ಮುಂಬೈ: ಮಹಾರಾಷ್ಟ್ರದ (Maharashtra) ಚಂದ್ರಾಪುರ ಮತ್ತು ಯವತ್ಮಾಲ್ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ 200 ಮೀಟರ್ ಉದ್ದದ ಬಿದಿರಿನ ಕ್ರ್ಯಾಶ್ ಬ್ಯಾರಿಯರ್ (Bamboo Crash Barrier) ಅನ್ನು ಸ್ಥಾಪಿಸಲಾಗಿದೆ. ಇದು ವಿಶ್ವದ ಮೊದಲ ಬ್ಯಾರಿಯರ್ ಆಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ತಿಳಿಸಿದ್ದಾರೆ.
ಇದು ದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ. ಬಿದಿರಿನ ಕ್ರ್ಯಾಶ್ ಬ್ಯಾರಿಯರ್, ಉಕ್ಕಿಗೆ ಪರ್ಯಾಯವಾಗಿದೆ. ಅಷ್ಟೇ ಅಲ್ಲದೇ ಪರಿಸರಕ್ಕೆ ಪೂರಕವಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಇದನ್ನೂ ಓದಿ: Manish Sisodia ಸಿಬಿಐ ಕಸ್ಟಡಿ ವಿಸ್ತರಣೆ – ಮಾ.10 ರಂದು ಜಾಮೀನು ಅರ್ಜಿ ವಿಚಾರಣೆ
An extraordinary accomplishment towards achieving #AatmanirbharBharat has been made with the development of the world’s first 200-meter-long Bamboo Crash Barrier, which has been installed on the Vani-Warora Highway. pic.twitter.com/BPEUhF7l2P
— Nitin Gadkari (@nitin_gadkari) March 4, 2023
ಈ ಕುರಿತು ಟ್ವೀಟ್ ಮಾಡಿರುವ ಅವರು, ವಾಣಿ-ವರೋರಾ ಹೆದ್ದಾರಿಯಲ್ಲಿ ಸ್ಥಾಪಿಸಲಾದ ವಿಶ್ವದ ಮೊದಲ 200 ಮೀಟರ್ ಉದ್ದದ ಬಿದಿರು ಕ್ರ್ಯಾಶ್ ಬ್ಯಾರಿಯರ್‌ನ ಅಭಿವೃದ್ಧಿಯೊಂದಿಗೆ ʼಆತ್ಮನಿರ್ಭರ ಭಾರತʼ ಸಾಧಿಸುವ ನಿಟ್ಟಿನಲ್ಲಿ ಅಸಾಧಾರಣ ಸಾಧನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
This Bamboo Crash Barrier, which has been christened Bahu Balli, underwent rigorous testing at various government-run institutions, such as the National Automotive Test Tracks (NATRAX) in Pithampur, Indore, and was rated as Class 1… pic.twitter.com/fe52oU1rLz
— Nitin Gadkari (@nitin_gadkari) March 4, 2023
ಈ ಬಿದಿರಿನ ತಡೆಗೋಡೆಗೆ ʼಬಹುಬಲಿʼ ಎಂದು ನಾಮಕರಣ ಮಾಡಲಾಗಿದೆ. ಇಂದೋರ್‌ನ ಪಿತಾಮ್‌ಪುರದಲ್ಲಿರುವ ರಾಷ್ಟ್ರೀಯ ಆಟೋಮೋಟಿವ್ ಟೆಸ್ಟ್ ಟ್ರ್ಯಾಕ್ಸ್ (NATRAX) ನಂತಹ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಇದನ್ನು ಕಠಿಣ ಪರೀಕ್ಷೆಗೆ ಒಳಪಡಿಸಲಾಯಿತು. ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ (CBRI) ನಡೆಸಿದ ಅಗ್ನಿಶಾಮಕ ರೇಟಿಂಗ್ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ರೇಟ್ ಪಡೆದುಕೊಂಡಿದೆ. ಅಲ್ಲದೇ ಇದು ಇಂಡಿಯನ್ ರೋಡ್ ಕಾಂಗ್ರೆಸ್‌ನಿಂದ ಮಾನ್ಯತೆ ಪಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಮತಾ ವಿರುದ್ಧ ಹೇಳಿಕೆ – ಬಂಗಾಳದ ಕಾಂಗ್ರೆಸ್ ವಕ್ತಾರ ಅರೆಸ್ಟ್
ಬಿದಿರಿನ ತಡೆಗೋಡೆಗಳ ಮರುಬಳಕೆಯ ಮೌಲ್ಯವು ಶೇ.50-70 ರಷ್ಟಿದ್ದರೆ, ಉಕ್ಕಿನ ತಡೆಗೋಡೆಗಳದ್ದು ಶೇ.30-50 ರಷ್ಟಿದೆ. ಈ ತಡೆಗೋಡೆಯ ತಯಾರಿಕೆಯಲ್ಲಿ ಬಂಬುಸಾ ಬಾಲ್ಕೋವಾ ಜಾತಿಯ ಬಿದಿರನ್ನು ಬಳಸಲಾಗಿದೆ. ಇದನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸಲಾಗುತ್ತದೆ. ಮರುಬಳಕೆಯ ಹೈ-ಡೆನ್ಸಿಟಿ ಪಾಲಿ ಎಥಿಲೀನ್ (HDPE) ನೊಂದಿಗೆ ಲೇಪಿಸಲಾಗಿದೆ ಎಂದು ತಿಳಿಸಿದ್ದಾರೆ.