ಲಕ್ನೋ: ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರೊಬ್ಬರು 400 ಕೆಜಿಯ ಬೀಗವನ್ನು ದೇಣಿಗೆಯಾಗಿ ಕೊಡಲು ಮುಂದಾಗಿದ್ದಾರೆ.
ಅಲಿಗಢ ಜಿಲ್ಲೆಯ ಕಮ್ಮಾರರೊಬ್ಬರು ಬರೋಬ್ಬರಿ 400 ಕೇಜಿ ತೂಕದ ಬೀಗವನ್ನು ದೇಣಿಗೆಯಾಗಿ ನೀಡಲು ಸಿದ್ಧತೆ ನಡೆಸಿದ್ದಾರೆ. ಸತ್ಯಪ್ರಕಾಶ್ ಶರ್ಮಾ ಮತ್ತು ಅವರ ಪತ್ನಿ ಕಳೆದ 6 ತಿಂಗಳಿಂದ ಈ ಬೀಗ ತಯಾರಿಕೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹಿತ್ತಾಳೆಯಿಂದ ತಯಾರಾಗುತ್ತಿರುವ ಬೀಗಕ್ಕೆ ಮೇಲ್ಮೈಗೆ ಸ್ಟೀಲ್ ಲೇಪ ಮಾಡಲಾಗಿದೆ. ಇದನ್ನೂ ಓದಿ: ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ
Advertisement
उत्तर प्रदेश: अलीगढ़ के एक वृद्ध दंपत्ति क़रीब 300 किलो का एक ताला बना रहे हैं, इसके बाद दंपत्ति की इच्छा राम मंदिर के लिए ताला बनाने की है। सत्य प्रकाश शर्मा ने बताया, “मेरे यहां 100 साल से ज़्यादा से ताला बनाने का काम होता है। अलीगढ़ की पहचान हो इसलिए हमने ये ताला बनाया है।” pic.twitter.com/yZNRnkGSEW
— ANI_HindiNews (@AHindinews) March 17, 2021
Advertisement
10 ಅಡಿ ಎತ್ತರ ಹಾಗೂ ನಾಲ್ಕೂವರೆ ಅಡಿ ಅಗಲದ ಕೀ ಇದಾಗಿದೆ. ಕೀ 30 ಕೆಜಿ ತೂಕವಿದೆ. 2,00,000 ರೂಪಾಯಿ ವೆಚ್ಚದ ಈ ಬೀಗದ ಮೇಲೆ ಭಗವಾನ್ ರಾಮನ ಚಿತ್ರವನ್ನು ಕೆತ್ತಲಾಗಿದೆ. ಇದನ್ನು ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರಕ್ಕೆ ಈ ಬೀಗವನ್ನು ಸಮರ್ಪಿಸಲಾಗುವುದು. ಹಿತ್ತಾಳೆ ಕೆಲಸ ಮುಗಿದ ನಂತರ ರಾಮಮಂದಿರಕ್ಕೆ ಬೀಗವನ್ನು ಕಳುಹಿಸಲಾಗುವುದು. ಈ ಕಲೆಯನ್ನು ಉತ್ತೇಜಿಸಲು ಸರ್ಕಾರದ ಬೆಂಬಲ ಅಗತ್ಯವಿದೆ. ಬಡ್ಡಿಗೆ ಹಣ ಪಡೆದು ಈ ಬೀಗದ ಕೆಲಸ ಮಾಡುತ್ತಿದ್ದೇನೆ ಎಂದು ಸತ್ಯಪ್ರಕಾಶ್ ತಿಳಿಸಿದರು. ಇದನ್ನೂ ಓದಿ: ಬೊಮ್ಮಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
Advertisement
Advertisement
ಅವರ ಪತ್ನಿ ರುಕ್ಮಣಿ ಶರ್ಮಾ ಮಾತನಾಡಿ, ಸತ್ಯಪ್ರಕಾಶ್ ಬೀಗ ಹಾಕುವ ವ್ಯವಹಾರದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ. ಮುಂದಿನ ಪೀಳಿಗೆಗೆ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು. ಮುಂಬರುವ ಗಣರಾಜ್ಯೋತ್ಸವದ ಪರೇಡ್‍ಗಾಗಿ ಹೊಸದಿಲ್ಲಿಯಲ್ಲಿ ದೈತ್ಯ ಬೀಗದ ಕೋಷ್ಟಕವನ್ನು ಮಾಡಲು ಯೋಜಿಸಿದ್ದಾರೆ. 20 ಇಂಚು ದಪ್ಪದ ಜೊತೆಗೆ 15 ಅಡಿ ಎತ್ತರ, 8 ಅಡಿ ಅಗಲದ ಬೀಗವನ್ನು ಮಾಡಲು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಸತ್ಯಪ್ರಕಾಶ್ ಅವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೇಕಾಡ್ಸ್‌ನಲ್ಲಿ ತಮ್ಮ ಸಾಧನೆಯನ್ನು ದಾಖಲಿಸಲು ಬಯಸುತ್ತಾರೆ ಎಂದು ಪತ್ನಿಯ ಕೆಲಸದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.