ಮುಂಬೈ: 2023ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಆರಂಭವಾಗಿದ್ದು, ಭಾರತ-ನ್ಯೂಜಿಲೆಂಡ್ ನಡುವೆ ಸೆಣಸಾಟ ನಡೆದಿದೆ. ಈ ಪಂದ್ಯದಲ್ಲಿ ಕೊಹ್ಲಿ ಡಿಆರ್‌ಎಸ್ ರಿವ್ಯೂವ್‌ನಿಂದ (DRS Review) ಪಾರಾದ ಬಳಿಕ ಪತ್ನಿ ಅನುಷ್ಕಾ ಶರ್ಮಾ (Anushka Sharma) ಕೈಮುಗಿದು ನಿಟ್ಟುಸಿರು ಬಿಟ್ಟಿರುವ ದೃಶ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನುಷ್ಕಾ ರಿಯಾಕ್ಷನ್ ಕಂಡು ಕೊಹ್ಲಿ ಅಭಿಮಾನಿಗಳೂ ಶಾಕ್ ಆಗಿದ್ದಾರೆ.
MOOD EVERY BALL pic.twitter.com/g0CSMbObCj
— adi. (@aaditeaa) November 15, 2023
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (Rohit Sharma) ಮತ್ತು ಶುಭಮನ್ ಗಿಲ್ ಜೋಡಿ ಸ್ಫೋಟಕ ಆರಂಭ ಪಡೆದುಕೊಂಡಿತ್ತು. ಮೊದಲ ವಿಕೆಟ್‌ಗೆ ಈ ಜೋಡಿ 8.2 ಓವರ್‌ಗಳಲ್ಲಿ 71 ರನ್ ಬಾರಿಸಿತ್ತು. ಆದ್ರೆ 9ನೇ ಓವರ್‌ನಲ್ಲಿ ಟಿಮ್ ಸೌಥಿ ಬೌಲಿಂಗ್‌ನ 2ನೇ ಎಸೆತವನ್ನು ಸಿಕ್ಸರ್‌ಗೆ ಸಿಡಿಸಲು ಪ್ರಯತ್ನಿಸಿದ ರೋಹಿತ್ ಶರ್ಮಾ ಕ್ಯಾಚ್‌ಗೆ ತುತ್ತಾಗಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಕ್ರೀಸ್‌ಗೆ ಬಂದ ಕೊಹ್ಲಿ (Virat Kohli) ಟಿಮ್ ಸೌತಿ ಬೌಲಿಂಗ್‌ನಲ್ಲೇ ಎಲ್‌ಬಿಡಬ್ಲ್ಯೂಗೆ ಔಟಾಗುವ ಸಾಧ್ಯತೆಯಿತ್ತು. ಕ್ಯಾಪ್ಟನ್ ವಿಲಿಯಮ್ಸನ್ ಡಿಆರ್‌ಎಸ್‌ಗೂ ಮನವಿ ಮಾಡಿದ್ದರು. ಆದ್ರೆ ಬಾಲ್ ಪ್ಯಾಡ್‌ಗೆ ಬಡಿಯುವುದಕ್ಕೂ ಮುನ್ನವೇ ಬ್ಯಾಟ್‌ಗೆ ತಾಗಿತ್ತು. ಆದ್ದರಿಂದ ಕೊಹ್ಲಿ ನಾಟೌಟ್ ಎಂದು ಘೋಷಿಸಲಾಯಿತು. ಕೊಹ್ಲಿ ನಾಟೌಟ್ ಎಂದು ತೀರ್ಪು ಅನುಷ್ಕಾ ಕೈಮುಗಿದು ನಿಟ್ಟುಸಿರು ಬಿಟ್ಟರು. ಅನುಷ್ಕಾ ಅವರ ರಿಯಾಕ್ಷನ್ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕೊಹ್ಲಿ ಅವರಿಗೆ ಇದು ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ. ಏಕೆಂದರೆ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿರುವ ಕೊಹ್ಲಿ 50ನೇ ಶತಕ ಸಿಡಿಸಿ ಕ್ರಿಕೆಟ್ ದೇವರ ದಾಖಲೆಯನ್ನ ಮುರಿಯುವ ಸಾಧ್ಯತೆಗಳಿವೆ. ಇದನ್ನೂ ಓದಿ: World Cup Semifinal: ಸಿಕ್ಸರ್‌ನಿಂದಲೇ ವಿಶ್ವದಾಖಲೆ ನಿರ್ಮಿಸಿದ ಹಿಟ್‌ಮ್ಯಾನ್
2019ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಭಾರತ 18 ರನ್‌ಗಳ ಅಂತರದಿಂದ ಸೋಲನುಭವಿಸಿತ್ತು. ಅಂದು ನಾಯಕನಾಗಿದ್ದ ಕೊಹ್ಲಿ ಕೇವಲ 1 ರನ್‌ಗೆ LBWಗೆ ತುತ್ತಾಗಿದ್ದರು.
ಕೊಹ್ಲಿ ಡಿಆರ್‌ಎಸ್‌ಗೆ ಮನವಿ ಮಾಡಿದಾಗ ಬಾಲ್ ಟ್ರ್ಯಾಂಕಿಂಗ್‌ನಲ್ಲಿ ವಿಕೆಟ್‌ನಿಂದ ಚೆಂಡು ಒಂದಿಂಚು ಮೇಲಿರುವುದು ತೋರಿಸಿತ್ತು. ಆದ್ರೆ ಅದನ್ನು ಅಂಪೈರ್ ತೀರ್ಮಾನಕ್ಕೆ ಬಿಡಲಾಗಿತ್ತು. ಅಂಪೈರ್ ಮೊದಲೇ ಔಟ್ ತೀರ್ಪು ನೀಡಿದ್ದರಿಂದ ಔಟ್ ಎಂದು ಘೋಷಿಸಲಾಯಿತು. ಇದರಿಂದ ಕೊಹ್ಲಿ ಅಂಪೈರ್ಸ್‌ಕಾಲ್ಡ್ ನಿಯಮದ ವಿರುದ್ಧ ಮೈದಾನದಲ್ಲೇ ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ: ಅಭಿಮಾನಿಯ ಹೃದಯ ಬಡಿತ ನಿಲ್ಲಿಸಿತ್ತು, ವಿಶ್ವಕಪ್ ಕನಸನ್ನೇ ಭಗ್ನಗೊಳಿಸಿತ್ತು ಆ ಒಂದು ರನೌಟ್..!