ಮುಂಬೈ: ಚಿಕಿತ್ಸೆಗಾಗಿ ಭಾರತಕ್ಕೆ ಬಂದಿರೋ ವಿಶ್ವದ ದಢೂತಿ ಮಹಿಳೆ ಇಮಾನ್ ಅಹ್ಮದ್ ಕೇವಲ ಮೂರು ವಾರಗಳಲ್ಲಿ ಬರೋಬ್ಬರಿ 120 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
498 ಕೆಜಿ ತೂಕವಿದ್ದ ಈಜಿಪ್ಟ್ ನ ಇಮಾನ್ ಈ ಮೂಲಕ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಾವಾಗಿಯೇ ಎದ್ದು ಕೂರಲು ಶಕ್ತರಾಗಿದ್ದಾರೆ. ಇಮಾನ್ ತಮ್ಮ ಕಾಲಿನ ಮೇಲೆ ನಿಲ್ಲುವುದಷ್ಟೆ ಬಾಕಿ ಉಳಿದಿದ್ದು ಸರ್ಜರಿಗೆ ತಯಾರಿ ನಡೆಸಲಾಗಿದೆ.
Advertisement
Advertisement
ವೈದ್ಯರು 25 ದಿನಗಳಲ್ಲಿ 50 ಕೆಜಿ ತೂಕ ಇಳಿಸುವ ಉದ್ದೇಶ ಹೊಂದಿದ್ದರು. ಅಂದ್ರೆ ಪ್ರತಿದಿನ ಇಮಾನ್ ಅವರು 2ಕೆಜಿ ತೂಕ ಇಳಿಸಿಕೊಳ್ಳಬೇಕಿತ್ತು. ಆದ್ರೆ ಆಶ್ಚರ್ಯವೆಂಬಂತೆ ಕಡಿಮೆ ಅವಧಿಯಲ್ಲೇ ಇಮಾನ್ ಉದ್ದೇಶಿಸಿದ್ದಕ್ಕಿಂತ ಎರಡು ಪಟ್ಟು ತೂಕ ಇಳಿಸಿಕೊಂಡಿದ್ದಾರೆ.
Advertisement
ಈವರೆಗೆ ಇಮಾನ್ ಅವರು ಕೇವಲ ದ್ರವ ರೂಪದ ಆಹಾರ ಸೇವಿಸಿ ಹಾಗೂ ನಿಯಮಿತವಾದ ಫಿಸಿಯೋಥೆರಪಿಯಿಂದ ದೇಹದಲ್ಲಿದ್ದ ಹೆಚ್ಚುವರಿ ನೀರಿನಂಶವನ್ನ ಇಳಿಸಿಕೊಂಡಿದ್ದಾರೆ. ಈಗ ಅವರು ಬಾರಿಯಾಟ್ರಿಕ್ ಸರ್ಜರಿಗೆ ಒಳಗಾಗಲು ಸಿದ್ಧರಾಗಿದ್ದಾರೆ ಎಂದು ಇಮಾನ್‍ಗೆ ಚಿಕಿತ್ಸೆ ನೀಡುತ್ತಿರುವ ಡಾ. ಮುಫಾಜಲ್ ಲಕ್ಡಾವಾಲಾ ಹೇಳಿದ್ದಾರೆ. ಈವರೆಗೆ ಔಷಧಿ ನೀಡುವ ಮೂಲಕ ಅವರ ತೂಕವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆಯಾಗುವಂತೆ ಮಾಡಿದ್ದೇವೆ. ಇನ್ನುಳಿದಂತೆ ಸರ್ಜರಿ ಮೂಲಕವೇ ತೂಕ ಇಳಿಸಬೇಕು ಎಂದು ಅವರು ಹೇಳಿದ್ದಾರೆ.
Advertisement
ಇಮಾನ್ ಅವರಿಗೆ ಮೊದಲು ಸ್ಲೀವ್ ಬಾರಿಯಾಟ್ರಿಕ್ ಸರ್ಜರಿ ಮಾಡಲಾಗುತ್ತದೆ. ನಂತರ ಮುಂದಿನ ಪ್ರಕ್ರಿಯೆವರೆಗೆ ಅವರನ್ನು ಅಲೆಕ್ಸಾಂಡ್ರಿಯಾಗೆ ಕಳಿಸಿ ಅಬ್‍ಸರ್ವೇಷನ್‍ನಲ್ಲಿ ಇರಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಆಸ್ಪತ್ರೆಯವರು ಇಮಾನ್ ಚಿಕಿತ್ಸೆಗಾಗಿ ಸುಮಾರು 60 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ.