ಸ್ಥಳೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಒತ್ತು: ನರೇಂದ್ರಮೋದಿ

Public TV
1 Min Read
NARENDRA MODI

ನವದೆಹಲಿ: ಏ.7ರ ದಿನವನ್ನು ವಿಶ್ವದಾದ್ಯಂತ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂತೆಯೇ ಈ ಬಾರಿ ಭಾರತದಲ್ಲಿ `ನಮ್ಮ ಆರೋಗ್ಯ ನಮ್ಮ ಗ್ರಹ’ (ಅವರ್ ಪ್ಲಾನೆಟ್, ಅವರ್ ಹೆಲ್ತ್) ಘೋಷವಾಕ್ಯದೊಂದಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯಕೀಯ ಕ್ಷೇತ್ರದಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಶುಭ ಹಾರೈಸಿದ್ದಾರೆ.

ಈ ದಿನವನ್ನುದ್ದೇಶಿಸಿ ಮಾತನಾಡಿರುವ ಅವರು, ಕಳೆದ 8 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಯಾಗಿದೆ. ಹಲವಾರು ಹೊಸ ವೈದ್ಯಕೀಯ ಕಾಲೇಜುಗಳು ತಲೆಎತ್ತಿದ್ದು, ಸ್ಥಳೀಯ ಭಾಷೆಗಳಲ್ಲೇ ವೈದ್ಯಕೀಯ ಅಧ್ಯಯನವನ್ನು ಸಕ್ರಿಯಗೊಳಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಅಸಂಖ್ಯಾತ ಯುವಸಮೂಹದ ಆಕಾಂಕ್ಷಿಗಳಿಗೆ ತಳಹದಿ ಹಾಕಿಕೊಡಲಿದೆ ಎಂದು ಆಶ್ವಾಸನೆ ನೀಡಿದ್ದಾರೆ. ಇದನ್ನೂ ಓದಿ: ನರೇಂದ್ರ ಮೋದಿ ದೈವ ಪುರುಷ: ಶಶಿಕಲಾ ಜೊಲ್ಲೆ

HEALTH

ನಮ್ಮ ರಾಷ್ಟ್ರವು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣೆ ಯೋಜನೆಯಾದ ಆಯುಷ್ಮಾನ್ ಭಾರತ್‌ಗೆ ನೆಲೆಯಾಗಿದೆ ಎಂಬುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತರುತ್ತದೆ. ಪ್ರಧಾನಮಂತ್ರಿ ಜನ್‌ಧನ್‌ ಔಷಧಿಯಂತಹ ಯೋಜನೆಗಳ ಫಲಾನುಭವಿಗಳೊಂದಿಗೆ ನಾನು ಸಂವಾದ ನಡೆಸಿದಾಗ, ಅವರಿಂದ ಬಂದ ಅಭಿಪ್ರಾಯಗಳಿಂದ ನನಗೂ ಸಂತೋಷವಾಗಿದೆ. ಕೈಗೆಟುಕುವ ದರದಲ್ಲಿ ಆರೋಗ್ಯ ಸೌಕರ್ಯಗಳನ್ನು ಕಲ್ಪಿಸುತ್ತಾ ಬಡ ಮತ್ತು ಮಧ್ಯಮ ವರ್ಗದವರಿಗೆ ಗಮನಾರ್ಹ ಉಳಿತಾಯವನ್ನೂ ಖಾತ್ರಿಪಡಿಸಿದೆ. ಇದೇ ಸಮಯದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸಲು ಆಯುಷ್ಮಾನ್ ಆರೋಗ್ಯ ಕಾರ್ಡ್ ಅನ್ನು ಬಲಪಡಿಸಲು ಮುಂದಾಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ರದ್ದು – ಸರ್ಕಾರಕ್ಕೆ ಮಾಹಿತಿ ರವಾನೆ

ಈ ದಿನವು ಸಾಂಕ್ರಾಮಿಕ, ಕಲುಷಿತ ಗ್ರಹ, ಕ್ಯಾನ್ಸರ್, ಅಸ್ತಮಾ, ಹೃದ್ರೋಗದಂತಹ ಕಾಯಿಲೆಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ಮೇಲೆ ತುರ್ತು ಕ್ರಮಗಳ ಮೇಲೆ ಜಾಗತಿಕ ಗಮನವನ್ನು ಕೇಂದ್ರೀಕರಿಸುತ್ತದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *