ಅಹಮದಾಬಾದ್: ಭಾರತ (India) ವಿರುದ್ಧದ ವಿಶ್ವಕಪ್ ಕ್ರಿಕೆಟ್ (World Cup Cricket) ಪಂದ್ಯದಲ್ಲಿ ಕೇವಲ 36 ರನ್‌ಗಳ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡ ಪರಿಣಾಮ ಪಾಕಿಸ್ತಾನ (Pakistan) 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟ್ ಆಗಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ 29.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 155 ರನ್‌ಗಳಿಸಿ ಸುಭದ್ರ ಸ್ಥಿತಿಯಲ್ಲಿ ಇತ್ತು. ಆದರೆ ಯಾವಾಗ ಬಾಬರ್ ಅಜಂ ಔಟಾದರೋ ಅಲ್ಲಿಂದ ಕುಸಿತ ಆರಂಭವಾಯಿತು. ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟರ್‌ನಿಂದ ಪ್ರತಿರೋಧ ನೀಡದ ಪರಿಣಾಮ ಪಾಕ್ 191 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಪಾಕ್ ಪಂದ್ಯದ ವೇಳೆ ಕೊಹ್ಲಿ ಎಡವಟ್!
Advertisement
The perfect delivery ????
This Jasprit Bumrah wicket is one of the moments that could be featured in your @0xFanCraze Crictos Collectible packs!
Visit https://t.co/2yiXAnq84l to own iconic moments from the #CWC23 pic.twitter.com/DGLEBjuhjb
— ICC Cricket World Cup (@cricketworldcup) October 14, 2023
Advertisement
ಬಾಬರ್ ಅಜಂ (Babar Azam) ಮತ್ತು ರಿಜ್ವಾನ್ (Mohammad Rizwan) 3ನೇ ವಿಕೆಟಿಗೆ 103 ಎಸೆತಗಳಲ್ಲಿ 82 ರನ್ ಜೊತೆಯಾಟವಾಡಿದ್ದರು. 50 ರನ್ (58 ಎಸೆತ, 7 ಬೌಂಡರಿ) ಹೊಡೆದಿದ್ದ ಅಜಂ ಅವರನ್ನು ಸಿರಾಜ್ ಬೌಲ್ಡ್ ಮಾಡಿದರೆ 49 ರನ್ (69 ಎಸೆತ, 7 ಬೌಂಡರಿ) ಹೊಡೆದಿದ್ದ ರಿಜ್ವಾನ್ ಅವರನ್ನು ಬುಮ್ರಾ ಬೌಲ್ಡ್ ಮಾಡಿದರು.
Advertisement
ಬುಮ್ರಾ , ಸಿರಾಜ್, ಪಾಂಡ್ಯ, ಕುಲದೀಪ್ ಯಾದವ್ , ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಬುಮ್ರಾ 7 ಓವರ್ ಅದರಲ್ಲಿ 1 ಮೇಡನ್ ಸೇರಿ 19 ರನ್ ನೀಡಿದರೆ ಕುಲದೀಪ್ ಯಾದವ್ 10 ಓವರ್ ಹಾಕಿ 35 ರನ್ ನೀಡಿದರು. ವಿಶೇಷ ಏನೆಂದರೆ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದಿಂದ ಒಂದೇ ಒಂದು ಸಿಕ್ಸ್ ಸಹ ಸಿಡಿಯಲ್ಪಟ್ಟಿಲ್ಲ.
Advertisement
Web Stories