ಮೇ 13ರಿಂದ ಮೂರನೇ ಮಹಾಯುದ್ಧ ಆರಂಭ: ದಾರ್ಶನಿಕ ಹೇಳಿದ್ದು ಸತ್ಯವಾಗುತ್ತಾ?

Public TV
2 Min Read
world war iii prediction

ಲಂಡನ್: ಅಮೆರಿಕ, ರಷ್ಯಾ, ಉತ್ತರ ಕೊರಿಯಾಗಳ ನಡುವೆ ಯುದ್ಧದ ಮಾತುಕತೆ ಕೇಳಿ ಬರುತ್ತಿರುವಾಗಲೇ ಮೂರನೇ ಮಹಾಯುದ್ಧ ಮೇ 13ರಿಂದ ಆರಂಭವಾಗಲಿದೆ ಎಂದು ಟೆಕ್ಸಸ್ ದಾರ್ಶನಿಕ ಹೊರಶಿಯೋ ವಿಲೇಗಾಸ್ ಭವಿಷ್ಯ ನುಡಿದಿದ್ದಾರೆ.

2015ರಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಆಯ್ಕೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಹೊರಶಿಯೋ ವಿಲೇಗಾಸ್ ಮೂರನೇ ಮಹಾಯುದ್ಧದಲ್ಲಿ ವಿಶ್ವದ ಹಲವು ಕಡೆ ಅಣುಬಾಂಬ್ ಬೀಳಲಿದೆ ಎಂದು ಹೇಳಿದ್ದಾರೆ.

ಇಂಗ್ಲೆಂಡಿನ ಡೈಲಿಸ್ಟಾರ್ ಪತ್ರಿಕೆ ಹೊರಶಿಯೋ ವಿಲೇಗಾಸ್ ಭವಿಷ್ಯವಾಣಿಗೆ ಸಂಬಂಧಿಸಿದ ಸುದ್ದಿ ಪ್ರಕಟಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಭವಿಷ್ಯವಾಣಿ ಏನು?
ಮೂರನೇ ಮಹಾಯುದ್ದದ ವೇಳೆ ಅಪಾಯದಿಂದ ಪಾರಾಗಲು ಜನ ವಿಶ್ವದೆಲ್ಲೆಡೆ ವಲಸೆ ಹೋಗುತ್ತಾರೆ. ಈ ಅವಧಿಯಲ್ಲಿ ಹಲವು ನಗರಗಳ ಮೇಲೆ ಅಣ್ವಸ್ತ್ರ ದಾಳಿ ನಡೆಯಲಿದೆ. ಅಕ್ಟೋಬರ್‍ನಲ್ಲಿ ಯದ್ಧ ಅಂತ್ಯಗೊಳ್ಳುತ್ತದೆ. ಅಮೆರಿಕ, ರಷ್ಯಾ, ಸಿರಿಯಾ, ಕೊರಿಯಾಗಳ ನಡುವೆ ಆರಂಭದಲ್ಲಿ ಯುದ್ಧ ಪ್ರಾರಂಭವಾಗುತ್ತದೆ. ಇದಾದ ಬಳಿಕ ಚೀನಾವೂ ಇದಕ್ಕೆ ಸೇರ್ಪಡೆಯಾಗುತ್ತದೆ. ಅಮೆರಿಕದ ಹಿಟ್‍ಲಿಸ್ಟ್ ನಲ್ಲಿ ಈಗ ಉತ್ತರ ಕೊರಿಯಾ ಇದೆ ಎಂದು ಹೇಳಿದ್ದಾರೆ.

ಮೇ 13 ರಂದೇ ಯಾಕೆ?
ಈ ವರ್ಷ ಮೇ 13 – ಕ್ರಿಸ್ತನ ತಾಯಿ, ವರ್ಜಿನ್ ಮೇರಿ , ಅಂದರೆ ಅವರ್ ಲೇಡಿ ಆಫ್ ಫಾತಿಮಾ ಭೂಮಿಗೆ ಇಳಿದು ಬಂದ ನೂರನೇ ವರ್ಷಾಚರಣೆಯ ದಿನ. ಅಂದು ಮೂರನೇ ಮಹಾ ಯುದ್ಧ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಭವಿಷ್ಯವಾಣಿ ನಿಜವಾಗುತ್ತಾ?
ಟೆಕ್ಸಾಸ್‍ನಲ್ಲಿ ವಾಸವಾಗಿರುವ ಕ್ಯಾಥೋಲಿಕ್ ಅನುಯಾಯಿ ಹೊರಶಿಯೋ ವಿಲೇಗಾಸ್ 10 ವರ್ಷದ ಹಿಂದೆ ಪುಸ್ತಕ ಪ್ರಕಟಿಸಿದ್ದು, ಇದರಲ್ಲಿ ಮುಂದೆ ಜಗತ್ತಿನಲ್ಲಿ ಏನೇನು ಆಗಲಿದೆ ಎನ್ನುವುದನ್ನು ವಿವರಿಸಿದ್ದಾರೆ. ಸಿರಿಯಾದ ಮೇಲೆ ಆರಂಭದಲ್ಲಿ ದಾಳಿ ಆಗುತ್ತದೆ ನಂತರ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲದೇ ಅಮೆರಿಕವನ್ನು ಶತಕೋಟಿ ಡಾಲರ್‍ಗಳ ಒಡೆಯ ಆಳಲಿದ್ದಾರೆ ಎಂದು ಈ ಹಿಂದೆ ಹೇಳಿದ್ದರು. ಟ್ರಂಪ್ ಅಧ್ಯಕ್ಷರಾಗುತ್ತಾರೆ ಎಂದು ನಾನು ಫಲಿತಾಂಶ ಬರುವ 15 ತಿಂಗಳ ಮೊದಲೇ ಹೇಳಿದ್ದರೂ ಜನ ಯಾರೂ ನಂಬಲಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಬೈಬಲ್ ಮತ್ತು ವಿಶ್ವದ ಇತರ ಕೆಲವು ಧರ್ಮಗ್ರಂಥಗಳನ್ನು ಓದಿ ಅಧ್ಯಯನ ನಡೆಸಿದ್ದೇನೆ. ಈ ಕಾರಣದಿಂದಾಗಿ ಯಾವ ದಿನಾಂಕ ಪರಮಾಣು ಯುದ್ಧ ಆರಂಭವಾಗುತ್ತದೆ ಎನ್ನುವುದು ನನಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ವಿಶ್ವದಲ್ಲಿ ಏನಾಗ್ತಿದೆ?
ಸಿರಿಯಾ ನಡೆಸಿದ ಕೆಮಿಕಲ್ ದಾಳಿಗೆ ಪ್ರತಿಯಾಗಿ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಈ ವೈಮಾನಿಕ ದಾಳಿಯನ್ನು ರಷ್ಯಾ ಖಂಡಿಸಿದೆ. ಅಮೆರಿಕದ ಜೊತೆ ತಾನು ಯುದ್ಧಕ್ಕೆ ತಯಾರಾಗಿದ್ದೇನೆ ಎಂದು ತೋರಿಸಿಕೊಡಲು ಉತ್ತರ ಕೊರಿಯಾದ ಎರಡನೇ ಪ್ರಭಾವಿ ಅಧಿಕಾರಿ ಚೊ ಯಾಂಗ್, ಅಮೆರಿಕದ ಯಾವುದೇ ದಾಳಿಯನ್ನು ತಡೆದು ತಿರುಗೇಟು ನೀಡಲು ನಮ್ಮ ಸೇನೆ ಸಮರ್ಥವಾಗಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಕೊರಿಯಾದ ಮೇಲೆ ಅಮೆರಿಕ ದಾಳಿ ನಡೆಸಬಹದು ಎನ್ನುವ ಕಾರಣಕ್ಕೆ ಚೀನಾ ಮತ್ತು ರಷ್ಯಾ ಉತ್ತರ ಕೊರಿಯಾಗೆ ಹೊಂದಿಕೊಂಡಿರುವಗಡಿ ಭಾಗಕ್ಕೆ ಸೇನಾಪಡೆ ಹಾಗೂ ಯುದ್ಧ ಸಾಮಗ್ರಿಗಳನ್ನು ರವಾನಿಸಿದೆ.

ಮೊದಲ ಮಹಾಯುದ್ಧ 1914 ಜುಲೈ 28ರಿಂದ ಆರಂಭವಾಗಿ 1918ರ ನವೆಂಬರ್ 11ಕ್ಕೆ ಮುಕ್ತಾಯವಾಗಿತ್ತು. ಎರಡನೇ ಮಹಾಯುದ್ಧ, ಎರಡನೇ ಮಹಾಯುದ್ಧ 1939ರ ಸೆಪ್ಟೆಂಬರ್ 1ರಿಂದ ಆರಂಭವಾಗಿ 1945 ಸೆಪ್ಟೆಂಬರ್ 2ರಂದು ಕೊನೆಯಾಗಿತ್ತು.

Share This Article