ಬೀಜಿಂಗ್: ಕೊರೊನಾ ವೈರಸ್(Corona Virus) ಸೃಷ್ಟಿಕರ್ತ ಚೀನಾದಲ್ಲಿ(China) ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ 24.8 ಕೋಟಿ ಜನರು ಅಥವಾ ಜನಸಂಖ್ಯೆಯ ಸುಮಾರು 18% ರಷ್ಟು ಜನರು ವೈರಸ್‌ಗೆ ತುತ್ತಾಗಿರಬಹುದು ಎಂದು ಚೀನಾದ ಸರ್ಕಾರವೇ ಅಂದಾಜಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.
Advertisement
What a scene! Somewhere in #CCPChina, patients can only receive infusions outside, in the cold wind, as hospitals are all full.#chinacovid #ChinaCovidCases #ChinaCovidSurge #ChinaCovidDeaths #ChinaCovidNightmare #COVID #COVID19 #ZeroCovid #CCPVirus #CCP #China #XiJingping pic.twitter.com/1n6fcStItX
— Inconvenient Truths by Jennifer Zeng 曾錚真言 (@jenniferzeng97) December 23, 2022
Advertisement
ಕಳೆದ ಬುಧವಾರ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಆಂತರಿಕ ಸಭೆ ನಡೆಸಿದ್ದು ಈ ವೇಳೆ ಅಧಿಕಾರಿಗಳು ಈ ಅಂಕಿ ಸಂಖ್ಯೆಯನ್ನು ತಿಳಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ʼಬ್ಲೂಮ್‌ಬರ್ಗ್ʼ ವರದಿ ಮಾಡಿದೆ.
Advertisement
2022ರ ಜನವರಿಯಲ್ಲಿ ವಿಶ್ವಾದ್ಯಂತ ಒಂದೇ ದಿನ 40 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಆದರೆ ಚೀನಾದಲ್ಲಿ ಒಂದೇ ದಿನ ಈ ದಾಖಲೆಗಿಂತ 10 ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ದಾಖಲಾಗಿರುವುದು ಆತಂಕಕಾರಿ ವಿಚಾರವಾಗಿದೆ.
Advertisement
Clips from #Beijing, showing: Courier goods piling up, no delivery boys to deliver food, empty streets, empty subways, empty airport, empty shopping malls, empty roads, etc.#chinacovid #ChinaCovidCases #ChinaCovidSurge #ChinaCovidDeaths #ChinaCovidNightmare #COVID #COVID19 pic.twitter.com/O6p8jHMIxt
— Inconvenient Truths by Jennifer Zeng 曾錚真言 (@jenniferzeng97) December 23, 2022
ಚೀನಾದ ನೈಋತ್ಯ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿರುವ ಸಿಚುವಾನ್ ಪ್ರಾಂತ್ಯದ ಅರ್ಧಕ್ಕಿಂತ ಹೆಚ್ಚು ನಿವಾಸಿಗಳು ಸೋಂಕಿಗೆ ಒಳಗಾಗಿದ್ದಾರೆ. ರೋಗಲಕ್ಷಣವಿಲ್ಲದ ಪ್ರಕರಣಗಳ ದೈನಂದಿನ ಸಂಖ್ಯೆಯನ್ನು ಪ್ರಕಟಿಸುವುದನ್ನು ಚೀನಾ ಸರ್ಕಾರ ನಿಲ್ಲಿಸಿದೆ. ಇದನ್ನೂ ಓದಿ: ನನ್ನ ಗಂಡ ಮೇಕಪ್‌ಗೆ ಹಣ ಕೊಡ್ತಿಲ್ಲ – ಡಿವೋರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ
1. At #Shanghai Jinshan Health Center, people who enter #China & test positive are detained here, usually for more than 10 days, until they test negative twice in a row. Some people can't stand to be locked up and behave abnormally. One woman threatens suicide & asks what's the.. pic.twitter.com/QvIjuZrydH
— Inconvenient Truths by Jennifer Zeng 曾錚真言 (@jenniferzeng97) December 22, 2022
ಹೆಚ್ಚಿನ ನಗರಗಳಲ್ಲಿ ಡಿಸೆಂಬರ್ ಮಧ್ಯ ಮತ್ತು ಜನವರಿ ಅಂತ್ಯದ ನಡುವೆ ಪ್ರಕರಣಗಳು ಉತ್ತಂಗಕ್ಕೆ ಏರಲಿದೆ. ಶೆನ್‌ಜೆನ್, ಶಾಂಘೈ ಮತ್ತು ಚಾಂಗ್‌ಕಿಂಗ್ ನಗರಗಳಲ್ಲಿ ಅತಿ ಹೆಚ್ಚು ಸೋಂಕು ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ನಗರ ಪ್ರದೇಶದ ಜನರು ಈಗ ಗ್ರಾಮೀಣ ಭಾಗಕ್ಕೆ ತೆರಳುತ್ತಿರುವುದರಿಂದ ಗ್ರಾಮೀಣ ಭಾಗದಲ್ಲೂ ಸೋಂಕು ಹರಡುವ ಪ್ರಮಾಣ ಹೆಚ್ಚಾಗುತ್ತಿದೆ.
ಕೊರಿಯರ್ ಸರಕುಗಳು ರಾಶಿ ಬಿದ್ದಿದ್ದು, ಆಹಾರವವನ್ನು ತಲುಪಿಸಲು ಹುಡುಗರು ಬರುತ್ತಿಲ್ಲ. ಬೀದಿಗಳು, ಸುರಂಗ ಮಾರ್ಗಗಳು, ವಿಮಾನ ನಿಲ್ದಾಣ, ಶಾಪಿಂಗ್ ಮಾಲ್‌ಗಳು ಎಲ್ಲವೂ ಖಾಲಿಯಾಗಿದೆ.