ದಾವೋಸ್: ಕೆಲ ವರ್ಷಗಳಲ್ಲಿ ಸೌರಶಕ್ತಿ ಚಾಲಿತ ಎಐ ಉಪಗ್ರಹಗಳನ್ನು (Solar-Powered AI Satellites) ಉಡಾವಣೆ ಸ್ಪೇಸ್ ಎಕ್ಸ್ (Space X) ಉಡಾವಣೆ ಮಾಡಲಿದೆ ಎಂದು ಟೆಸ್ಲಾ (Tesla) ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಹೇಳಿದ್ದಾರೆ.
ಮೊದಲ ಬಾರಿಗೆ ವಿಶ್ವ ಆರ್ಥಿಕ ವೇದಿಕೆ (WEF) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಬಾಹ್ಯಾಕಾಶವು ನಿಜವಾಗಿಯೂ ಅಪಾರ ಶಕ್ತಿಯ ಮೂಲವಾಗಿದೆ… ನೀವು ವರ್ಷಕ್ಕೆ ನೂರಾರು ಟೆರಾವ್ಯಾಟ್‌ಗಳಿಗೆ ಅಳೆಯಬಹುದು. ಸ್ಪೇಸ್‌ಎಕ್ಸ್ ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ರಾಕೆಟ್‌ಗಳ ಗುರಿಯನ್ನು ಹೊಂದಿದೆ ಎಂದರು. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್ – ಏನಿದು ಗೂಗಲ್‌ನ ಸನ್‌ಕ್ಯಾಚರ್ ಪ್ರಾಜೆಕ್ಟ್?
“It’s a no brainer for building solar powered AI data centers in space, you just have solar panels facing the sun, & a radiator that’s pointed away from sun, then it’s just cooling. The lowest cost place to put AI will be space, & that’ll be true within 3 years.”
一 Elon Musk pic.twitter.com/ehKVrczZGz
— DogeDesigner (@cb_doge) January 22, 2026
ಮುಂಬರುವ ದಿನಗಳಲ್ಲಿ ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸೌರಶಕ್ತಿ ಮೂಲಸೌಕರ್ಯವನ್ನು ಪ್ರಾರಂಭಿಸಲಿದ್ದೇವೆ. ಸುಮಾರು 100 ಗಿಗಾವ್ಯಾಟ್‌ಗಳ ಸೌರಶಕ್ತಿಯನ್ನು ಪ್ರತ್ಯೇಕವಾಗಿ ಉತ್ಪಾದಿಸಲು ನೋಡುತ್ತಿದ್ದೇವೆ. ಈ ಯೋಜನೆಯನ್ನು ಮೂರು ವರ್ಷಗಳಲ್ಲಿ ಕಾರ್ಯರೂಪಕ್ಕೆ ತರಬಹುದು ಎಂದು ಅವರು ಹೇಳಿದರು.
ಸೌರಶಕ್ತಿ ಉತ್ಪಾದನೆಯಲ್ಲಿ ಚೀನಾದ ಪ್ರಾಬಲ್ಯವನ್ನು ಉಲ್ಲೇಖಿಸಿ, ಇಂದು ಸುಂಕ ಅತ್ಯಂತ ಹೆಚ್ಚಾಗಿರುವುದರಿಂದ ವಸ್ತುಗಳನ್ನು ಆಮದು ಮಾಡಲು ಕಷ್ಟವಾಗುತ್ತಿದೆ.ಇತರ ಕಂಪನಿಗಳು ಸಹ ಸೌರಶಕ್ತಿ ಉತ್ಪಾದನೆಯತ್ತ ಮುಖ ಮಾಡುವಂತೆ ಅವರು ಒತ್ತಾಯಿಸಿದರು.

