World Cup Semi Final: ಮಳೆ ಬಂದು ಮ್ಯಾಚ್ ನಡೆಯದಿದ್ದರೆ ಏನಾಗುತ್ತೆ..?

Public TV
3 Min Read
IND vs NZ

ಬೆಂಗಳೂರು: ವಿಶ್ವಕಪ್ 2023ರ (World Cup 2023) ಪಂದ್ಯಾವಳಿಯ ಕೊನೆಯ 3 ಪಂದ್ಯಗಳು ಬಾಕಿ ಉಳಿದಿವೆ. ಇನ್ನು 3 ಪಂದ್ಯಗಳು ನಡೆದರೆ ವಿಶ್ವ ಕ್ರಿಕೆಟ್ ಏಕದಿನ ಪಂದ್ಯಗಳ ಸಾಮ್ರಾಟ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಇನ್ನೆರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆದರೆ ವಿಶ್ವ ವಿಜೇತ ತಂಡ ಯಾವುದು ಎಂಬುದು ಗೊತ್ತಾಗಲಿದೆ.

ಸೆಮಿಫೈನಲ್ ಹಣಾಹಣಿಗೆ ಮುಂಬೈನ ವಾಂಖೆಡೆ, ಕೋಲ್ಕತ್ತಾದ ಈಡನ್‌ ಗಾರ್ಡನ್‌ ವೇದಿಕೆ ಸಿದ್ಧವಾಗಿದ್ದು ಮೊದಲ ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾ-ನ್ಯೂಜಿಲೆಂಡ್ (India Vs Newzealand) ತಂಡದ ವಿರುದ್ಧ ಸೆಣಸಲು ಸಿದ್ಧವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್ 15ರಂದು ಮೊದಲ ಸೆಮಿಫೈನಲ್ ನಡೆಯಲಿದೆ. ಟೂರ್ನಿಯ 2ನೇ ಸೆಮಿಫೈನಲ್ (World Cup SemiFinal) ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನವೆಂಬರ್ 16ರಂದು ನಡೆಯಲಿದೆ. ಫೈನಲ್ ಪಂದ್ಯ ನವೆಂಬರ್ 19ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

New Zealand 4

ಸೆಮಿಫೈನಲ್ ಮ್ಯಾಚ್ ವೇಳೆ ಮಳೆ ಬಂದರೆ ಏನಾಗಬಹುದು..? ಮಳೆ ಬಂದರೆ ಯಾವ ತಂಡ ಫೈನಲ್ ಪ್ರವೇಶಿಸಬಹುದು…? ಮುಂದೇನಾಗಬಹುದು ಎಂಬ ಕುತೂಹಲ ನಿಮಗಿದ್ದರೆ ಮುಂದಕ್ಕೆ ಓದಿ. ಇದನ್ನೂ ಓದಿ: World Cup 2023: ಭಾರತಕ್ಕೆ ಗೆಲುವಿನ ʻಶ್ರೇಯಸ್ಸುʼ – ಡಚ್ಚರ ವಿರುದ್ಧ 160 ರನ್‌ಗಳ ಭರ್ಜರಿ ಜಯ..!

ಎರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಐಸಿಸಿಯು ರಿಸರ್ವ್ ಡೇ ನಿಗದಿ ಮಾಡಿದೆ. ಒಂದು ವೇಳೆ ಸೆಮಿಫೈನಲ್ ನಡೆಯುವ ದಿನ ಮಳೆ ಬಂದು ಒಂದೇ ದಿನ ಪಂದ್ಯ ಪೂರ್ಣವಾಗದಿದ್ದರೆ, ರಿಸರ್ವ್ ಡೇ ದಿನ ಆಟ ಮುಂದುವರಿಸಬಹುದು. ಹಿಂದಿನ ದಿನ ಆಟ ನಿಂತಲ್ಲಿಂದಲೇ ಮತ್ತೆ ಶುರುವಾಗುತ್ತದೆ. 2023ರ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್‌ ಫೋರ್‌ ಪಂದ್ಯಕ್ಕೆ ಈ ರೀತಿ ಮೀಸಲು ದಿನ ನಿಗದಿಯಾಗಿತ್ತು.

Australia

ರಿಸರ್ವ್ ಡೇ ದಿನವೂ ಮಳೆ ಬಂದರೆ…?: ರಿಸರ್ವ್ ಡೇ ದಿನ ಮಳೆ ಬಂದರೆ ಏನಾಗಬಹುದು ಎಂಬ ಕುತೂಹಲವೂ ನಿಮಗಿರುತ್ತೆ. ರಿಸರ್ವ್ ಡೇ ದಿನವೂ ಮಳೆ ಬಂದು ಪಂದ್ಯ ನಡೆಯದಿದ್ದರೆ ಪಾಯಿಂಟ್ ಟೇಬಲ್ ಆಧಾರದಲ್ಲಿ ತಂಡಗಳು ಫೈನಲ್ ಪ್ರವೇಶಿಸಲಿದೆ. ಅರ್ಥಾತ್ ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಮಳೆಯಿಂದ ನಡೆಯದಿದ್ದರೂ ಟೀಂ ಇಂಡಿಯಾ ಫೈನಲ್ ಪ್ರವೇಶಿಸಲಿದೆ. ಸದ್ಯ 9ಕ್ಕೆ 9 ಪಂದ್ಯವನ್ನು ಗೆದ್ದಿರುವ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ 9 ವರ್ಷಗಳ ಬಳಿಕ ಮೊದಲ ವಿಕೆಟ್‌ ಕಿತ್ತ ಕೊಹ್ಲಿ – ಕುಣಿದು ಕುಪ್ಪಳಿಸಿದ ಅನುಷ್ಕಾ

Ind vs SA 1

ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ (Australia Vs South Africa) ನಡುವಿನ ಪಂದ್ಯಕ್ಕೂ ಇದೇ ನಿಯಮ ಅನ್ವಯವಾಗಲಿದೆ. ಮಳೆ ಬಂದು ಪಂದ್ಯವೇ ನಡೆಯದಿದ್ದರೆ ದಕ್ಷಿಣ ಆಫ್ರಿಕಾ ತಂಡ ಫೈನಲ್ ಪ್ರವೇಶಿಸಲಿದೆ. ಯಾಕೆಂದರೆ ಸದ್ಯ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ 2ನೇ ಹಾಗೂ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ.

ಈ ವಿಶ್ವಕಪ್ ನಲ್ಲಿ ಮಳೆಯಿಂದ ಪಂದ್ಯ ರದ್ದಾಗಿಲ್ಲ!: ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೆ 45 ಪಂದ್ಯಗಳು ನಡೆದಿದೆ. 45 ಪಂದ್ಯಗಳಲ್ಲೂ ಫಲಿತಾಂಶ ಬಂದಿದೆ. ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ – ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾದರೂ ಡಕ್‌ವರ್ಥ್ ಲೂಯಿಸ್ ನಿಯಮದ ಪ್ರಕಾರ ಪಾಕಿಸ್ತಾನ ಗೆಲುವು ಸಾಧಿಸಿತ್ತು.

ಫೈನಲ್ ಮಳೆ ಬಂದ್ರೆ ಟ್ರೋಫಿ ಶೇರ್!: ಸೆಮಿಫೈನಲ್‌ಗೆ ಪಾಯಿಂಟ್ ಪಟ್ಟಿ ಆಧಾರದಲ್ಲಿ ಫೈನಲ್ ಪ್ರವೇಶಿಸಿದರೂ, ಅಂಕಪಟ್ಟಿ ಆಧಾರದಲ್ಲಿ ವಿಜೇತರ ಘೋಷಣೆ ಮಾಡಲ್ಲ. ನವೆಂಬರ್ 19ರಂದು ಫೈನಲ್ ನಡೆಯಲಿದ್ದು, ನವೆಂಬರ್ 20ರಂದು ರಿಸರ್ವ್ ಡೇ ಎಂದು ಮೀಸಲಿಡಲಾಗಿದೆ. ಈ ದಿನವೂ ಮಳೆ ಬಂದು ಫೈನಲ್ ನಡೆಯದಿದ್ದರೆ ಎರಡೂ ತಂಡಗಳಿಗೂ ವಿಶ್ವಕಪ್ ಟ್ರೋಫಿ ಹಂಚಿಕೆಯಾಗಲಿದೆ.

ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಮುಂಬೈ, ಕೋಲ್ಕತ್ತಾ, ಅಹಮದಾಬಾದ್ ನಲ್ಲಿ ನಿಗದಿಯಾಗಿರುವ ದಿನಗಳಂದು ಮಳೆ ಬರುವ ಸಾಧ್ಯತೆ ಇಲ್ಲ.

Share This Article