ಲಂಡನ್: ಯುರೋಪ್‍ನ ನಿವೃತ್ತ ಗಣಿತ ಶಿಕ್ಷಕರೊಬ್ಬರು ವೀರ್ಯ ದಾನ ಮಾಡಿ 129 ಮಕ್ಕಳ ಜನನಕ್ಕೆ ಕಾರಣವಾಗಿ ಸುದ್ದಿಯಾಗಿದ್ದಾರೆ.
ಹೌದು 66 ವರ್ಷದ ಕ್ಲೈವ್ ಜೋನ್ಸ್ ಅವರು ಸುಮಾರು ಒಂದು ದಶಕದಿಂದ ಫೇಸ್‍ಬುಕ್ ಮೂಲಕ ತಮ್ಮನ್ನು ಸಂಪರ್ಕಿಸುವವರಿಗೆ ವೀರ್ಯ ದಾನ ಮಾಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ 129 ಮಕ್ಕಳ ಜನನಕ್ಕೆ ಕ್ಲೈವ್ ಜೋನ್ಸ್ ಕಾರಣರಾಗಿದ್ದಾರೆ. ಅಲ್ಲದೇ ಇನ್ನೂ ಒಂಬತ್ತು ಮಹಿಳೆಯರು ಗರ್ಭಿಣಿಯಾಗಿದ್ದು, ಮುಂದೆ ಇವರಿಂದ 138 ಮಕ್ಕಳು ಜನಿಸಿದಂತಾಗುತ್ತದೆ.
ಈ ಕುರಿತಂತೆ ಕ್ಲೈವ್ ಜೋನ್ಸ್ ವೀರ್ಯದಾನದ ಮೂಲಕ 150 ಮಕ್ಕಳ ಜನನಕ್ಕೆ ತಾವು ಕಾರಣವಾಗಬೇಕು ಎನ್ನುವ ಗುರಿಯನ್ನು ಹೊಂದಿದ್ದು, ಜಗತ್ತಿನ ಅತ್ಯಂತ ಸಮೃದ್ಧ ವೀರ್ಯ ದಾನಿ ಎಂದು ತಮ್ಮನ್ನು ಕರೆಸಿಕೊಳ್ಳಲು ಇಚ್ಛಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ
ಫೇಸ್‍ಬುಕ್ ಮೂಲಕ ಉಚಿತವಾಗಿ ಅನೇಕ ಕುಟುಂಬಗಳಿಗೆ ತಮ್ಮ ವೀರ್ಯ ದಾನ ಮಾಡುವುದರ ಬಗ್ಗೆ ಕ್ಲೈವ್ಸ್ ಜೋನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ನನಗೆ ಹಲವಾರು ಕ್ಲಿನಿಕ್‌ಗಳು ಮತ್ತು ವೀರ್ಯ ಪಡೆಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುವುದು ತಿಳಿದಿದೆ. ಆದರೆ ಎಲ್ಲರಿಗೂ ದಾನ ಮಾಡುವುದಿಲ್ಲ. ಬದಲಿಗೆ ಅಗತ್ಯವಿರುವವರಿಗೆ ಮಾತ್ರ ವೀರ್ಯ ದಾನ ಮಾಡುತ್ತೇನೆ. ನನಗೆ ಬರುವ ಸಂದೇಶಗಳು ಮತ್ತು ಶಿಶುವಿನೊಂದಿಗೆ ತಾಯಂದಿರು ಸಂತೋಷವಾಗಿರುವ ಫೋಟೋಗಳನ್ನು ನೋಡಿದಾಗ ನನಗೂ ಕೂಡ ಸಂತಸವಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕೇರಳದ ಬಾಲಿಕಾ ಗೃಹದಿಂದ 6 ಹುಡುಗಿಯರು ನಾಪತ್ತೆ – ಒಬ್ಬಳು ಬೆಂಗ್ಳೂರಿನಲ್ಲಿ ಪತ್ತೆ
ವೀರ್ಯ ನೀಡಲು ಹಣ ಪಡೆಯುವುದು ನನ್ನ ಪ್ರಕಾರ ಕಾನೂನು ಬಾಹಿರ. ಹಾಗಾಗಿ ನಾನು ಹಣಪಡೆಯುವುದಿಲ್ಲ ಬದಲಿಗೆ ಗಾಡಿಗೆ ಪೆಟ್ರೋಲ್ ಮಾತ್ರ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವೀರ್ಯವನ್ನು 45 ವರ್ಷದವರೆಗೂ ಪಡೆಯಬಹುದು. ಆದರೆ ಕ್ಲೈವ್ಸ್ ಜೋನ್ಸ್ ಅವರಿಗೆ 66 ವರ್ಷವಾಗಿದ್ದು, ಅವರಿಂದ ವೀರ್ಯ ಪಡೆದು, ಗರ್ಭ ಬೆಳೆಸುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಕ್ಲೈವ್ಸ್ ಜೋನ್ಸ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೇಡಿಕೆ ಇದೆ.