‘ಉಪ್ಪಿ ಗ್ರೆಟಸ್ಟ್ ಡೈರೆಕ್ಟರ್ ಇನ್ ದಿಸ್ ವರ್ಲ್ಡ್’ ಇದೇ ಮೊದಲ ಬಾರಿಗೆ ಕೆಜಿಎಫ್ ಸಾರಥಿ ಪ್ರಶಾಂತ್ ನೀಲ್ (Prashant Neel) ಈ ಸಾಲಿಗೆ ಧ್ವನಿಯಾಗಿದ್ದಾರೆ. ಇದುವರೆಗೆ ಎಲ್ಲಿಯೂ ಅವರು ಉಪೇಂದ್ರ (Upendra) ಬಗ್ಗೆ ಮಾತಾಡಿರಲಿಲ್ಲ. ಈಗ ಅದನ್ನು ಸುಳ್ಳು ಮಾಡಿದ್ದಾರೆ. ಉಪ್ಪಿ ಗ್ರೇಟ್ ಡೈರೆಕ್ಟರ್ ಎನ್ನುವುದಕ್ಕೆ ನೀಲ್ ಕೊಟ್ಟ ಕಾರಣ ಏನು? ಅದ್ಯಾವ ಸಿನಿಮಾಗಳನ್ನು ವಿಶ್ವ ದರ್ಜೆಗೆ ಏರಿಸಿದರು? ರಿಯಲ್‌ಸ್ಟಾರ್‌ಗೆ ಬಹುಪರಾಕ್ ಹಾಕಿದ್ದೇಕೆ ? ಆ ಮೈಂಡ್ ಬ್ಲೋಯಿಂಗ್ ಸ್ಟೋರಿ ಇಲ್ಲಿದೆ.
ಉಪ್ಪಿ…ರಿಯಲ್ ಸ್ಟಾರ್…ಅದ್ಯಾವ ಗಳಿಗೆಯಲ್ಲಿ ಇವರು ಓಂ ಸಿನಿಮಾಕ್ಕೆ ಓಂಕಾರ ಹಾಕಿದರೋ…ಅದ್ಯಾವ ಕ್ಷಣದಲ್ಲಿ ಎ ಸಿನಿಮಾಕ್ಕೆ ನಾಯಕರಾದರೊ…ಅದ್ಯಾವ ಅಮೃತ ಗಳಿಗೆಯಲ್ಲಿ ಉಪೇಂದ್ರ ಟೈಟಲ್ ಇಟ್ಟು ವಿಶ್ವವನ್ನು ಬೆಚ್ಚಿಬೀಳಿಸಿದರೋ…ಅಲ್ಲಿಂದ ಇದುವರೆಗೆ ಉಪ್ಪಿ ದರ್ಬಾರ್ ನಿಂತಿಲ್ಲ. ಯರ‍್ಯಾರೋ ಬಂದರು ಹೋದರು. ಆದರೆ ಉಪ್ಪಿ ಮಾತ್ರ ಅಂದಿಗೂ ಇಂದಿಗೂ…ಮುಂದೆಂದಿಗೂ ಅದೇ ಚಿನ್ನದ ಕುದುರೆ ಮೇಲೆ ಸವಾರಿ ಮಾಡುತ್ತಿರುತ್ತಾರೆ. ಕಾರಣ ಅವರ ಸಿನಿಮಾ ಬರೀ ಸಿನಿಮಾ ಅಗಿರಲಿಲ್ಲ. ಅವೆಲ್ಲ ನಮ್ಮ ಬದುಕಿಗೆ ಕನ್ನಡಿ. ಮನಸಿನ ದ್ವಂದ್ವಕ್ಕೆ ಮುನ್ನುಡಿ. ದಟ್ ಈಸ್ ಪವರ್ ಆಫ್ ಉಪೇಂದ್ರ. ಪ್ರಶಾಂತ್ ನೀಲ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ವಿಶ್ವದ ಬೆಸ್ಟ್ ಡೈರೆಕ್ಟರ್ ಈಸ್ ಉಪೇಂದ್ರ.
ಉಪ್ಪಿ ಸಿನಿಮಾಗಳನ್ನು ನೋಡುತ್ತಾ ಬೆಳೆದ ನೀಲ್ ಇಂದು ಪ್ಯಾನ್ ಇಂಡಿಯಾ ಡೈರೆಕ್ಟರ್. ಆದರೆ ಅದಕ್ಕೆಲ್ಲ ಸ್ಪೂರ್ತಿ ಉಪ್ಪಿ. ರ‍್ಲೆ ನನ್ಮಗ, ಶ್ ಹಾಗೂ ಓಂ. ಈ ಮೂರೂ ಸಿನಿಮಾಗಳನ್ನು ಜನರು ಈಗಲೂ ಫಸ್ಟ್ ಟೈಮ್ ನೋಡಿದಂತೆ ಕಣ್ಣಗಲಿಸತ್ತಾರೆ. ರ‍್ಲೆ ನನ್ಮಗ ಸೈಡಿಗಿಡಿ. ಶ್ ಹಾಗೂ ಓಂ ಮಾತ್ರ ಯಾವತ್ತಿಗೂ ಅಚ್ಚರಿಗೊಳಿಸುತ್ತವೆ. ವಿಶ್ವದ ಸಾವಿರಾರು ಸಿನಿಮಾ ನೋಡಿರುವ ನೀಲ್ ಕೂಡ ಇದನ್ನು ಒಪ್ಪುತ್ತಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನು ಉಚ್ಛರಿಸಿದ್ದಾರೆ.
ಕನ್ನಡ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನೀಲ್ ಈ ಮಾತು ಹೇಳಿದ್ದಾರೆ. ಓಹೋ…ಎಷ್ಟಿದ್ದರೂ ಕನ್ನಡ ಮಾಧ್ಯಮ ? ಅದಕ್ಕಾಗಿ ಉಪ್ಪಿಯನ್ನು ನೆನಪು ಮಾಡಿಕೊಂಡಿದ್ದಾರೆ. ಪರಭಾಷೆಗೆ ಇಂಟರ್‌ವ್ಯೂವ್ ಕೊಟ್ಟಿದ್ದರೆ ಇನ್ಯಾರೊ ನಿರ್ದೇಶಕನ ಹೆಸರನ್ನು ಹೇಳುತ್ತಿದ್ದರೇನೊ ? ಹೀಗಂತ ಜನರು ಅಂದುಕೊಳ್ಳುತ್ತಿದ್ದರು. ಅಷ್ಟರಲ್ಲಿ ಸ್ವಯಂ ಪ್ರೇರಿತರಾಗಿ ಗುಡುಗಿದರು ನೀಲ್. ಇದು ನೋಡಿ ಉಪ್ಪಿ ತಾಕತ್ತು ಹಾಗೂ ನಿರ್ದೇಶನದ ದೌಲತ್ತು. ಇಡೀ ವಿಶ್ವದಲ್ಲಿ ಉಪ್ಪಿಯನ್ನು ಮೀರಿಸುವ ಪ್ರತಿಭಾವಂತರಿದ್ದಾರೆ, ಬುದ್ಧಿವಂತರಿದ್ದಾರೆ, ನಿರ್ದೇಶಕರೂ ಇದ್ದಾರೆ. ಆದರೆ `ಉಪೇಂದ್ರ’ ಎನ್ನುವ ಚಿತ್ರವನ್ನು ಯಾರಿಗೂ ಹೆಣೆಯಲು ಸಾಧ್ಯ ಇಲ್ಲ. ಅದೊಂದೇ ಮಾಸ್ಟರ್ ಪೀಸ್. ಬರೀ ಮೂರು ಸಿನಿಮಾ ಹೆಸರು ಹೇಳಿದ ನೀಲ್, ಉಪೇಂದ್ರ ಸಿನಿಮಾ ಯಾಕೆ ನೆನಪಿಸಿಕೊಳ್ಳಲಿಲ್ಲ ? ಹೀಗಂತ ಅಂದುಕೊಳ್ಳುವಾಗಲೇ ನೀಲ್ ಬಿಟ್ಟರಲ್ಲ ಪಾಶು ಪತಾಸ್ತ್ರ.
ಕೆಜಿಎಫ್ ಸಾರಥಿ ಇಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮೆರೆಯುತ್ತಿದ್ದಾರೆ. ಆದರೆ ಅವರಿಗೆ ಹುರುಪು ತುಂಬಿದ್ದು ಮಾತ್ರ ಒನ್ ಆನ್ ಓನ್ಲಿ ಉಪ್ಪಿ. ಈಗ ಉಪೇಂದ್ರ ಕೂಡ ಗ್ಲೋಬಲ್ ಸಿನಿಮಾ ಸವಾರಿ ಹೊರಟಿದ್ದಾರೆ. `ಯುಐ’…ಇನ್ನೇನು ತಿಂಗಳಲ್ಲಿ ವಿಶ್ವಾದ್ಯಂತ ದಿಬ್ಬಣ ಹೊರಡಲಿದೆ. `ನನ್ನ ಮುಂದೆ ಬಂದವರು ಎಲ್ಲೆಲ್ಲೋ ಹೋಗಿ ಪಟಾಕಿ ಹಚ್ಚುತ್ತಿದ್ದಾರೆ. ನಾನಿಲ್ಲಿ ಬರೀ ಕಡ್ಡಿ ಗೀರುತ್ತಾ ಕೂಡಬೇಕಾ?’ ಬಹುಶಃ ಹೀಗಂದುಕೊಂಡೇ ಮೈ ಕೊಡವಿದ್ದಾರೆ. ಯುಐ ಅಬ್ಬರ, ಆರ್ಭಟ, ಉಪ್ಪಿಯನ್ನು ಇನ್ಯಾವ ರತ್ನ ಖಚಿತ ಸಿಂಹಾಸನದಲ್ಲಿ ರಾರಾಜಿಸುತ್ತದೋ? ಬುದ್ಧಿವಂತರಿಗೂ ಗೊತ್ತಿಲ್ಲ.