ಛತ್ತೀಸ್‌ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.

Public TV
1 Min Read
MIYAZAKI

– ಮಿಯಾಝಾಕಿಯ ವಿಶೇಷತೆಯೇನು?

ರಾಯ್ಪುರ: ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿರುವ ಮಾವು ಎಂದರೆ ಅದು ಜಪಾನಿನ (Japan) ಮಿಯಾಝಾಕಿ (Miyazaki) ಮಾವಿನ ಹಣ್ಣು. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 1.82 ಲಕ್ಷ ಮೌಲ್ಯವನ್ನು ಹೊಂದಿರುವ ಈ ದುಬಾರಿ ಮಾವನ್ನು ಛತ್ತೀಸ್‌ಗಢದ (Chattisgarh) ರಾಯ್ಪುರದಲ್ಲಿ (Raipur) ನಡೆದ ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಜಪಾನ್ ಮೂಲದ ಮಿಯಾಝಾಕಿ ಮಾವು ವಿಶ್ವದಲ್ಲೇ ಅತ್ಯಂತ ದುಬಾರಿ ಮಾವು ಎಂಬ ಖ್ಯಾತಿಯನ್ನು ಹೊಂದಿದೆ. ಜೂನ್ 17ರಿಂದ 19ರ ವರೆಗೆ ಛತ್ತೀಸ್‌ಗಢದ ರಾಯ್ಪುರದಲ್ಲಿ ಮಾವಿನ ಮೇಳವನ್ನು (Mango Festival) ಆಯೋಜಿಸಲಾಗಿತ್ತು. ಈ ಮಾವಿನ ಮೇಳದಲ್ಲಿ ದುಬಾರಿ ಮಾವು ಮಿಯಾಝಾಕಿಯನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಈ ಮಾವು ಕೆ.ಜಿಗೆ ಸುಮಾರು 2.70 ಲಕ್ಷ ರೂ. ಮೌಲ್ಯವನ್ನು ಹೊಂದಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಇದನ್ನೂ ಓದಿ: RAW ಸಂಸ್ಥೆಯ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ನೇಮಕ

ಕೋಲ್ ಇಂಡಿಯಾದ (Coal India) ನಿವೃತ್ತ ಮ್ಯಾನೇಜರ್ ಆರ್‌ಪಿ ಗುಪ್ತ ಈ ದುಬಾರಿ ಮಾವನ್ನು ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು, ಈ ಮಾವನ್ನು ಅತ್ಯಂತ ಕಾಳಜಿಯಿಂದ ಬೆಳೆಸಬೇಕಾಗುತ್ತದೆ. ಈ ಮಾವನ್ನು ಕಾರ್ಪೊರೇಟ್‌ನ ಕೊಡುಗೆಯಾಗಿ ವ್ಯಾಪಾರ ಮಾಡಲಾಗುತ್ತಿದ್ದು, ಈ ಮಾವಿನ ಬೆಲೆ ಸಾಮಾನ್ಯ ಮಾವಿನ ಹಣ್ಣುಗಳಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್‌ – ವಿಶ್ವದಾಖಲೆ ಬರೆದ ಇಂಡಿಗೋ

ಸೂರ್ಯನ ಬೆಳಕು ಬಿದ್ದ ಮಾವಿನ ಭಾಗವು ಒಂದು ರೀತಿಯ ರುಚಿಯನ್ನು ನೀಡಿದರೆ ಮತ್ತೊಂದು ಭಾಗ ವಿಭಿನ್ನ ರುಚಿಯನ್ನು ನೀಡುತ್ತದೆ. ಇದು ಈ ಮಾವಿನ ವಿಶೇಷತೆಯಾಗಿದ್ದು, ಪ್ರದರ್ಶನದಲ್ಲಿ ಇರಿಸಲಾದ ಮಾವು 639 ಗ್ರಾಂ. ತೂಕವನ್ನು ಹೊಂದಿದೆ ಎಂದು ಆರ್‌ಪಿ ಗುಪ್ತ ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

Share This Article