ಅಹಮದಾಬಾದ್: ಟೀಂ ಇಂಡಿಯಾ (Team India) ಹಾಗೂ ಪಾಕ್ (Pakistan) ನಡುವೆ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಹೈವೋಲ್ಟೇಜ್ ವಿಶ್ವಕಪ್ ಪಂದ್ಯಕ್ಕಾಗಿ (World Cup 2023) ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದಾರೆ. ಎರಡೂ ತಂಡಗಳು ತಮ್ಮ ಮೊದಲ ಎರಡೂ ಪಂದ್ಯಗಳನ್ನು ಗೆದ್ದಿವೆ. ಇದರಿಂದಾಗಿ ಉಭಯ ತಂಡಗಳ ಪೈಪೋಟಿಯ ಮೇಲೆ ಅಭಿಮಾನಿಗಳು ಕಾತುರದ ಕಣ್ಣಿಟ್ಟಿದ್ದಾರೆ. ಎರಡೂ ತಂಡಗಳು ಈಗಾಗಲೇ ಅಹಮದಾಬಾದ್ ತಲುಪಿದ್ದು, ಅಭ್ಯಾಸವನ್ನು ಆರಂಭಿಸಿವೆ.
ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‍ಗಳಿಂದ ಗೆದ್ದರೆ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 8 ವಿಕೆಟ್‍ಗಳಿಂದ ಗೆಲುವು ಸಾಧಿಸಿತ್ತು. ಮತ್ತೊಂದೆಡೆ ಪಾಕಿಸ್ತಾನ ನೆದಲ್ಯಾರ್ಂಡ್ಸ್ ಮತ್ತು ಶ್ರೀಲಂಕಾ ವಿರುದ್ಧದ ಕ್ರಮವಾಗಿ 81 ರನ್ ಮತ್ತು 6 ವಿಕೆಟ್‍ಗಳಿಂದ ಗೆದ್ದುಕೊಂಡಿದೆ. ಇದನ್ನೂ ಓದಿ: ಇಂಡೋ-ಪಾಕ್ ಕದನ: 10 ಸೆಕೆಂಡ್ ಜಾಹೀರಾತಿನ ಬೆಲೆ ಕೇಳಿದ್ರೆ ಎದೆ ಬಡಿತ ಹೆಚ್ಚಿಸುತ್ತೆ..!
Advertisement
Advertisement
ಇದರ ನಡುವೆ ನಾಳೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಪಂದ್ಯದ ವೇಳೆ ಉತ್ತರ ಗುಜರಾತ್‍ನಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಪಂದ್ಯದ ನೇರ ಪ್ರಸಾರವನ್ನು ಎಲ್ಲಾ ಸ್ಟಾರ್ ಸ್ಪೋರ್ಟ್ಸ್ ನೆಟ್‍ವರ್ಕ್ ಚಾನೆಲ್‍ಗಳಲ್ಲಿ ವೀಕ್ಷಿಸಬಹುದಾಗಿದೆ. ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಲೈವ್-ಸ್ಟ್ರೀಮಿಂಗ್‍ನ್ನು ಡಿಸ್ನಿ+ ಹಾಟ್‍ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಾಗಿದೆ.
Advertisement
7-0 ಮುನ್ನಡೆಯಲ್ಲಿ ಭಾರತ:
ಭಾರತ ಮತ್ತು ಪಾಕ್ ನಡುವಿನ ಏಕದಿನ ವಿಶ್ವಕಪ್‍ನಲ್ಲಿ ಇದುವರೆಗೆ ಒಟ್ಟು 7 ಪಂದ್ಯಗಳು ನಡೆದೆದಿವೆ. ಈ ಪೈಕಿ ಟೀಂ ಇಂಡಿಯಾ ಎಲ್ಲಾ ಏಳು ಪಂದ್ಯಗಳನ್ನು ಗೆದ್ದಿದೆ. 1992, 1996, 1999, 2003, 2011, 2015 ಮತ್ತು 2019 ರಲ್ಲಿ ನಡೆದ ಎಲ್ಲಾ ಏಳು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದೆ.
ಕಳೆದ ಬಾರಿ 2019ರ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು 89 ರನ್‍ಗಳಿಂದ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿ ಭಾರತ 5 ವಿಕೆಟ್‍ಗೆ 336 ರನ್ ಗಳಿಸಿತ್ತು. ಮಳೆ ಅಡ್ಡಿಪಡಿಸಿದ ಈ ಪಂದ್ಯದಲ್ಲಿ ಪಾಕಿಸ್ತಾನಕ್ಕೆ 40 ಓವರ್‍ಗಳಲ್ಲಿ 302 ರನ್‍ಗಳ ಗುರಿ ನೀಡಲಾಗಿತ್ತು. ಪಾಕಿಸ್ತಾನ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‍ಗೆ 212 ರನ್ ಗಳಿಸಿ ಸೋಲು ಕಂಡಿತ್ತು. ಈ ಮೂಲಕ ಭಾರತ 89 ರನ್‍ಗಳಿಂದ ಜಯ ಸಾಧಿಸಿತ್ತು. ಇದನ್ನೂ ಓದಿ: ಆಸೀಸ್ ವಿರುದ್ಧ 134 ರನ್‌ಗಳ ಭರ್ಜರಿ ಜಯ – ಮೊದಲ ಸ್ಥಾನಕ್ಕೆ ದ.ಆಫ್ರಿಕಾ ಜಿಗಿತ
Web Stories