ಜೈಪುರ: ಶನಿವಾರ ದೇಶಾದ್ಯಂತ 74ನೇ ಸೇನಾ ದಿನವನ್ನು ಆಚರಿಸಲಾಯಿತು. ಈ ದಿನ ವಿಶ್ವದಲ್ಲೇ ಅತೀ ದೊಡ್ಡ ಭಾರತದ ಖಾದಿ ರಾಷ್ಟ್ರಧ್ವಜವನ್ನು ರಾಜಸ್ಥಾನದ ಜೈಸಲ್ಮೇರ್ನಲ್ಲಿ ಅನಾವರಣ ಮಾಡಲಾಗಿದೆ.
1971ರಲ್ಲಿ ಭಾರತ-ಪಾಕಿಸ್ತಾನ ನಡುವೆ ರಾಜಸ್ಥಾನದ ಲೋಂಗೇವಾಲಾ ಗಡಿಯಲ್ಲಿ ಐತಿಹಾಸಿಕ ಯುದ್ಧ ನಡೆದಿತ್ತು. ಈ ಪ್ರದೇಶದಲ್ಲಿ ವಿಶ್ವದ ಅತೀ ದೊಡ್ಡ ಭಾರತದ ಧ್ವಜವನ್ನು ಶನಿವಾರ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಭಾರತೀಯ ಸೇನೆ ಹೊಸ ಸಮವಸ್ತ್ರ ಅನಾವರಣ – ಏನಿದರ ವಿಶೇಷತೆ?
Advertisement
Advertisement
225 ಅಡಿ ಉದ್ದ, 150 ಅಡಿ ಅಗಲದ ಹಾಗೂ 1,400 ಕೆಜಿ ಭಾರವಿರುವ ಭಾರತೀಯ ಧ್ವಜವನ್ನು ಸಂಪೂರ್ಣ ಖಾದಿಯಿಂದ ತಯಾರಿಸಲಾಗಿದೆ. 70 ಮಂದಿ ಖಾದಿ ಕುಶಲ ಕರ್ಮಿಗಳು ಈ ಧ್ವಜವನ್ನು ತಯಾರಿಸಲು 49 ದಿನಗಳನ್ನು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಹಳ್ಳಿ ಸುಂದರಿ ನವ್ದೀಪ್ ಕೌರ್
Advertisement
2021ರ ಅಕ್ಟೋಬರ್ 2 ರಂದು ಭಾರತದ ಅತೀ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಮೊದಲ ಬಾರಿಗೆ ಲಡಾಖ್ನ ಲೇಹ್ನಲ್ಲಿ ಪ್ರದರ್ಶಿಸಲಾಗಿತ್ತು. ಶನಿವಾರ ಈ ಧ್ವಜವನ್ನು 5ನೇ ಬಾರಿ ಪ್ರದರ್ಶನಕ್ಕೆ ಇಡಲಾಗಿದೆ.