ಮುಂಬೈ: ಸ್ನಾಯು ಸೆಳೆತ, ರನ್ ಓಡಲು ಪರದಾಟ, ಓವರ್‌ನ ಕೊನೆಯ ಬಾಲಿನಲ್ಲಿ ಸಿಂಗಲ್ ಓಟ, ರನ್ ಓಡಲು ಕಷ್ಟವಾಗುತ್ತದೆ ಎಂದಾಗ ಬೌಂಡರಿ ಸಿಕ್ಸರ್ ಸುರಿಮಳೆ… ಇದು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ (Glenn Maxwell) ವಿಶ್ವದಾಖಲೆಯ (World Record) ಚೇಸಿಂಗ್ ಆಟದ ಪರಿ.
ಮುಂಬೈನಲ್ಲಿ ಅಫ್ಘಾನಿಸ್ತಾನದ (Afghanistan) ವಿರುದ್ಧ ಮ್ಯಾಕ್ಸಿ ಏಕಾಂಗಿಯಾಗಿ ಆಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸ್ನಾಯು ಸೆಳೆತವಾಗಿದ್ದರೂ ಛಲ ಬಿಡದೇ ಹೋರಾಡಿದ ಮ್ಯಾಕ್ಸ್‌ವೆಲ್ ವಿಶ್ವಕಪ್ ಕ್ರಿಕೆಟ್‌ನಲ್ಲಿ ಯಾರೂ ಮಾಡದ ಸಾಧನೆ ಮಾಡಿ ಈಗ ಇತಿಹಾಸ ನಿರ್ಮಿಸಿದ್ದಾರೆ.
Advertisement
View this post on Instagram
91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಾಗ ಆಸ್ಟ್ರೇಲಿಯಾ 150 ರನ್‌ಗಳಿಸುವುದೇ ಕಷ್ಟ ಎಂದೇ ಭಾವಿಸಲಾಗಿತ್ತು. ಆದರೆ ಮ್ಯಾಕ್ಸಿ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದರು. ಸ್ನಾಯು ಸೆಳೆತವಾದರೂ ಕಷ್ಟಪಟ್ಟು ಬ್ಯಾಟ್ ಮಾಡಿದರು. ಒಂದು ಹಂತದಲ್ಲಿ ಇನ್ನೇನು ಮ್ಯಾಕ್ಸ್‌ವೆಲ್ ರಿಟೈರ್ಡ್ ಹರ್ಟ್ ಆಗಿ ಹೊರನಡೆಯಲಿದ್ದಾರೆ ಎನ್ನುವ ಪರಿಸ್ಥಿತಿ ಇತ್ತು. ಮ್ಯಾಕ್ಸಿ 147 ರನ್ ಗಳಿಸಿದ್ದಾಗ ಆಡಂ ಜಂಪಾ ಹೆಲ್ಮೆಟ್, ಪ್ಯಾಡ್ ಕಟ್ಟಿಕೊಂಡು ಬೌಂಡರಿ ಗೆರೆ ಬಳಿ ಸಿದ್ಧವಾಗಿ ನಿಂತಿದ್ದರು. ಆದರೆ ಹಠ ಬಿಡದ ಮ್ಯಾಕ್ಸ್‌ವೆಲ್ ಬಹಳ ಲೆಕ್ಕಾಚಾರದಿಂದ ಬ್ಯಾಟ್ ಬೀಸತೊಡಗಿದರು. ಹೆಚ್ಚು ಹೆಚ್ಚು ಬೌಂಡರಿ, ಸಿಕ್ಸರ್ ಸಿಡಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದರು. ಓವರ್‌ನ ಕೊನೆಯ ಎಸೆತದಲ್ಲಿ ಕಷ್ಟಪಟ್ಟು ಒಂದು ರನ್ ಓಡುವ ಮೂಲಕ ಮರಳಿ ಸ್ಟ್ರೈಕ್‌ಗೆ ಬರುತ್ತಿದ್ದರು. ಅಂತಿಮವಾಗಿ 128 ಎಸೆತದಲ್ಲಿ 201 ರನ್ ಸಿಡಿಸಿ ತಂಡವನ್ನು ಸೆಮಿಸ್‌ಗೇರಿಸಿದರು.
Advertisement
ಮ್ಯಾಕ್ಸ್‌ವೆಲ್ ಬ್ಯಾಟಿನಿಂದ 21 ಬೌಂಡರಿ ಸಿಡಿದರೆ ಬರೋಬ್ಬರಿ 10 ಸಿಕ್ಸ್ ಸಿಡಿಯಲ್ಪಟ್ಟಿತ್ತು. ಬೌಂಡರಿ, ಸಿಕ್ಸ್ ಮೂಲಕವೇ 144 ರನ್ ಚಚ್ಚಿದ್ದರು. ಅದರಲ್ಲೂ ಮುರಿಯದ 8ನೇ ವಿಕೆಟಿಗೆ ನಾಯಕ ಪ್ಯಾಟ್ ಕಮ್ಮಿನ್ಸ್ ಜೊತೆಗೆ 170 ಎಸೆತಗಳಲ್ಲಿ 202ರನ್ ಜೊತೆಯಾಟವಾಡಿದರು. ಇದರಲ್ಲಿ ಮ್ಯಾಕ್ಸಿ ಪಾಲು 179 ರನ್. ಪ್ಯಾಟ್ ಕಮ್ಮಿನ್ಸ್ 68 ಎಸೆತ ಎದುರಿಸಿ ಕೇವಲ 12 ರನ್ ಹೊಡೆದು ಮ್ಯಾಕ್ಸಿಗೆ ಉತ್ತಮ ಸಾಥ್ ನೀಡಿದರು. ಆಸ್ಟ್ರೇಲಿಯಾ ಒಟ್ಟು ಸ್ಕೋರ್ 293. ಇದರಲ್ಲಿ ಮ್ಯಾಕ್ಸ್‌ವೆಲ್ ಒಬ್ಬರದ್ದೇ 201 ರನ್. ಇದನ್ನೂ ಓದಿ: World Cup 2023: ಆಸೀಸ್ ವಿರುದ್ಧ ಹಲವು ದಾಖಲೆ ನಿರ್ಮಿಸಿದ ಅಫ್ಘಾನ್..!
Advertisement
ಮ್ಯಾಕ್ಸಿಯ ಬ್ಯಾಟಿಂಗ್ ಆರ್ಭಟ ಹೇಗಿತ್ತು ಎಂದರೆ 50 ರನ್ 51 ಎಸೆತದಲ್ಲಿ ಬಂದಿದ್ದರೆ 100 ರನ್ 76 ಎಸೆತದಲ್ಲಿ ಬಂದಿತ್ತು. 150 ರನ್ 104 ಎಸೆತದಲ್ಲಿ ದಾಖಲಾದರೆ 200 ರನ್ 128ನೇ ಎಸೆತದಲ್ಲಿ ಬಂದಿತ್ತು. ನಿಲ್ಲಲು ಆಗದ ಸ್ಥಿತಿಯಲ್ಲಿ ಸ್ಫೋಟಕ ಬ್ಯಾಟ್ ಮಾಡಿದ ಮ್ಯಾಕ್ಸ್‌ವೆಲ್ ಹಲವು ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ.
Advertisement
View this post on Instagram
ಆಸ್ಟ್ರೇಲಿಯಾದ ಮೊದಲ ದ್ವಿಶತಕ
5 ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ (Australia) ಪರವಾಗಿ ಇಲ್ಲಿಯವರೆಗೂ ಯಾವೊಬ್ಬ ಬ್ಯಾಟರ್ ದ್ವಿಶತಕ ಸಿಡಿಸಿರಲಿಲ್ಲ. ಈ ಹಿಂದೆ ಶೇನ್ ವಾಟ್ಸನ್ ಔಟಾಗದೇ 185 ರನ್ ಸಿಡಿಸಿದ್ದರು. ಇದು ಆಸ್ಟ್ರೇಲಿಯಾ ಪರವಾಗಿ ದಾಖಲಾದ ಅತ್ಯಧಿಕ ಸ್ಕೋರ್ ಆಗಿತ್ತು. ಬಾಂಗ್ಲಾದೇಶದ ವಿರುದ್ಧ 2011 ರ ವಿಶ್ವಕಪ್‌ನಲ್ಲಿ ಈ ವಾಟ್ಸನ್ ಈ ಸಾಧನೆ ನಿರ್ಮಿಸಿದ್ದರು. ವಾಟ್ಸನ್ ದಾಖಲೆಯನ್ನು ಮ್ಯಾಕ್ಸಿ ಈಗ ಮುರಿದಿದ್ದಾರೆ.
ರನ್ ಚೇಸ್‌ನಲ್ಲಿ ವಿಶ್ವದಾಖಲೆ
ಚೇಸಿಂಗ್‌ನಲ್ಲಿ 200 ರನ್ ಹೊಡೆಯುವುದು ಬಹಳ ಕಷ್ಟ. ಮ್ಯಾಕ್ಸ್‌ವೆಲ್ ಚೇಸಿಂಗ್ ವೇಳೆ ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 2021ರಲ್ಲಿ ಪಾಕಿಸ್ತಾನ ಫಖರ್ ಜಮಾನ್ ದಕ್ಷಿಣ ಆಫ್ರಿಕಾದ ವಿರುದ್ಧ 193 ರನ್ ಹೊಡೆದಿದ್ದರು. ಮೊಬೈಲಿನಲ್ಲೇ ಲೇಟೆಸ್ಟ್ ಸುದ್ದಿ ಓದಲು ಪಬ್ಲಿಕ್ ಟಿವಿ ವಾಟ್ಸಪ್ ಚಾನೆಲಿಗೆ ಸೇರ್ಪಡೆಯಾಗಿ: ಪಬ್ಲಿಕ್ ಟಿವಿ ವಾಟ್ಸಪ್ ಚಾನೆಲ್
View this post on Instagram
ದ್ವಿತಶತಕ ಸಿಡಿಸಿದ ಮೂರನೇ ಆಟಗಾರ
ಔಟಾಗದೇ 201 ರನ್ ಸಿಡಿಸುವ ಮೂಲಕ ವಿಶ್ವಕಪ್‌ನಲ್ಲಿ ಮೂರನೇ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಹಿಂದೆ 2015ರಲ್ಲಿ ಜಿಂಬಾಬ್ವೆ ವಿರುದ್ಧ ಕ್ರಿಸ್ ಗೇಲ್ 215 ರನ್ ಸಿಡಿಸಿದ್ದರೆ 2015ರಲ್ಲೇ ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ ಔಟಾಗದೇ ವಿಂಡೀಸ್ ವಿರುದ್ಧ 237 ರನ್ ಹೊಡೆದಿದ್ದರು.
ಎರಡನೇ ವೇಗದ ದ್ವಿಶತಕ
ಕೇವಲ 128 ಎಸೆತಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ವೇಗದ ದ್ವಿಶತಕ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಭಾರತದ ಇಶನ್ ಕಿಶನ್ 2022ರಲ್ಲಿ 126 ಎಸೆತದಲ್ಲಿ ಬಾಂಗ್ಲಾ ವಿರುದ್ಧ ದ್ವಿಶತಕ ಸಿಡಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.