ವಿಜಯಪುರ: ಶ್ರೀಗಂಧ ಬೆಳೆಗಾರರಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಜಿಲ್ಲೆಯಲ್ಲಿ ಜ.11 ರಿಂದ 20 ರವರೆಗೆ ವಿಶ್ವವಿಖ್ಯಾತ ಮೈಸೂರು ಸ್ಯಾಂಡಲ್ ಸಾಬೂನು ಮೇಳವನ್ನು (Mysuru Sandal Soap Mela) ಆಯೋಜಿಸಲಾಗಿದೆ.
ಈ ಕುರಿತು ಕೆಎಸ್‌ಡಿಎಲ್ (KSDL) ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ ಪಿಕೆಎಂ ಮಾತನಾಡಿ, ಮೈಸೂರು ಶ್ರೀಗಂಧದ ಎಣ್ಣೆ ಮತ್ತು ಶ್ರೀಗಂಧದ ಸಾಬೂನು ಉತ್ಪನ್ನಗಳನ್ನು ಪ್ರಚುರಪಡಿಸುವ ಮೂಲಕ ಶ್ರೀಗಂಧ ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ವಿಜಯಪುರದಲ್ಲಿ (Vijayapura) ಜ.11 ರಿಂದ 20ರವರೆಗೆ ಮೇಳ ಆಯೋಜಿಸಲಾಗಿದ್ದು, ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ಈ ಸಾಬೂನು ಮೇಳ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 09:30 ರಿಂದ ರಾತ್ರಿ 09:30 ರವರೆಗೆ ಮೇಳ ನಡೆಯಲಿದೆ.ಇದನ್ನೂ ಓದಿ: ಹೃದಯಾಘಾತದಿಂದ 8 ವರ್ಷದ ಬಾಲಕಿ ಸಾವು
Advertisement
Advertisement
ಈ ಬಾರಿ ವಿಶೇಷ ಆಕರ್ಷಣೆಯೊಂದಿಗೆ ಮೈಸೂರು ಆರಮನೆಯ ದರ್ಬಾರ್ ಹಾಲ್ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಸಂಸ್ಥೆ ಉತ್ಪಾದಿಸುತ್ತಿರುವ 48ಕ್ಕೂ ಹೆಚ್ಚು ಉತ್ಕೃಷ್ಟ ದರ್ಜೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (Karnataka Soaps and Detergents Limited) ಸಂಪೂರ್ಣ ಸರ್ಕಾರಿ ಸ್ವಾಮ್ಯದ ಒಡೆತನದಲ್ಲಿದ್ದು, ನೈಸರ್ಗಿಕ ಶ್ರೀಗಂಧದ ಎಣ್ಣೆಯಿಂದ ತಯಾರಿಸಿರುವ ಮೈಸೂರು ಸ್ಯಾಂಡಲ್ ಸಾಬೂನಿನಿಂದ ವಿಶ್ವವಿಖ್ಯಾತಿ ಪಡೆದಿದೆ. ಭೌಗೋಳಿಕ ಸ್ವಾಮ್ಯ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದು, ಭಾರತದ ಬೌದ್ಧಿಕ ಆಸ್ತಿಯಾಗಿರುತ್ತದೆ. ಸಂಸ್ಥೆಯು 2010ರಲ್ಲಿ ಮತ್ತು 2019ರಲ್ಲಿ ಸಾರ್ವಜನಿಕ ಶ್ರೇಷ್ಠತೆಗಾಗಿ ಮುಖ್ಯಮಂತ್ರಿ ರತ್ನ ಪ್ರಶಸ್ತಿಯೂ ಸೇರಿದಂತೆ ರಫ್ತು ಹಾಗೂ ಕಾಸ್ಟ್ ಅಕೌಂಟಿಂಗ್ ನಿರ್ವಹಣೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ ಎಂದರು.
Advertisement
ಸAಸ್ಥೆಯ ಶ್ರೀಗಂಧದೆಣ್ಣೆ ಸೇರಿದಂತೆ ಸಾಬೂನು, ಮಾರ್ಜಕ, ಸೌಂದರ್ಯವರ್ಧಕ, ಅಗರಬತ್ತಿ ಸೇರಿದಂತೆ ಸುಮಾರು 38 ಉತ್ಪನ್ನಗಳನ್ನು ತಯಾರಿಸುತ್ತಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯು ನಮ್ಮ ಪರಂಪರೆ, ನಮ್ಮ ಸಂಸ್ಕೃತಿಯ ಪ್ರತೀಕವಾದ ಸುಗಂಧ ರಾಯಭಾರಿ ಎಂದೇ ವಿಶ್ವವಿಖ್ಯಾತಿ ಪಡೆದಿದೆ.
Advertisement
ಮೈಸೂರು ಶ್ರೀಗಂಧದ ಎಣ್ಣೆ ಮತ್ತು ಮೈಸೂರು ಶ್ರೀಗಂಧದ ಸಾಬೂನು ತಯಾರಿಸುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆ 100 ವರ್ಷಗಳ ಭವ್ಯ ಪರಂಪರೆ ಮತ್ತು ಇತಿಹಾಸವಿರುವ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಂಸ್ಥೆ. ಶ್ರೀಗಂಧದ ಎಣ್ಣೆ ಮತ್ತು ಮೈಸೂರು ಶ್ರೀಗಂಧದ ಸಾಬೂನು ವಿಶ್ವದರ್ಜೆಯ ಉತ್ಪನ್ನಗಳಾಗಿದ್ದು, ಭಾರತೀಯ ಜಿಯೋಗ್ರಾಫಿಕಲ್ ರಿಜಿಸ್ಟ್ರಿಯಲ್ಲಿ ನೋಂದಣಿಗೊಂಡಿರುತ್ತದೆ ಎಂದು ತಿಳಿಸಿದರು.ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಪೆಟ್ಟು- ‘ಸಿಖಂದರ್’ ಚಿತ್ರದ ಶೂಟಿಂಗ್ ಸ್ಥಗಿತ