ಬೆಂಗಳೂರು: ವಿಶ್ವಕಪ್ ಇತಿಹಾಸದಲ್ಲಿ ಬಾಂಗ್ಲಾದೇಶದ ಆಲ್‍ರೌಂಡರ್ ಶಕೀಬ್ ಅಲ್ ಹಸನ್ ದಾಖಲೆ ನಿರ್ಮಿಸಿದ್ದಾರೆ. ಒಂದೇ ಟೂರ್ನಿಯಲ್ಲಿ 10ಕ್ಕಿಂತ ಅಧಿಕ ವಿಕೆಟ್ ಮತ್ತು 500+ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
2007 ರಲ್ಲಿ ನ್ಯೂಜಿಲೆಂಡಿನ ಸ್ಕಾಟ್ ಸ್ಟೈರಿಸ್ 499 ರನ್ ಮತ್ತು 9 ವಿಕೆಟ್ ಪಡೆದುಕೊಂಡಿದ್ದರು. ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಶಕೀಬ್ ಭಾರತದ ವಿರುದ್ಧದ ಪಂದ್ಯದಲ್ಲಿ 66 ರನ್(74 ಎಸೆತ, 6 ಬೌಂಡರಿ) ಸಿಡಿಸಿ ಔಟಾಗಿದ್ದರು.
Advertisement
Advertisement
ಬಾಂಗ್ಲಾ ಪರ ವಿಶ್ವಕಪ್‍ನಲ್ಲಿ 5 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಶಕೀಬ್ ಆಗಿದ್ದಾರೆ. ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ 29 ರನ್ ನೀಡಿ 5 ವಿಕೆಟ್ ಪಡೆದಿದ್ದರು. ವಿಂಡೀಸ್ ವಿರುದ್ಧ ಶತಕ ಸಿಡಿಸಿ ತಂಡಕ್ಕೆ ಶಕೀಬ್ ಜಯವನ್ನು ತಂದಿಟ್ಟಿದ್ದರು.
Advertisement
ವಿಂಡೀಸ್ 8 ವಿಕೆಟ್‍ಗೆ 321 ರನ್ ಹೊಡೆದಿದ್ದರೆ ಬಾಂಗ್ಲಾ 41.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಶಕೀಬ್ ಈ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಅಜೇಯ 124 ರನ್(99 ಎಸೆತ, 16 ಬೌಂಡರಿ) ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
Advertisement
ಭಾರತದ ವಿರುದ್ಧ ಪಂದ್ಯದಲ್ಲಿ 10 ನೇ ಓವರಿನಲ್ಲಿ ಕ್ರೀಸಿಗೆ ಬಂದ ಶಕೀಬ್ 34ನೇ ಓವರ್ ವರೆಗೂ ಕ್ರೀಸ್‍ನಲ್ಲಿದ್ದರು. 33.5 ಓವರಿಗೆ ತಂಡದ ಮೊತ್ತ 179 ಆಗಿದ್ದಾಗ 6ನೇಯವರಾಗಿ ಶಕೀಬ್ 66 ರನ್(74 ಎಸೆತ, 6 ಬೌಂಡರಿ) ಸಿಡಿಸಿ ಔಟಾದರು. ಶಕೀಬ್ ಕ್ರೀಸ್ ನಲ್ಲಿ ಇರುವವರೆಗೂ ಬಾಂಗ್ಲಾದ ಗೆಲುವಿನ ಆಸೆ ಜೀವಂತವಾಗಿತ್ತು. ಆದರೆ ಪಾಂಡ್ಯಾ ಎಸೆದ ಬಾಲನ್ನು ಹೊಡೆಯಲು ಹೋಗಿ ಎಕ್ಸ್‌ಟ್ರಾ ಕವರಿನಲ್ಲಿದ್ದ ದಿನೇಶ್ ಕಾರ್ತಿಕ್‍ಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ನಡೆದರು. ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಶಕೀಬ್ 10 ಓವರ್ ಎಸೆದು 41 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇದರಲ್ಲಿ 32 ಎಸೆತಗಳು ಡಾಟ್ ಬಾಲ್ ಆಗಿದ್ದು ವಿಶೇಷ.
2006ರಲ್ಲಿ ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಶಕೀಬ್ ಇದೂವರೆಗೆ 205 ಏಕದಿನ ಪಂದ್ಯಗಳ 193 ಇನ್ನಿಂಗ್ಸ್ ನಲ್ಲಿ 6,259 ರನ್ ಗಳಿಸಿದ್ದಾರೆ. ಬೌಲಿಂಗ್‍ನಲ್ಲಿ 260 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ವಿಶ್ವಕಪ್ 2019: ಬಾಂಗ್ಲಾ ಆಟಗಾರ ಶಕೀಬ್ ವಿಶೇಷ ದಾಖಲೆ
Rohit Sharma and Shakib Al Hasan, two of the standout players of #CWC19 so far.
Their respective records with the bat are brilliant ???? ???? #BANvIND pic.twitter.com/anyLCBIGbz
— ICC Cricket World Cup (@cricketworldcup) July 2, 2019
ರೋಹಿತ್ ವರ್ಸಸ್ ಶಕೀಬ್
ಇಬ್ಬರು ಆಟಗಾರರು 7 ಪಂದ್ಯಗಳನ್ನು ಆಡಿದ್ದು 90.33 ಸರಾಸರಿಯಲ್ಲಿ ಶಕೀಬ್ 542 ರನ್ ಗಳಿಸಿದರೆ 90.66 ಸರಾಸರಿಯಲ್ಲಿ ರೋಹಿತ್ 544 ರನ್ ಸಿಡಿಸಿದ್ದಾರೆ. ಈ ವಿಶ್ವಕಪ್‍ನಲ್ಲಿ 34.9 ಸ್ಟ್ರೈಕ್ ರೇಟ್‍ನಲ್ಲಿ 11 ವಿಕೆಟ್ ಕಿತ್ತಿದ್ದಾರೆ. 7 ಪಂದ್ಯಗಳಲ್ಲಿ ಶಕೀಬ್ ಕ್ರಮವಾಗಿ 75, 64, 121, 124*, 41, 51, 66 ರನ್ ಗಳಿಸಿದ್ದಾರೆ.