ಬರ್ಲಿನ್: ಜೋರಾಗಿ ಬೀಸುತ್ತಿದ್ದ ಗಾಳಿಯ ನಡುವೆಯೂ ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ವಿಮಾನವಾದ ಏರ್‍ಬಸ್ ಎ380 ವಿಮಾನ ಜರ್ಮನಿಯ ಡಸ್ಸೆಲ್‍ಡಾರ್ಫ್ ನಲ್ಲಿ ಲ್ಯಾಂಡಿಂಗ್ ಮಾಡುವ ವಿಡಿಯೋ ಇದೀಗ ವೈರಲ್ ಆಗಿದೆ.
ಕಾರ್ಗೋಸ್ಪಾಟರ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಎಮಿರೇಟ್ಸ್ ಏ380 ವಿಡಿಯೋ ಅಪ್‍ಲೋಟ್ ಮಾಡಲಾಗಿದ್ದು, ಇದುವೆರಗೂ 1 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.
Advertisement
Advertisement
ಜೋರಾಗಿ ಬೀಸುತ್ತಿರೋ ಗಾಳಿಯ ಮಧ್ಯೆ ವಿಮಾನ ಅಲುಗಾಡುತ್ತಲೇ ಕೆಳಗೆ ಬಂದಿದೆ. ರನ್‍ವೇ ಗೆ ಇಳಿದ ನಂತರ ವಿಮಾನ ಭಯ ಹುಟ್ಟಿಸುವ ರೀತಿಯಲ್ಲಿ ಅತ್ತಿತ್ತ ತಿರುಗಿದೆ. ಕೆಲವು ಸೆಕೆಂಡ್‍ಗಳ ಕಾಲ ಈ ರೀತಿ ಆಗಿದ್ದು ನಂತರ ಪೈಲಟ್ ವಿಮಾನವನ್ನ ನಿಯಂತ್ರಣಕ್ಕೆ ತಂದಿದ್ದಾರೆ. ಆದ್ರೆ ಡಬಲ್ ಡೆಕ್ಕರ್ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವ ರೀತಿಯ ಅನುಭವವಾಗಿರಬಹದು ಎಂಬುದು ಊಹಿಸಲಸಾಧ್ಯ.
Advertisement
ಇದು ಪೈಲಟ್‍ನ ಕೌಶಲ್ಯವನ್ನು ನಿರೂಪಿಸಿದೆ. ಅನಿರೀಕ್ಷಿತ ಗಾಳಿಯ ರಭಸದ ಮಧ್ಯೆಯೂ ವಿಮನವನ್ನ ರನ್‍ವೇ ನಲ್ಲಿ ಸರಿಯಾದ ಕ್ರಮದಲ್ಲಿ ಬರುವಂತೆ ನೋಡಿಕೊಂಡಿದ್ದಾರೆ. ಇದು ಪೈಲಟ್‍ನ ಅದ್ಭುತ ಕೆಲಸ ಎಂದು ಯೂಟ್ಯೂಬ್‍ನಲ್ಲಿ ವಿಡಿಯೋ ಅಪ್‍ಲೋಡ್ ಮಾಡಿದವರು ಬರೆದುಕೊಂಡಿದ್ದಾರೆ.
Advertisement
ಅಕ್ಟೋಬರ್ 5ರಂದು ಈ ಘಟನೆ ನಡೆದಿದ್ದು, ಪ್ರಯಾಣಿಕರಿಗಾಗಲೀ, ವಿಮಾನದ ಸಿಬ್ಬಂದಿಗಾಗಲೀ ಇದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಎಮಿರೈಟ್ಸ್‍ನ ವಕ್ತಾರರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
600ಕ್ಕೂ ಹೆಚ್ಚು ಪ್ರಯಾಣಿಕರನ್ನ ಕರೆದೊಯ್ಯಬಲ್ಲ ಸಾಮಥ್ರ್ಯವುಳ್ಳ ಏರ್‍ಬಸ್ ಎ380 ವಿಮಾನ ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ವಿಮಾನ ಎನಿಸಿಕೊಂಡಿದೆ.