ವಾಷಿಂಗ್ಟನ್: ಒಲಂಪಿಕ್ಸ್‌ನಲ್ಲಿ ಚಿನ್ನಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ ನಿರಜ್ ಚೋಪ್ರಾ ಮತ್ತೊಂದು ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್ನ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದು, ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ 88.39 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಸಾಧನೆ ಮಾಡಿದ್ದಾರೆ.
As the commentator predicted, "he wants one & done" #NeerajChopra does it pretty quickly & with ease before admin's laptop could wake up ????
With 88.39m, Olympic Champion from ???????? #India enters his first #WorldAthleticsChamps final in some style ???? at #Oregon2022 pic.twitter.com/y4Ez0Mllw6
— Athletics Federation of India (@afiindia) July 22, 2022
Advertisement
ಅಮೆರಿಕದ ಹೈವರ್ಡ್ ಮೈದಾನದಲ್ಲಿ ಭಾನುವಾರ ಮುಂಜಾನೆ ನಡೆಯಲಿರುವ ಫೈನಲ್‌ನಲ್ಲಿ ನೀರಜ್ ಸ್ಪರ್ಧಿಸಲಿದ್ದಾರೆ. ಕಳೆದ ತಿಂಗಳು ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್‌ನಲ್ಲಿ ನೀರಜ್ 89.94 ಮೀಟರ್ ಜಾವೆಲಿನ್ ಎಸೆಯುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದರು. ಇದನ್ನೂ ಓದಿ: 747 ವೆಬ್‌ಸೈಟ್, 94 ಯುಟ್ಯೂಬ್ ಚಾನೆಲ್‌ಗಳು ಬಂದ್
Advertisement
It felt amazing to be back on the Diamond League circuit and even better to get a new PB!
All the throwers put up a great show tonight for the crowd in Stockholm!
Next stop ➡️ Representing 🇮🇳 at the World Championships in Eugene pic.twitter.com/OpiXyrp4wv
— Neeraj Chopra (@Neeraj_chopra1) June 30, 2022
Advertisement
ಇದಕ್ಕೂ ಮುನ್ನ ಫಿನ್‌ಲ್ಯಾಂಡ್‌ನಲ್ಲಿ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 89.30 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು. ನಂತರ ಕುರ್ಟೇನ್ ಗೇಮ್ಸ್‌ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 86.69 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.