ಲಂಡನ್: ಕಾರಿನ ಸೀಟ್ ತಯಾರಕರಲ್ಲಿ ಪರಿಣತರಾದ ಮ್ಯಾಕ್ಸಿ ಕೊಸಿ ಮೊದಲ ಬಾರಿಗೆ ಏರ್ ಬ್ಯಾಗ್ ಇರೋ ಮಕ್ಕಳ ಸೀಟ್ ಅನ್ನು ತಯಾರು ಮಾಡಿದೆ. ಸದ್ಯಕ್ಕೆ ಇಂಗ್ಲೆಂಡ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಕಾರಿನಲ್ಲಿ ಪ್ರಯಾಣಿಸುವವರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಸುರಕ್ಷತೆ ದೃಷ್ಟಿಯಿಂದ ಹೊಸ ಹೊಸ ಆವಿಷ್ಕಾರ, ತಂತ್ರಜ್ಞಾನಗಳನ್ನು ಕಂಪನಿ ಎದುರು ನೋಡುತ್ತಿರುತ್ತದೆ. ಮ್ಯಾಕ್ಸಿ ಕೊಸಿ ಮತ್ತು ಹೆಲೈಟ್ ಕಂಪನಿಗಳ ಸಹಯೋಗದಲ್ಲಿ ಮಕ್ಕಳ ಗಾಳಿ ಚೀಲದ ಸೀಟ್ ಗಳು ಮಾರುಕಟ್ಟೆಗೆ ಬಂದಿವೆ ಎಂದು ತಿಳಿಸಿದೆ.
Advertisement
ಹೊಸ ಮಾದರಿಯ ಸೀಟ್ ಗಳು ಮಕ್ಕಳ ತಲೆ ಮತ್ತು ಕುತ್ತಿಗೆಯ ಸುರಕ್ಷತೆಯನ್ನು 55% ಅಷ್ಟು ಹೆಚ್ಚಿಸಿದೆ. ಸೀಟಿನ ಭುಜದ ಪ್ಯಾಡ್ ಗಳಲ್ಲಿ ಗಾಳಿ ಚೀಲವನ್ನು ಅಳವಡಿಸಲಾಗಿದ್ದೂ ಅಪಘಾತದ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದೆ.
Advertisement
61 ರಿಂದ 105 ಸೆಂಟಿ ಮೀಟರ್ ಎತ್ತರವಿರುವ ಮಕ್ಕಳಿಗೆ ಸೀಟ್ ವ್ವವಸ್ಥೆ ಉತ್ತಮವಾಗಿರುತ್ತದೆ. ಸೀಟ್ ಅನ್ನು ಸುತ್ತಲೂ ತಿರುಗಿಸಬಹುದಾಗಿದೆ. ಭುಜದ ಪ್ಯಾಡ್ ಗಳಲ್ಲಿ ಎರಡು ಸಣ್ಣ ಗಾಳಿ ಚೀಲಗಳಿವೆ. ಸೆನ್ಸರ್ ಮೇಲೆ ಇರುವ ಸೀಟಿಂಗ್ ವ್ಯವಸ್ಥೆಯು ಅಪಘಾತವಾದ 0.05 ಸೆಕೆಂಡ್ ಗಳಲ್ಲಿ ಏರ್ ಬ್ಯಾಗ್ ಗಳಲ್ಲಿ ಗಾಳಿ ತುಂಬಿಕೊಳ್ಳಲಿದೆ ಎಂದು ತಿಳಿಸಿದೆ.
Advertisement
ಸೀಟಿನ ಬೆಲೆ 51 ಸಾವಿರ ರೂಪಯಿ. ಸುರಕ್ಷತೆ ದೃಷ್ಟಿಯಿಂದ ತಂತ್ರಜ್ಞಾನವನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದು ಮ್ಯಾಕ್ಸಿ ಕೊಸಿ ತಿಳಿಸಿದೆ.
Advertisement
https://www.youtube.com/watch?v=BQlACqNksQ0