– ನಗದು, ಮದ್ಯ ಡ್ರಗ್ಸ್ ಸೇರಿ 10,000 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ
ನವದೆಹಲಿ: ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಲ್ಲಿ 64.2 ಕೋಟಿಗೂ ಅಧಿಕ ಜನರು ಮತದಾನ ಮಾಡಿದ್ದು, ಭಾರತ ವಿಶ್ವ ದಾಖಲೆ ಬರೆದಿದೆ ಎಂದು ಕೇಂದ್ರ ಚುನಾವಣಾ ಆಯೋಗ (Election Commission Of India) ತಿಳಿಸಿದೆ.
2024ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನಾ ದಿನವೇ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ.
Advertisement
#WATCH | On Lok Sabha elections, CEC Rajiv Kumar says, “We have created a world record of 642 million voters. This is 1.5 times voters of all G7 countries and 2.5 times voters of 27 countries in EU.” pic.twitter.com/MkDbodZuyg
— ANI (@ANI) June 3, 2024
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಪಿ.ರಾಜೀವ್ ಕುಮಾರ್ (P Rajiv Kumar) ಈ ಬಾರಿ 64.2 ಕೋಟಿಗೂ ಅಧಿಕ ಮತದಾರರು (Voters) ಮತದಾನ ಮಾಡುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ. ಜೊತೆಗೆ ಮಹಿಳೆಯರೂ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
Advertisement
#WATCH | On Lok Sabha elections, CEC Rajiv Kumar says, “Due to the meticulous work of the election personnel we ensured fewer repolls – we saw 39 repolls in Lok Sabha polls 2024 as opposed to 540 in 2019 and 25 out of 39 repolls were in 2 States only.” pic.twitter.com/7cwDYuLWPR
— ANI (@ANI) June 3, 2024
Advertisement
ದೇಶಾದ್ಯಂತ 64.2 ಕೋಟಿಗೂ ಅಧಿಕ ಜನ ಹಕ್ಕು ಚಲಾಯಿಸಿದ್ದಾರೆ. ಇದು G7 ರಾಷ್ಟ್ರಗಳಿಗಿಂತ 1.5 ಪಟ್ಟು ಹಾಗೂ 27 ಯುರೋಪಿಯನ್ ರಾಷ್ಟ್ರಗಳಿಗಿಂತಲೂ (European Nations) 2.5 ಪಟ್ಟು ಹೆಚ್ಚಾಗಿದೆ. ಅಲ್ಲದೇ ದೇಶದಲ್ಲಿ 31 ಕೋಟಿ ಮಹಿಳಾ ಮತದಾರರು ಮತ ಚಲಾಯಿಸಿದ್ದು, ಇದೇ ಮೊದಲಬಾರಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ ಎಂದು ಪಿ.ರಾಜೀವ್ ಕುಮಾರ್ ಮಾಹಿತಿ ಹಂಚಿಕೊಂಡರು. ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಮತದಾರ ಪ್ರಭುಗಳಿಗೆ ಆಯೋಗದ ಅಧಿಕಾರಿಗಳು ಎದ್ದುನಿಂತು ಚಪ್ಪಾಳೆ ಹೊಡೆಯುವ ಮೂಲಕ ಅಭಿನಂದಿಸಿದರು.
#WATCH | Ahead of Lok Sabha elections counting, CEC Rajiv Kumar says, “Postal ballot counting will start first. After only half an hour, we will start EVM counting. There is no doubt about it.” pic.twitter.com/oG3RHOIb4l
— ANI (@ANI) June 3, 2024
2024ರ ಲೋಕಸಭಾ ಚುನಾವಣೆ ಕರ್ತವ್ಯ ನಿರ್ವಹಣೆಗೆ ಸುಮಾರು 4 ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ವಿಮಾನಗಳನ್ನು ಬಳಸಲಾಗಿದೆ. 39 ಕೇಂದ್ರಗಳಲ್ಲಿ ಮಾತ್ರವೇ ಮರುಮತದಾನ ನಡೆದಿದೆ. ಜಮ್ಮು ಮತ್ತು ಕಾಶ್ಮೀರವು ಕಳೆದ 4 ದಶಕಗಳಲ್ಲಿ ದಾಖಲೆಯ ಶೇ.58.58 ಮತ್ತು ಕಾಶ್ಮೀರದಲ್ಲಿ ಶೇ.51.05 ರಷ್ಟು ಮತದಾನವಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಈ ಬಾರಿ ಡ್ರಗ್ಸ್, ನಗದು, ಚಿನ್ನಾಭರಣ ಸೇರಿ ದಾಖಲೆಯ 10,000 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರಲ್ಲಿ ಇದರ ಪ್ರಮಾಣ 3,500 ಕೋಟಿ ರೂ.ಗಳಷ್ಟಿತ್ತು.