿ: ಸಂವಿಧಾನ ಉಳಿಸಲು ಮೋದಿ ಹತ್ಯೆ ಮಾಡಿ – ಕಾಂಗ್ರೆಸ್ ಮಾಜಿ ಸಚಿವ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ
Advertisement
Advertisement
1857ರ ಸೆಪ್ಟೆಂಬರ್ನಲ್ಲಿ 425 ಜನರಿದ್ದ ಶಿಪ್ ಆಫ್ ಗೋಲ್ಡ್ ಹಡಗು ಪನಾಮದಿಂದ ನ್ಯೂಯಾರ್ಕ್ಗೆ ಪ್ರಯಾಣಿಸುತ್ತಿದ್ದ ವೇಳೆ ಚಂಡಮಾರುತಕ್ಕೆ ಸಿಕ್ಕಿ ಮುಳುಗಿತ್ತು. ಈ ವೇಳೆ ಹಡಗಿನಲ್ಲೇ ಸಿಲುಕಿದ್ದ ಟ್ರಂಕ್ವೊಂದರಲ್ಲಿ ಹಳೆಯ ಜೀನ್ಸ್ಪ್ಯಾಂಟ್ ಇದ್ದಿದ್ದನ್ನು ಎಸ್ಎಸ್ ಸೆಂಟ್ರಲ್ ಅಮೆರಿಕಾ ಪತ್ತೆಮಾಡಿದೆ. ಒರೆಗಾನ್ನ ಮೆಕ್ಸಿಕನ್-ಅಮೆರಿಕ ಯುದ್ಧದ (Mexican-American War) ಅನುಭವಿ ಜಾನ್ ಡಿಮೆಂಟ್ಗೆ ಸೇರಿದ್ದ ಟ್ರಂಕ್ನಲ್ಲಿ ಪ್ಯಾಂಟ್ ಪತ್ತೆಯಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಚಿವ ದೇಶ್ಮುಖ್ ಜಾಮೀನು ನೀಡಿ ಕೆಲ ಹೊತ್ತಲ್ಲೇ ತಡೆ ಹಿಡಿದ ಬಾಂಬೆ ಕೋರ್ಟ್
Advertisement
ಕಳೆದ ವಾರ ಕೆನಡಾದ ರೆನೋವಾದಲ್ಲಿ 270 ಗೋಲ್ಡ್ ರಶ್-ಯುಗದ ಕಲಾಕೃತಿಗಳೊಂದಿಗೆ ಪ್ರದರ್ಶಿಸಲಾಗಿತ್ತು. ವಿಶ್ವದ ಜನಪ್ರಿಯ ಜೀನ್ಸ್ ತಯಾರಕರಲ್ಲಿ ಒಬ್ಬರಾದ ಲೆವಿಸ್ಟ್ರಾಸ್ ಈ ಪ್ಯಾಂಟ್ ಅನ್ನು ತಯಾರಿಸಿದ್ದಾರೆ ಎನ್ನಲಾಗಿದೆ. ಆದ್ರೆ ಈ ಪ್ಯಾಂಟ್ ಲೆವಿಗಿಂತಲೂ 16 ವರ್ಷ ಹಳೆಯದ್ದಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಲೆವಿಸ್ಟ್ರಾಸ್ 1873 ರಲ್ಲಿ ಮೊದಲಿಗೆ ಪ್ಯಾಂಟ್ ಸಿದ್ಧಮಾಡಿದ್ದರು ಎಂದು ವರದಿಗಳು ಹೇಳಿವೆ.