ವಾಷಿಂಗ್ಟನ್: ವಿಶ್ವದ ಅತ್ಯಂತ ಹಿರಿಯ ಶ್ವಾನ ಎಂದೇ ಹೆಸರಾಗಿ ಗಿನ್ನಿಸ್ ರೆಕಾರ್ಡ್ (Guinness World Record) ಬರೆದಿದ್ದ ಪೆಬ್ಲೆಸ್ (23) ದಕ್ಷಿಣ ಕೆರೊಲಿನಾ ಟೇಲರ್ಸ್‌ನಲ್ಲಿ ಸಾವನ್ನಪ್ಪಿದೆ.
ಅಮೆರಿಕದ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿ ಮಾರ್ಚ್ 28, 2000 ರಂದು ಪೆಬಲ್ಸ್ ಜನಿಸಿತ್ತು. ಮಾಲೀಕರಾದ ಬಾಬಿ ಮತ್ತು ಜೂಲಿ ಗ್ರೆಗೊರಿ ಅವರ ಸಾಕು ಪ್ರಾಣಿಯಾಗಿತ್ತು. ಇದನ್ನೂ ಓದಿ: ಥಾಯ್ಲೆಂಡ್ ಡೇ ಕೇರ್ ಸೆಂಟರ್‌ನಲ್ಲಿ ಮಕ್ಕಳ ಮಾರಣಹೋಮ – 34 ಮಂದಿಯನ್ನು ಹತ್ಯೆಗೈದ ಪಾಪಿ
- Advertisement -
We've sadly said goodbye to Pebbles, who was the oldest dog in the world ????️https://t.co/p19HYvH73i
— Guinness World Records (@GWR) October 5, 2022
- Advertisement -
ಗ್ರೆಗೊರಿ ಪ್ರಕಾರ, ಪೆಬ್ಲೆಸ್ (Pebbles) ಸಂತೋಷದಾಯಕ ಮತ್ತು ದೀರ್ಘ ಜೀವನವನ್ನು ನಡೆಸಿದೆ. ಮನೆಯ ರಾಣಿಯಂತಿತ್ತು. ಪೆಬ್ಲೆಸ್ ತನ್ನ ಸಂಗಾತಿ ರಾಕಿಯೊಂದಿಗೆ ಜೀವನ ನಡೆಸಿತ್ತು. 2017 ರಲ್ಲಿ 16 ನೇ ವಯಸ್ಸಿನಲ್ಲಿ ರಾಕಿ ನಿಧನ ಹೊಂದಿತು. ಪೆಬಲ್ಸ್ 32 ನಾಯಿಮರಿಗಳಿಗೆ ಜನ್ಮ ನೀಡಿತ್ತು ಎಂದು ತಿಳಿಸಿದ್ದಾರೆ.
- Advertisement -
- Advertisement -
ಪೆಬ್ಲೆಸ್‌ಗೆ ಮಾಂಸ ಆಧಾರಿತ ಪೋಷಕಾಂಶಯುಕ್ತ ಆಹಾರ ನೀಡಲಾಗುತ್ತಿತ್ತು. ಹೀಗಾಗಿ ಶ್ವಾನ ದೀರ್ಘಾಯುಷ್ಯ ಬದುಕಿತು. ನಮ್ಮ ಕುಟುಂಬದವರ ಪ್ರೀತಿ ಮತ್ತು ಕಾಳಜಿಗೆ ಶ್ವಾನ ಪಾತ್ರವಾಗಿತ್ತು ಎಂದು ಗ್ರೆಗೊರಿ ಸ್ಮರಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ರೂಮ್‍ಮೇಟ್‍ನಿಂದ ಭಾರತೀಯ ವಿದ್ಯಾರ್ಥಿ ಮರ್ಡರ್