ಬೆಂಗಳೂರು: ಟಿಕ್ ಟಾಕ್ ಅಪ್ಲಿಕೇಶನ್ ಬಳಕೆಯಲ್ಲಿ ಚೀನಾ ಹೊರತು ಪಡಿಸಿದ ದೇಶಗಳ ಪೈಕಿ ವಿಶ್ವದಲ್ಲಿ ಭಾರತವೇ ನಂಬರ್ ಒನ್ ಸ್ಥಾನ ಪಡೆದಿದ್ದು, 2019ರಲ್ಲಿ ಭಾರತೀಯರು ಒಟ್ಟು 555 ಕೋಟಿ ಗಂಟೆಯನ್ನು ಕಳೆದಿದ್ದಾರೆ.
ಮೊಬೈಲ್ ಅನಲಿಟಿಕಾ ಕಂಪನಿ ಆಪ್ ಅನ್ನಿ ಈ ಮಾಹಿತಿಯನ್ನು ನೀಡಿದ್ದು, ವಿಡಿಯೋ ವೀಕ್ಷಣೆ ಮಾಡುವವರ ಸಂಖ್ಯೆ 6 ಪಟ್ಟು ಹೆಚ್ಚಾಗಿದ್ದು 2018ರಲ್ಲಿ ಭಾರತೀಯರು 90 ಕೋಟಿ ಗಂಟೆ ಕಳೆದಿದ್ದರು.
Advertisement
ಒಂದು ತಿಂಗಳ ಸಕ್ರೀಯ ಬಳಕೆದರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಶೇ.90 ರಷ್ಟು ಏರಿಕೆಯಾಗಿದ್ದು ಒಟ್ಟು 8.1 ಕೋಟಿ ಮಂದಿ ಬಳಕೆ ಮಾಡುತ್ತಿದ್ದಾರೆ. ಫೇಸ್‍ಬುಕ್ ಶೇ.15 ರಷ್ಟು ಏರಿಕೆ ಆಗಿದ್ದು ಒಟ್ಟು 2,500 ಕೋಟಿ ಗಂಟೆಗಳ ಕಾಲ ಭಾರತೀಯರು ವೀಕ್ಷಣೆ ಮಾಡಿದ್ದಾರೆ.
Advertisement
Advertisement
ಟಿಕ್‍ಟಾಕ್ ಅಭಿವೃದ್ಧಿ ಪಡಿಸಿರುವ ಚೀನಾದ ಬೈಟ್ ಡ್ಯಾನ್ಸ್ ಕಂಪನಿಯ ಮೌಲ್ಯ 75 ಶತಕೋಟಿ ಡಾಲರ್ ತಲುಪಿದೆ. ಫೇಸ್‍ಬುಕ್ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿರುವ ಟಿಕ್‍ಟಾಕ್ ಭಾರತದಲ್ಲಿ ಸೆಪ್ಟೆಂಬರ್ 2017ರಿಂದ ಲಭ್ಯವಿದೆ. ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್ ಸೆಪ್ಟೆಂಬರ್ 2006ರಿಂದ ಭಾರತದಲ್ಲಿ ಲಭ್ಯವಿದೆ.
Advertisement
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಟಿಕ್ ಟಾಕ್ ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 100 ಕೋಟಿ ರೂ. ಆದಾಯದ ಗಳಿಸಬೇಕೆಂಬ ಗುರಿಯನ್ನು ಹಾಕಿಕೊಂಡಿದೆ. ಎಂಟ್ರಾಕರ್ ವರದಿಯ ಪ್ರಕಾರ ಡಿಸೆಂಬರ್ ತ್ರೈಮಾಸಿಕದಲ್ಲಿ ಟಿಕ್‍ಟಾಕ್ 23-25 ಕೋಟಿ ರೂ. ಆದಾಯಗಳಿಸಿದೆ.
ಟಿಕ್‍ಟಾಕ್ ಬಳಕೆಯಲ್ಲಿ ಭಾರತದ ನಂತರದ ಸ್ಥಾನವನ್ನು ಪಾಕಿಸ್ತಾನ ಪಡೆದುಕೊಂಡಿದೆ. ನಂತರದ ಸ್ಥಾನ ಅಮೆರಿಕ, ರಷ್ಯಾ, ವಿಯೆಟ್ನಾಂ, ಟರ್ಕಿ, ಇಂಡೋನೇಷ್ಯಾ, ಈಜಿಪ್ಟ್ ಪಡೆದುಕೊಂಡಿದೆ.