ಲಕ್ನೋ: ಏಕದಿನ ವಿಶ್ವಕಪ್ (World Cup 2023) ಟೂರ್ನಿಯಲ್ಲಿ ಟೀಂ ಇಂಡಿಯಾ (Team India) ಸುದೀರ್ಘ ವಿರಾಮದ ನಂತರ ಅಕ್ಟೋಬರ್ 29 ರಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ ಸೆಣಸಲು ಭರ್ಜರಿ ತಯಾರಿ ನಡೆಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಆಂಗ್ಲರನ್ನು ಮತ್ತೆ ಸೋಲಿಸಿ ಸೆಮಿ ಫೈನಲ್ ಹಾದಿಗೆ ಸನಿಹವಾಗಲು ಭಾರತ ಹಾತೊರೆಯುತ್ತಿದೆ. ಅಲ್ಲದೇ 20 ವರ್ಷಗಳ ಇತಿಹಾಸ ಬದಲಾಯಿಸಲು ಎದುರು ನೋಡುತ್ತಿದೆ.
Advertisement
20 ವರ್ಷಗಳ ಸೇಡು: ವಿಶ್ವಕಪ್‌ನಲ್ಲಿ ಸೋಲೆ ಇಲ್ಲಾ, ಗೆಲುವೇ ಎಲ್ಲಾ ಎಂದು ಜಯದ ಓಟದಲ್ಲಿ ಮುನ್ನುಗ್ಗುತ್ತಿರುವ ಭಾರತ ತಂಡ ಡಬಲ್ ಹ್ಯಾಟ್ರಿಕ್ ಗುರಿ ಹೊಂದಿದ್ದರೆ, ಇತ್ತ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆಲುವು ಸಾಧಿಸಿರುವ ಇಂಗ್ಲೆಂಡ್ ಕಠಿಣ ಪೈಪೋಟಿ ನೀಡಲು ಸಮರಾಭ್ಯಾಸ ನಡೆಸುತ್ತಿದೆ. ಭಾನುವಾರದ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ (England) ವಿರುದ್ಧ ಗೆಲುವು ಸಾಧಿಸಿದರೆ, ಇಂಗ್ಲೆಂಡ್ ವಿರುದ್ಧ 20 ವರ್ಷಗಳ ಇತಿಹಾಸವನ್ನು ಬದಲಿಸಲಿದೆ. ಏಕೆಂದರೆ 2003ರ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಆ ಬಳಿಕ ಭಾರತಕ್ಕೆ ಆಂಗ್ಲರ ವಿರುದ್ಧ ವಿಶ್ವಕಪ್‌ನಲ್ಲಿ ಗೆಲುವು ಸಿಕ್ಕಿಲ್ಲ. ಹೀಗಾಗಿ 20 ವರ್ಷಗಳ ನಂತರ ಭಾರತ ತಂಡಕ್ಕೆ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಅವಕಾಶ ಸಿಕ್ಕಿದೆ
Advertisement
Advertisement
ವಿಶ್ವಕಪ್‌ನಲ್ಲಿ ಆಂಗ್ಲರದ್ದೇ ಮೇಲುಗೈ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡಿದ್ರೆ, ಇಲ್ಲಿಯವರೆಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ 8 ಪಂದ್ಯಗಳು ನಡೆದಿವೆ. ಇದರಲ್ಲಿ ಇಂಗ್ಲೆಂಡ್ 4ರಲ್ಲಿ, ಭಾರತ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಉಳಿದಂತೆ 2007, 2011, 2015 ಮತ್ತು 2019ರಲ್ಲಿ ಭಾರತ ಇಂಗ್ಲೆಂಡ್ ಎದುರು ವಿರೋಚಿತ ಸೋಲನುಭವಿಸಿದೆ.
Advertisement
ಭಾರತ- ಇಂಗ್ಲೆಂಡ್ ಏಕದಿನ ಮುಖಾಮುಖಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇದುವರೆಗೆ 106 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 57 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 44 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, 2 ಪಂದ್ಯಗಳು ಟೈ ಆಗಿವೆ. ತವರಿನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 55 ಏಕದಿನ ಪಂದ್ಯಗಳನ್ನಾಡಿದ್ದು, 33 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಇಂಗ್ಲೆಂಡ್ 23 ಪಂದ್ಯಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ.
ಭಾರತ-ಇಂಗ್ಲೆಂಡ್ ಮುಖಾಮುಖಿ:
ಒಟ್ಟು ಪಂದ್ಯಗಳು: 106
ಭಾರತ ಗೆಲುವು: 57
ಇಂಗ್ಲೆಂಡ್ ಗೆಲುವು: 44
ಶೂನ್ಯ ಫಲಿತಾಂಶ: 3
ಡ್ರಾ ಫಲಿತಾಂಶ: 2
Web Stories