ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಜಾನ್ಸ್ ಟಿನ್ನಿಸ್‌ವುಡ್ 112ನೇ ವಯಸ್ಸಿನಲ್ಲಿ ನಿಧನ

Public TV
2 Min Read
John Tinniswood

– ಟೈಟಾನಿಕ್ ಹಡಗು ಮುಳುಗಿದ ಸಂದರ್ಭದಲ್ಲಿ ಜನಿಸಿದ್ದ ವ್ಯಕ್ತಿ

ಲಂಡನ್: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಜಾನ್ ಟಿನ್ನಿಸ್‌ವುಡ್ (John Tinniswood) 112ನೇ ವಯಸ್ಸಿನಲ್ಲಿ ನ.24 ರಂದು ನಿಧನರಾಗಿದ್ದಾರೆ.

ಜಾನ್ ಟಿನ್ನಿಸ್‌ವುಡ್ ಅವರು ವಾಯುವ್ಯ ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನಲ್ಲಿ ವಾಸಿಸುತ್ತಿದ್ದ ಕೇರ್ ಹೋಮ್‌ನಲ್ಲಿ ಸೋಮವಾರ ನಿಧನ ಹೊಂದಿದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.ಇದನ್ನೂ ಓದಿ: ಇಡೀ ರಾತ್ರಿ ಪ್ರೇಯಸಿ ಶವದ ಜೊತೆ ಕುಳಿತು ಸಿಗರೇಟ್ ಸೇದಿದ್ದ ಹಂತಕ

1912ರಲ್ಲಿ ಟೈನಾನಿಕ್ ಹಡಗು ಮುಳುಗಿದ ಸಂದರ್ಭದಲ್ಲಿ ಜನಿಸಿದ್ದ ಇವರು, ಕಳೆದ ವರ್ಷ ಏಪ್ರಿಲ್‌ನಲ್ಲಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯೆಂದು ಗುರುತಿಸಿಕೊಳ್ಳುವ ಮೂಲಕ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದರು. 114 ವರ್ಷದ ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಅವರ ಮರಣದ ನಂತರ ಟಿನ್ನಿಸ್‌ವುಡ್ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾದರು.

ಈ ಕುರಿತು ಮಾಹಿತಿ ಹಂಚಿಕೊಂಡ ಅವರ ಕುಟುಂಬಸ್ಥರು, ಟಿನ್ನಿಸ್‌ವುಡ್ ದಿನನಿತ್ಯ ವ್ಯಾಯಾಮ ಮಾಡುವುದರ ಜೊತೆಗೆ ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ತಿನ್ನುತ್ತಿದ್ದರು. ಕೊನೆಯ ದಿನಗಳಲ್ಲಿ ಅವರು ಹೆಚ್ಚಾಗಿ ಸಂಗೀತ ಆಲಿಸುತ್ತಿದ್ದರು ಹಾಗೂ ಎಲ್ಲರನ್ನು ತುಂಬಾ ಪ್ರೀತಿಯಿಂದ ನೋಡುತ್ತಿದ್ದರು.

ಟೈಟಾನಿಕ್ ಹಡಗು ಮುಳುಗಿದ ಸಂದರ್ಭದಲ್ಲಿ ಟಿನ್ನಿಸ್‌ವುಡ್ ಜನಿಸಿದ್ದರು. ಎರಡು ವಿಶ್ವ ಮಹಾಯುದ್ಧಗಳನ್ನು ಹಾಗೂ ಎರಡು ಸಾಂಕ್ರಾಮಿಕ ರೋಗಗಳ ಯುಗವನ್ನು ಕಂಡು 112 ವರ್ಷಗಳ ಕಾಲ ಬದುಕಿರುವುದು ಅವರ ಅದೃಷ್ಟವಾಗಿತ್ತು ಎಂದರು.

ಇನ್ನೂ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಟಿನ್ನಿಸ್‌ವುಡ್ ರಾಯಲ್ ಆರ್ಮಿ ಪೇ ಕಾರ್ಪ್ಸ್‌ನಲ್ಲಿ ಆಡಳಿತಾತ್ಮಕ ಪಾತ್ರವನ್ನು ನಿರ್ವಹಿಸಿದರು. ಜೊತೆಗೆ ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್‌ನ ಬೆಂಬಲಿಗರಾಗಿದ್ದರು.

ಪ್ರಸ್ತುತ ವಿಶ್ವದ ಅತ್ಯಂತ ಹಿರಿಯ ಮಹಿಳೆಯಾಗಿ 116 ವರ್ಷದ ಜಪಾನ್‌ನ ಟೊಮಿಕೊ ಇಟೂಕಾ ಗುರುತಿಸಿಕೊಂಡಿದ್ದಾರೆ.ಇದನ್ನೂ ಓದಿ: ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗೆ ಶಾಕ್‌ – ಬಜರಂಗ್‌ ಪುನಿಯಾ 4 ವರ್ಷ ಬ್ಯಾನ್‌

Share This Article