– ಹಿಂದೆ ವಿಶ್ವದಲ್ಲಿ ಪಾಶ್ಚಿಮಾತ್ಯ ದೇಶಗಳು ಪ್ರಾಬಲ್ಯ ಹೊಂದಿದ್ದವು
– ಇಂದು ಪಾಶ್ಚಿಮೇತರ ದೇಶಗಳು ನಿಲುವು ತೆಗೆದುಕೊಳ್ಳುತ್ತಿವೆ
ನವದೆಹಲಿ: ಸ್ವಾತಂತ್ರ್ಯದ ನಂತರ ರಷ್ಯಾದೊಂದಿಗಿನ (Russia) ನಮ್ಮ ಇತಿಹಾಸವನ್ನು ನೋಡಿದರೆ ನಮ್ಮ ಹಿತಾಸಕ್ತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ರಷ್ಯಾ ಎಂದಿಗೂ ಏನನ್ನೂ ಮಾಡಿಲ್ಲ ಎಂದು ನಾನು ಹೇಳಬಲ್ಲೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಹೇಳಿದ್ದಾರೆ.
Advertisement
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಹೋಗುತ್ತಿದ್ದಾರೆ. ಇಂದು ರಷ್ಯಾದ ಪರಿಸ್ಥಿತಿಯು ವಿಭಿನ್ನವಾಗಿದೆ ಎಂದು ನಾನು ಭಾವಿಸುತ್ತೇನೆ. ಪಾಶ್ಚಿಮಾತ್ಯ ದೇಶಗಳ ಜೊತೆ ಬಹುತೇಕ ರಷ್ಯಾದ ಸಂಬಂಧ ಮುರಿದು ಬಿದ್ದಿದೆ. ರಷ್ಯಾ ಈಗ ಏಷ್ಯಾದ ದೇಶಗಳತ್ತ ಹೆಚ್ಚು ವಾಲುತ್ತಿದೆ. ಏಷ್ಯಾದ ದೇಶವಾಗಿರುವ ನಾವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಮಗೆ ಇಂದು ಒಳ್ಳೆಯದಾಗುತ್ತಿದೆ. ರಷ್ಯಾವು ಪ್ರಮುಖ ನೈಸರ್ಗಿಕ ಸಂಪನ್ಮೂಲ ಶಕ್ತಿಯಾಗಿದ್ದು ನಾವು ದೊಡ್ಡ ಗ್ರಾಹಕರಾಗಿದ್ದೇವೆ ಎಂದು ಹೇಳಿದರು.
Advertisement
ಹಿಂದೆ ಪಶ್ಚಿಮದ ರಾಷ್ಟ್ರಗಳು (Western Countries) ವಿಶ್ವದಲ್ಲಿ ಪ್ರಾಬಲ್ಯವನ್ನು ಹೊಂದಿದ್ದವು. ಆದರೆ ಕಳೆದ 20-25 ವರ್ಷಗಳಲ್ಲಿ ಪಾಶ್ಚಿಮಾತ್ಯೇತರ ದೇಶಗಳು ವಿಶ್ವಕ್ಕೆ ಕೊಡುಗೆ ನೀಡುತ್ತಿವೆ. ಇದರಿಂದಾಗಿ ಮರು ಸಮತೋಲನ, ಬಹುಧ್ರುವೀಯತೆ ಆರಂಭವಾಗಿದೆ ಎಂದರು. ಇದನ್ನೂ ಓದಿ: 16 ಮಕ್ಕಳನ್ನು ಹೊಂದುವ ಬಗ್ಗೆ ಯೋಚಿಸಿ – ತಮಿಳುನಾಡು ಸಿಎಂ ಸ್ಟಾಲಿನ್ ಕರೆ ಕೊಟ್ಟಿದ್ದೇಕೆ?
Advertisement
Advertisement
#WATCH | Delhi: On India-Russia relations, EAM Dr S Jaishankar says “PM Modi is going to Russia tomorrow. If you look at our history with Russia after independence, I can say that Russia has never done anything to impact our interests negatively. There are not many countries… pic.twitter.com/hKsLAEKjOi
— ANI (@ANI) October 21, 2024
ಸ್ವಲ್ಪ ಮಟ್ಟಿಗೆ ಸಾಮಾನ್ಯ ಪಾಶ್ಚಾತ್ಯ ದೇಶಗಳಿಗೆ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ 1945 ರ ಮೊದಲು ಮತ್ತು ನಂತರದ ವಿಶ್ವ ಕ್ರಮವು ಪಾಶ್ಚಾತ್ಯವಾಗಿತ್ತು. ಹಿಂದೆ ನೀವು ಮೇಲಕ್ಕೆ ನೋಡುತ್ತಿದ್ದಾಗ ನಾನು ಕೆಳಗೆ ನೋಡುತ್ತಿದ್ದೆ. ಆದರೆ ಇನ್ನು ಮುಂದೆ ಹಾಗೆ ಇರುವುದಿಲ್ಲ. ಭಾರತ, ಚೀನಾದಂತಹ ದೊಡ್ಡ ರಾಷ್ಟ್ರಗಳು ತಮ್ಮದೇ ನಿಲುವುಗಳನ್ನು ತಗೆದುಕೊಳ್ಳುತ್ತದೆ. ಹೀಗಾಗಿ ಪಶ್ಚಿಮದ ದೇಶಗಳಿಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಶ್ಚಿಮಾತ್ಯ ಮತ್ತು ಪಾಶ್ಚಿಮಾತ್ಯೇತರ ದೇಶಗಳ ನಡುವಿನ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ಇದು ವಿಶ್ವ ಕ್ರಮ ಬದಲಾಗುತ್ತಿದ್ದು ಪಾಶ್ಚಿಮಾತ್ಯೇತರ ದೇಶಗಳು ತಮ್ಮದೇ ದೃಷ್ಟಿಕೋನಗಳನ್ನು ತೆಗೆದುಕೊಳ್ಳಲು ಬಯಸಿದಾಗ ಘರ್ಷಣೆ, ವಾದಗಳು ಇರುತ್ತದೆ ಎಂದರು.
S Jaishankar, EAM:
“World Order was West Dominated but in the last 20-25 years, Non-Western countries are rising.
~ It’s not easy to adjust. If once you were looking up & I was looking down, but it is no longer like that, then it takes time to get used to.”😂
Great Analogy 👌 pic.twitter.com/w4ydcXANM5
— The Analyzer (News Updates🗞️) (@Indian_Analyzer) October 22, 2024
ಪಾಶ್ಚಿಮಾತ್ಯೇತರ ದೇಶಗಳು ವಿಶ್ವಕ್ಕೆ ದೊಡ್ಡ ಕೊಡುಗೆ ನೀಡಿದ್ದರಿಂದ ಹೆಚ್ಚು ಪ್ರಭಾವವನ್ನು ಹೊಂದಿರುತ್ತದೆ ಮತ್ತು ಸ್ವಾಭಾವಿಕವಾಗಿ ಇದು ಬರುತ್ತದೆ. ಆದರೆ ಕಳೆದ 20-25 ವರ್ಷಗಳಲ್ಲಿ ಏನಾಯಿತು ಎಂದರೆ ಮರುಸಮತೋಲನ, ಬಹುಧ್ರುವೀಯತೆ ಆರಂಭವಾಯಿತು. ಭಾರತ ಮತ್ತು ಚೀನಾದಂತಹ (China) ದೊಡ್ಡ ದೇಶಗಳು ತೆಗೆದುಕೊಂಡಿರುವ ಸ್ವತಂತ್ರ ದೃಷ್ಟಿಕೋನಗಳು ಮತ್ತು ನಿಲುವುಗಳು ಪಾಶ್ಚಿಮಾತ್ಯರೊಂದಿಗೆ ವಾದಗಳು ಮತ್ತು ಘರ್ಷಣೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಭಾರತೀಯ ಪತ್ರಕರ್ತರು ಕೆನಡಾದ ಹೈಕಮಿಷನರ್ ಬಗ್ಗೆ ವರದಿ ಮಾಡುವಾಗ ಕೆನಡಾ ವಿದೇಶಿ ಹಸ್ತಕ್ಷೇಪ ಎಂದು ಆರೋಪಿಸುತ್ತದೆ. ಆದರೆ ಅವರ ರಾಜತಾಂತ್ರಿಕರು ಕೆನಡಾದ ರಾಜತಾಂತ್ರಿಕರು ನಮ್ಮ ಮಿಲಿಟರಿ, ಪೋಲೀಸ್, ಜನರನ್ನು ಗುರಿಯಾಗಿಸುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಯಾವುದೇ ಸಮಸ್ಯೆ ಇಲ್ಲ ತಿರುಗೇಟು ನೀಡಿದರು.