ಮಾಸ್ಕೋ: ವಿಶ್ವವೇ ನಮ್ಮೊಂದಿಗಿದೆ, ಸತ್ಯ ನಮ್ಮೊಂದಿಗಿದೆ. ಹೀಗಾಗಿ ಜಯ ನಮ್ಮದಾಗುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಷ್ಯಾ ಕೀವ್ ಮೇಲಿನ ದಾಳಿ ಮುಂದುವರಿಸಿರುವುದರಿಂದ ಕರಡು ನಿರ್ಣಯವು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ ಸಹ ಪ್ರಾಯೋಜಿತವಾಗಿದೆ. ಇದು ಈಗಾಗಲೇ ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ.
Advertisement
As ???????? continues to attack Kyiv, the draft resolution is co-sponsored by an unprecedented number of ???????? Member States. This proves: the world is with us, the truth is with us, the victory will be ours ????????!
— Володимир Зеленський (@ZelenskyyUa) February 25, 2022
Advertisement
ಇದಕ್ಕೂ ಮೊದಲು, ರಷ್ಯಾದ ಪಡೆಗಳು ರಾತ್ರಿ ಸಮಯದಲ್ಲಿ ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ನಾನು ಬಹಿರಂಗವಾಗಿ ಹೇಳಬೇಕಾಗಿದೆ. ಈ ರಾತ್ರಿ, ಹಗಲಿಗಿಂತಲೂ ಹೆಚ್ಚು ಕಷ್ಟಕರವಾಗಿರುತ್ತದೆ. ನಮ್ಮ ರಾಜ್ಯದ ಅನೇಕ ನಗರಗಳು ದಾಳಿಗೆ ಒಳಗಾಗಿವೆ ಎಂದಿದ್ದಾರೆ.
Advertisement
Advertisement
ಕೀವ್‍ನಲ್ಲಿ ವಿಶೇಷ ಗಮನ ಹರಿಸಿದ್ದೇವೆ. ನಾವು ರಾಜಧಾನಿಯನ್ನು ಕಳೆದುಕೊಳ್ಳುವುದಿಲ್ಲ. ನಾನು ನಮ್ಮ ರಕ್ಷಕರೊಂದಿಗೆ ಎಲ್ಲಾ ಪ್ರದೇಶಗಳಿಗೂ ಹೋಗುತ್ತಿದ್ದೇನೆ. ಈ ರಾತ್ರಿ ಶತ್ರುಗಳು ಅಮಾನವೀಯ ರೀತಿಯಲ್ಲಿ ನಮ್ಮನ್ನು ಹತ್ತಿಕ್ಕಲು ಎಲ್ಲಾ ಶಕ್ತಿಗಳನ್ನು ಬಳಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಉಕ್ರೇನ್ ಯುದ್ಧ ಭೀಕರತೆ ನಡುವೆಯೂ ಹಸೆಮಣೆ ಏರಿ ಜೋಡಿ ಸಂಭ್ರಮ
????Президент України Володимир Зеленський:
"Всі ми тут – захищаємо нашу Незалежність, нашу державу! Так буде й надалі. Слава нашим захисникам і захисницям! Слава Україні!????????" pic.twitter.com/hojX94ONDI
— Defense of Ukraine (@DefenceU) February 25, 2022
ನಿನ್ನೆ ಅಧ್ಯಕ್ಷ ಭವನದ ಎದುರು ಸ್ವಯಂ ವೀಡಿಯೋ ಮಾಡಿದ್ದ ಅವರು, ರಷ್ಯಾಕ್ಕೆ ಹೆದರಿ ನಾವೆಲ್ಲೂ ಓಡಿ ಹೋಗಿಲ್ಲ. ನಮ್ಮ ಸ್ವಾತಂತ್ರ್ಯವನ್ನು, ನಮ್ಮ ದೇಶವನ್ನು ರಕ್ಷಿಸುತ್ತಿದ್ದೇವೆ. ನಾವೆಲ್ಲರೂ ಇಲ್ಲೇ ಇದ್ದೇವೆ. ನಮ್ಮ ಮಿಲಿಟರಿಯೂ ಇಲ್ಲೇ ಇದೆ. ರಷ್ಯಾ ಆಕ್ರಮಣದ ವಿರುದ್ಧ ದೇಶವನ್ನು ಉಳಿಸಲು ಮತ್ತು ರಕ್ಷಿಸಲು ಪ್ರಮುಖ ಸಹಾಯಕರೊಂದಿಗೆ ಪ್ರತಿಜ್ಞೆ ಮಾಡಿದ್ದೇವೆ ಎಂದು ಹೇಳಿದ್ದರು. ಇದನ್ನೂ ಓದಿ: ಕಣ್ಣಲ್ಲಿ ನೀರು ತರಿಸುತ್ತಿದೆ 80 ವರ್ಷದ ವ್ಯಕ್ತಿ ಉಕ್ರೇನ್ ಸೇನೆಗೆ ಸೇರಲು ನಿಂತಿರುವ ಫೋಟೋ!
ವೀಡಿಯೋದಲ್ಲಿ ಮಿಲಿಟರಿ ಶೈಲಿಯ ಉಡುಪನ್ನು ಧರಿಸಿರುವ ಉಕ್ರೇನ್ ಅಧ್ಯಕ್ಷ ತನ್ನ ಸಿಬ್ಬಂದಿ, ಮುಖ್ಯಸ್ಥ ಹಾಗೂ ಇತರ ಹಿರಿಯ ಸಹಾಯಕ ಅಧಿಕಾರಿಯೊಂದಿಗೆ ನಿಂತು ಮಾತನಾಡಿದ್ದಾರೆ.