ಕೇಪ್‍ಟೌನ್: ದಕ್ಷಿಣ ಆಫ್ರಿಕಾದಲ್ಲಿ ಮಹಿಳೆಯೊಬ್ಬರ ಮನೆಯಲ್ಲಿ ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ಬ್ಲಾಕ್ ಮಾಂಬಾ ಕಾಣಿಸಿಕೊಂಡಿದ್ದು ಅದನ್ನ ಉರಗ ತಜ್ಞರೊಬ್ಬರು ರಕ್ಷಣೆ ಮಾಡಿದ್ದಾರೆ.
ಕ್ವಾಝುಲು ನಾಟಲ್ ಆಂಫಿಬಿಯನ್ ಅಂಡ್ ರೆಪ್ಟೈಲ್ ಕನ್ಸರ್ವೇಷನ್‍ನ ಉರಗ ತಜ್ಞ ನಿಕ್ ಇವಾನ್ಸ್ ಈ ಹಾವನ್ನ ರಕ್ಷಣೆ ಮಾಡಿದ್ದಾರೆ. ಈ ಮನೆಯಲ್ಲಿ ಮೊಲ ಹಾಗೂ ಪಕ್ಷಿಗಳನ್ನ ಸಾಕಿದ್ದ ಕಾರಣ ಹಾವು ಮನೆಯೊಳಗೆ ಬಂದಿರಬಹುದು ಎಂದು ಹೇಳಲಾಗಿದೆ.
Advertisement
ಮನೆಯ ಟಿವಿ ಸ್ಟ್ಯಾಂಡ್ ಕೆಳಗಿದ್ದ ಹಾವನ್ನ ಉದ್ದವಾದ ಕೋಲಿನಂತಹ ಸಾಧನದಿಂದ ಹಿಡಿದು ಹೊರಗೆ ಎಳೆಯಲು ಯತ್ನಿಸಿದ್ದಾರೆ. ಈ ವೇಳೆ ಹಾವು ಬುಸುಗುಟ್ಟಿದ್ದು, ಅದರ ಕಪ್ಪು ಬಣ್ಣದ ಬಾಯಿಯ ಒಳಭಾಗ ಎಂಥವರಿಗೂ ಭಯ ಹುಟ್ಟಿಸುತ್ತದೆ. ಇದರ ವಿಡಿಯೋವನ್ನ ನ್ಯಾಷನಲ್ ಜಿಯಾಗ್ರಫಿಕ್ ವಾಹಿನಿಯನವರು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದಾರೆ
Advertisement
Advertisement
ಬಯಲಿನಲ್ಲಾದ್ರೆ ಅಥವಾ ಅವಕಾಶ ಸಿಕ್ಕರೆ ಮಾಂಬಾ ಹಾವುಗಳು ಯಾವಾಗ್ಲೂ ಕಾದಾಡೋ ಬದಲು ಆ ಸ್ಥಳದಿಂದ ಪರಾರಿಯಾಗುತ್ತವೆ ಅಂತ ಇವಾನ್ಸ್ ನ್ಯಾಷನಲ್ ಜಿಯಾಗ್ರಫಿಕ್‍ಗೆ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಅವು ಎದುರಾಳಿಯ ಕಡೆಗೆ ಬಾಯಿ ತೆರೆದು ದಿಟ್ಟಿಸಿ ನೋಡುತ್ತವೆ ಎಂದಿದ್ದಾರೆ.
Advertisement
ಇವಾನ್ಸ್ ಈ ಅತ್ಯಂತ ವಿಷಕಾರಿ ಹಾವನ್ನು ಹಿಡಿಯಲು ಹೋದಾಗ ಅದು ಅಲ್ಲಿಂದ ನುಸುಳಿಕೊಂಡು ಹೋಗಲು ಯತ್ನಿಸಿದೆ. ಆದ್ರೆ ಇವಾನ್ಸ್ ಅದನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೆ ಬರಿಗೈಯ್ಯಲ್ಲೇ ಹಾವನ್ನ ಹಿಡಿದು ಕ್ಯಾಮೆರಾ ಕಡೆಗೆ ತೋರಿಸಿದ್ದಾರೆ.
ಈ ಹಾವು ಸುಮಾರು 8 ಅಡಿಯಷ್ಟು ಉದ್ದವಿದ್ದು, ಇದಕ್ಕೆ ಮೈಕ್ರೋ ಚಿಪ್ ಹಾಕಿದ ನಂತರ ಕಾಡಿಗೆ ಬಿಡಲಾಗಿದೆ ಎಂದು ವರದಿಯಾಗಿದೆ.