ಬೆಂಗಳೂರು: ವಿಶ್ವ ಅಂಗಾಂಗ ದಿನ ಪ್ರಯುಕ್ತ ಮೋಹನ್ ಫೌಂಡೇಶನ್ (ಅಂಗಾಂಗ ದಾನ) ವತಿಯಿಂದ ನಗರದಲ್ಲಿ ಜನ್ರಿಗೆ ಜಾಗೃತಿ ಮೂಡಿಸಲಾಯಿತು.
ನಗರದ ವಿವಿಧಡೆ ಜಾಗೃತಿ ಮೂಡಿಸಿ, ಅಂಗಾಂಗ ದಾನ ಎಷ್ಟು ಮುಖ್ಯ ಯಾರಿಗೆ ಅವಶ್ಯಕತೆ ಇರುತ್ತದೆ. ಅವಶ್ಯಕತೆ ಇದ್ದವರಿಗೆ ಹೇಗೆ ಅಂಗಾಂಗ ದಾನಗಳನ್ನ ಮಾಡಬೇಕೆಂಬ ಕಾನೂನಾತ್ಮಕ ಪ್ರಕ್ರಿಯೆಗಳನ್ನ ತಿಳಿಸಲಾಯಿತು.
Advertisement
Advertisement
ನಗರದ ಖಾಸಗಿ ಕಾಲೇಜಿಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳಿಗೆ ಮಾನವನ ಅಂಗಾಂಗ ದಾನ ಪ್ರಕ್ರಿಯೆ ಹಾಗೂ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಲಾಯಿತು. 700 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಅಂಗಾಂಗ ದಾನದಿಂದ ಏನು ಪ್ರಯೋಜನ, ಯಾಕೆ ಮಾಡಬೇಕು, ಇನ್ನೊಬ್ಬರ ಜೀವನಕ್ಕೆ ಹೇಗೆ ಸಹಾಯಕಾರಿಯಾಗಲಿದೆ ಎಂದು ಮೋಹನ್ ಫೌಂಡೇಶನ್‍ನ ಪ್ರಾಜೆಕ್ಟ್ ಮ್ಯಾನೆಜರ್ ರಂಜಿನಿ ಶಂಕರ್ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಜಾಗೃತಿ ಮೂಡಿಸಿದ್ದಾರೆ.
Advertisement
Advertisement
ಮೋಹನ್ ಫೌಂಡೇಶನ್ ಎಂಬುದು, ಸರ್ಕಾರದ ಅಧಿನದಲ್ಲಿ ಬರುವ ಬಹು ಅಂಗಾಂಗಗಳನ್ನ ದಾನ ಮಾಡುವ ಸಂಸ್ಥೆಯಾಗಿದೆ. ಈ ಸಂಸ್ಥೆ ಸರ್ಕಾರದ ಜೀವ ಸಾರ್ಥಕತೆಯ ತಂಡದೊಂದಿಗೆ ಸೇರಿ ಹಲವರಿಗೆ ಬಹು ಅಂಗಾಂಗಗಳನ್ನ ಜೋಡಣೆ ಮಾಡಿ, ಜೀವವನ್ನ ಉಳಿಸಿದ್ದಾರೆ