ಬೆಂಗಳೂರು: ಏಕದಿನ ವಿಶ್ವಕಪ್ (World Cup) ಕ್ರಿಕೆಟ್ (Cricket) ಪಂದ್ಯ ಅಂತಿಮ ಹಂತಕ್ಕೆ ತಲುಪಿದೆ. ಇಂದು ಗುಜರಾತ್‌ನ (Gujarat) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಭಾರತ (India) ಮತ್ತು ಆಸ್ಟ್ರೇಲಿಯಾ (Australia) ತಂಡಗಳ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳು ಈ ರೋಚಕ ಮ್ಯಾಚ್ ವೀಕ್ಷಿಸಲು ಅತ್ಯಂತ ಉತ್ಸುಕರಾಗಿದ್ದಾರೆ. ಇಷ್ಟು ಮಾತ್ರವಲ್ಲದೇ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗಾಗಿ ಅನೇಕ ಕಡೆಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ.
ಭಾರತದ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳು ಬೆಂಗಳೂರಿನ (Bengaluru) ಅನೇಕ ಕಡೆಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತ ವಿಶ್ವಕಪ್ ಗೆಲ್ಲಲಿ ಅಂತಾ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಮಾಡಿದ್ದು, ಭಾರತದ ಬಾವುಟ ಇಟ್ಟು ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಗೆಲ್ಲುವ ನಿರೀಕ್ಷೆಯಿದೆ- ಟೀಂ ಇಂಡಿಯಾಗೆ ತೆಂಡೂಲ್ಕರ್ ವಿಶ್
Advertisement
Advertisement
ವಿಶ್ವಕಪ್ ಕ್ರಿಕೆಟ್ ಹಿನ್ನೆಲೆ ಭಾರತ ಗೆಲ್ಲಲಿ ಅಂತಾ ಎಲ್ಲೆಡೆ ಶುಭ ಹಾರೈಕೆಗಳ ಸುರಿಮಳೆ ಸುರಿಯುತ್ತಿದ್ದು, ಮಲ್ಲೇಶ್ವರಂ 18ನೇ ಕ್ರಾಸ್‌ನ ಮೈದಾನದಲ್ಲಿ ಪುಟಾಣಿ ಮಕ್ಕಳು ಬೆಸ್ಟ್ ವಿಶಶ್ ತಿಳಿಸಿದ್ದಾರೆ. ಬ್ಯಾಟ್ ಹಿಡಿದು ಇಂಡಿಯಾ ಗೆಲುವಿಗೆ ಹಾರೈಸಿದ್ದಾರೆ. ವಿಶ್ವಕಪ್ ಗೆಲುವಿಗಾಗಿ ಬನಶಂಕರಿ ದೇವಸ್ಥಾನದಲ್ಲಿ ಹೋಮ ಹವನ ನಡೆಯುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರ ಹೆಸರಿನಲ್ಲಿ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: World Cup 2023- ಭಾರತ ಗೆದ್ದು ಬರಲಿ ಎಂದು ಬೊಮ್ಮಾಯಿ, ಹೆಚ್‍ಡಿಕೆ ವಿಶ್
Advertisement
Advertisement
ಇನ್ನು ವಂದೇ ಮಾತರಂ ಸರ್ವ ಸಂಘಟನೆಗಳ ವತಿಯಿಂದ ಸರ್ಕಲ್ ಮಾರಮ್ಮ ದೇವಾಲಯದ ಮುಂದೆ ಪೂಜೆ ಆಯೋಜಿಸಿದ್ದು, ಬ್ಯಾಟ್, ಸ್ಟಂಟ್‌ಗಳಿಗೆ ಹಾರ ಹಾಕಿ, ಕುಂಬಳಕಾಯಿ ಹೊಡೆದು ಪೂಜೆ ಮಾಡಲಾಗಿದೆ. ಅಲ್ಲದೇ ಕ್ರಿಕೆಟ್ ಆಟಗಾರರು ಚೆನ್ನಾಗಿ ಆಟವಾಡಲಿ ಅಂತಾ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದು, ಭಾರತ ತಂಡದ ಆಟಗಾರರ ಭಾವಚಿತ್ರ ಹಿಡಿದು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ
ಶ್ರೀ ಭುವನೇಶ್ವರಿ ಸಂಘದಿಂದ ಅದ್ಧೂರಿ ಸೆಲಬ್ರೆಷನ್ ನಡೆಯುತ್ತಿದ್ದು, ರಸ್ತೆಯಲ್ಲೆ ವಿಶ್ವಕಪ್ ಟ್ರೋಫಿ ನಿರ್ಮಾಣವಾಗಿದೆ. ಮಂಜುನಾಥ್ ನಗರದಲ್ಲಿ ವಿಶ್ವಕಪ್ ಹವಾ ಎಬ್ಬಿಸಿದ್ದು, ಪ್ರಸನ್ನ ಗಣಪತಿ ದೇವಸ್ಥಾನದ ಎದುರು ಹೋಮ ಹವನ ನಡೆಸಿದ್ದಾರೆ. ರಸ್ತೆಯ ಎರಡೂ ಕಡೆ ದೊಡ್ಡ ಬಾವುಟ ಕಟ್ಟಿ ಸಂಭ್ರಮಿಸಿದ್ದು, ಗೆದ್ದು ಬಾ ಟೀಂ ಇಂಡಿಯಾ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಭಾರತದ ಗೆಲುವಿಗಾಗಿ ಇಶನ್ ಕಿಶನ್ ಕುಟುಂಬಸ್ಥರಿಂದ ವಿಶೇಷ ಪೂಜೆ
ವರ್ಲ್ಡ್ ಕಪ್‌ಗಾಗಿ ಹಂಪಿನಗರದ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬ್ರಹ್ಮಶ್ರೀ ಡಾಕ್ಟರ್ ಉಮೇಶ್ ಶರ್ಮಾ ನೇತೃತ್ವದಲ್ಲಿ ಗಣಪತಿ ಹೋಮ, ಸುಬ್ರಹ್ಮಣ್ಯ ಹೋಮ, ಮೃತ್ಯುಂಜಯ ಹೋಮ, ದುರ್ಗ ಹೋಮ ನಡೆಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ದುರ್ಗ ದೇವಸ್ಥಾನದ ಬಂಗಾಳಿ ಪಂಡಿತರು, ವಾರಣಾಸಿ ಪಂಡಿತರು ಸೇರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ವಿಶ್ವ ಹಿಂದೂ ಪರಿಷತ್ ನಿಂದ ವಿಶ್ವಕಪ್‌ಗಾಗಿ ವಿಶೇಷ ಪೂಜೆ ನಡೆಸಿದ್ದಾರೆ. ಕನ್ನಡ ಪರ ಹೋರಾಟಗಾರರು ಉರುಳು ಸೇವೆ ಮಾಡಿದ್ದು, ಸರ್ಕಲ್ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಪೂಜೆ ಸಲ್ಲಿಸಲಾಗಿದೆ. ಇದನ್ನೂ ಓದಿ: ವಿಶ್ವಕಪ್ 2023- ಜೀತೆಗಾ ಹಿಂದೂಸ್ತಾನ್ ಜೀತೆಗಾ ಎಂದ ಜಿಲ್ಲೆಯ ಕ್ರೀಡಾಭಿಮಾನಿಗಳು
ಎಲ್ರಲ್ಲೂ ವಿಶ್ವಕಪ್ ಜ್ವರ ಹೆಚ್ಚಾಗಿದ್ದು, ಕೆಫೆ ಕಾಫಿ ಕನ್ಫೆಷನ್‌ನಿಂದ ಕಾಫಿಯಲ್ಲಿ ವರ್ಲ್ಡ್ ಕಪ್ ಅರಳಿದೆ. ಇನ್ನು ಬನಶಂಕರಿ ದೇವಸ್ಥಾನದಲ್ಲಿ ಹೋಮ ನಡೆಸುತ್ತಿದ್ದು, ಭಾರತ ತಂಡದ ಗೆಲುವಿಗಾಗಿ ಹೋಮ ನಡೆಸಲಾಗುತ್ತಿದೆ. ಇದನ್ನೂ ಓದಿ: World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ