ದಾವೋಸ್: ಗ್ರೀನ್‌ಲ್ಯಾಂಡ್ (Greenland) ಕುರಿತು ತಕ್ಷಣವೇ ಡೆನ್ಮಾರ್ಕ್ (Denmark) ನಮ್ಮ ಜೊತೆ ಮಾತುಕತೆ ನಡೆಸಬೇಕು. ಯಾವುದೇ ಕಾರಣಕ್ಕೂ ಗ್ರೀನ್‌ಲ್ಯಾಂಡ್ ಕೈತಪ್ಪಲು ಬಿಡುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಬ್ಬರಿಸಿದ್ದಾರೆ.
ಸ್ವಿಜರ್ಲ್ಯಾಂಡ್ ದಾವೋಸ್‌ನಲ್ಲಿ (Davos) ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಮಾತನಾಡಿದ ಟ್ರಂಪ್, ಅಮೆರಿಕ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರ ಗ್ರೀನ್‌ಲ್ಯಾಂಡ್ ಅನ್ನು ಸುರಕ್ಷಿತವಾಗಿ ಇಡಲು ಸಾಧ್ಯವಿಲ್ಲ ಎಂದು ಹೇಳಿದರು.
ಅಪರೂಪದ ಭೂಮಿಯ ಖನಿಜಗಳಿಗಾಗಿ ಅಲ್ಲ, ಕಾರ್ಯತಂತ್ರದ ಕಾರಣಗಳಿಗಾಗಿ ಗ್ರೀನ್‌ಲ್ಯಾಂಡ್ ನಮಗೆ ಅಗತ್ಯವಿದೆ. ನ್ಯಾಟೋಗೆ ನಾವು ತುಂಬಾ ಕೊಟ್ಟಿದ್ದರೂ ನಮಗೆ ಸಿಕ್ಕಿದ್ದು ಶೂನ್ಯ. ನಮ್ಮಿಂದಾಗಿಯೇ ಕೆನಡಾ ಅಸ್ತಿತ್ವದಲ್ಲಿದೆ ಎಂದರು. ಇದನ್ನೂ ಓದಿ: ದಾವೋಸ್‌ಗೆ ತೆರಳುತ್ತಿದ್ದ ಟ್ರಂಪ್ ವಿಮಾನದಲ್ಲಿ ತಾಂತ್ರಿಕ ದೋಷ
NEW: Trump addresses Greenland at the World Economic Forum in Davos, Switzerland, telling world leaders that “no nation or group of nations” can keep the massive territory secure other than the United States.
“We’re a great power, much greater than people even understand. I… pic.twitter.com/KqgSU6PmZr
— Fox News (@FoxNews) January 21, 2026
ಅಮೆರಿಕದ NATO ಮಿತ್ರರಾಷ್ಟ್ರಗಳಲ್ಲಿ ಒಂದಾದ ಡೆನ್ಮಾರ್ಕ್‌ನಿಂದ ಆಳಲ್ಪಡುವ ಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್ ಯುಎಸ್ ರಾಷ್ಟ್ರೀಯ ಭದ್ರತೆಗೆ ಹೊಂದಿರಬೇಕಾದ ಆಸ್ತಿಯಾಗಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡರು.
ಗ್ರೀನ್ ಎನರ್ಜಿಯ ಬಗ್ಗೆ ಕಿಡಿಕಾರಿದ ಅವರು, ನಿಷ್ಪರಿಣಾಮಕಾರಿ ಹಣ ಕಳೆದುಕೊಳ್ಳುವ ವಿಂಡ್‌ಮಿಲ್‌ಗಳನ್ನು ನಿರ್ಮಿಸುವ ಬದಲು, ನಾವು ಅವುಗಳನ್ನು ತೆಗೆದುಹಾಕುತ್ತಿದ್ದೇವೆ ಮತ್ತು ಯಾವುದನ್ನೂ ಅನುಮೋದಿಸುತ್ತಿಲ್ಲ. ಇದೊಂದು ಹಸಿರು ಹಗರಣದ ಭಾಗವಾಗಿದ್ದು ಭೂಮಿಯನ್ನು ನಾಶಮಾಡುತ್ತದೆ ಎಂದು ದೂರಿದರು. ಇದನ್ನೂ ಓದಿ: ಪಾಕ್‌ಗೆ ಮತ್ತೆ ಮುಖಭಂಗ – ನಕಲಿ ಪಿಜ್ಜಾ ಹಟ್ ಉದ್ಘಾಟಿಸಿ ಮರ್ಯಾದೆ ಕೆಡಿಸಿಕೊಂಡ ಖವಾಜ ಆಸಿಫ್!

