ನವದೆಹಲಿ: ವಿಶ್ವ ಪರಿಸರ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ದೆಹಲಿ ನಿವಾಸದ ಎದುರು ಸಿಂದೂರ ಸಸಿ ನೆಟ್ಟಿದ್ದಾರೆ.
1971 ರ ಯುದ್ಧದಲ್ಲಿ ಶೌರ್ಯದ ಮೆರೆದಿದ್ದ ಕಚ್‌ನ ಮಹಿಳೆಯರ ಗುಂಪು ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿಯವರಿಗೆ ಸಿಂಧೂರ್ ಗಿಡವನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನೂ ಓದಿ: ಇನ್ಮುಂದೆ ಭಾರತದಲ್ಲೇ ತಯಾರಾಗುತ್ತೆ ರಫೇಲ್ ಬಿಡಿಭಾಗಗಳು – ಟಾಟಾ ಜೊತೆ ಡಸಾಲ್ಟ್ ಒಪ್ಪಂದ
ಗಿಡ ನೆಡುತ್ತಿರುವ ಫೋಟೋವನ್ನು ಮೋದಿಯವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಶ್ವ ಪರಿಸರ ದಿನದಂದು, 1971 ರ ಯುದ್ಧದಲ್ಲಿ ಹೋರಾಡಿದ್ದ ತಾಯಂದಿರು ಹಾಗೂ ಸಹೋದರಿಯರು ಸಿಂದೂರ ಗಿಡವನ್ನು ನನಗೆ ಕೊಟ್ಟಿದ್ದರು. ಆ ಗಿಡ ನೆಡುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಗಿಡ ನಮ್ಮ ದೇಶದ ಮಹಿಳಾ ಶಕ್ತಿಯ ಶೌರ್ಯ ಮತ್ತು ಸ್ಫೂರ್ತಿಯ ಬಲವಾದ ಸಂಕೇತವಾಗಿ ಉಳಿಯಲಿದೆ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಡಿ ಮಾಜಿ ಸಂಸದನ ಮದುವೆಯಾದ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ – ಜರ್ಮನಿಯಲ್ಲಿ ಮದುವೆಯಾಗಿರುವ ಫೋಟೋ ವೈರಲ್