ಮುಂಬೈ: ಏಕದಿನ ವಿಶ್ವಕಪ್ 2023 (World Cup 2023) ರ ಟೂರ್ನಿಯಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರದ ಬೌಲಿಂಗ್ ದಾಳಿ ನಡೆಸಿ 7 ವಿಕೆಟ್ ಕಬಳಿಸಿದ ಭಾರತದ ವೇಗಿ ಮೊಹಮ್ಮದ್ ಶಮಿ (Mohammed Shami) ದಾಖಲೆ ಬರೆದಿದ್ದಾರೆ. ಲೆಜೆಂಡರಿ ಆಸ್ಟ್ರೇಲಿಯಾ ವೇಗದ ಬೌಲರ್ ಗ್ಲೆನ್ ಮೆಕ್ಗ್ರಾತ್ (Glenn Mcgrath) ದಾಖಲೆಯನ್ನು ಸರಿಗಟ್ಟಿದ್ದಾರೆ.
ಹೌದು, ಗ್ಲೆನ್ ಮೆಕ್ಗ್ರಾತ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ಹೊಂದಿದ್ದಾರೆ. ಐಸಿಸಿ ವಿಶ್ವಕಪ್ 2003 ರ ದಕ್ಷಿಣ ಆಫ್ರಿಕಾದ ಪೊಟ್ಚೆಫ್ಸ್ಟ್ರೂಮ್ನಲ್ಲಿ ನಮೀಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 15 ರನ್ ನೀಡಿ 7 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಭಾರತದ ಬೌಲರ್ ಶಮಿ ಸರಿಗಟ್ಟಿದ್ದಾರೆ. ಇದನ್ನೂ ಓದಿ: ಸೆಮಿಸ್ನಲ್ಲೂ ಶಮಿ ಮಿಂಚು; ಕಿವೀಸ್ ವಿರುದ್ಧ 70 ರನ್ಗಳ ಭರ್ಜರಿ ಜಯ – 4ನೇ ಬಾರಿಗೆ ವಿಶ್ವಕಪ್ ಫೈನಲ್ಗೆ ಭಾರತ ಎಂಟ್ರಿ
Advertisement
Advertisement
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಶಮಿ ಬೌಲಿಂಗ್ ಮೋಡಿ ಮಾಡಿದರು. 9.5 ಓವರ್ಗಳಿಗೆ 57 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು. ಜೊತೆಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
Advertisement
7 ವಿಕೆಟ್ ಕಿತ್ತ ಬೌಲರ್ಗಳು
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯವೊಂದರಲ್ಲೇ 7 ವಿಕೆಟ್ ಕಬಳಿಸಿ ಮಿಂಚಿದ 5 ಆಟಗಾರರಿದ್ದಾರೆ. ಅವರಲ್ಲಿ ಅತಿ ಕಡಿಮೆ ರನ್ಗೆ 7 ವಿಕೆಟ್ ಕಬಳಿಸಿದವರು ಗ್ಲೆನ್ ಮೆಕ್ಗ್ರಾತ್. ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಶಮಿ.!
Advertisement
ಆಸ್ಟ್ರೇಲಿಯಾದ ಆಂಡಿ ಬಿಚೆಲ್ – 20 ರನ್ 7 ವಿಕೆಟ್ – ಇಂಗ್ಲೆಂಡ್ (ಎದುರಾಳಿ) – 2003, ಮಾ.2
ನ್ಯೂಜಿಲೆಂಡ್ನ ಟಿಮ್ ಸೌಥಿ – 33 ಕ್ಕೆ 7 – ಇಂಗ್ಲೆಂಡ್ (ಎದುರಾಳಿ) – 2015, ಫೆ.20
ವೆಸ್ಟಿಂಡೀಸ್ನ ವಿನ್ಸ್ಟನ್ ಡೇವಿಸ್ – 51 ಕ್ಕೆ 7 – ಆಸ್ಟ್ರೇಲಿಯಾ (ಎದುರಾಳಿ) – 1983, ಜೂ.11
ಭಾರತದ ಮೊಹಮ್ಮದ್ ಶಮಿ – 57 ಕ್ಕೆ 7 – ನ್ಯೂಜಿಲೆಂಡ್ (ಎದುರಾಳಿ) – 2023, ನ.15