ಧರ್ಮಶಾಲಾ: ಇಲ್ಲಿನ ಹೆಚ್‌ಪಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ಭಾರತ-ನ್ಯೂಜಿಲೆಂಡ್ (IND-NZ) ಹೈವೋಲ್ಟೇಜ್ ಪಂದ್ಯ ನಿಗದಿಯಾಗಿದ್ದು, ಮಳೆಯ ಆತಂಕ ಎದುರಾಗಿದೆ.
ನಾಳೆ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ ಮಳೆ ಬರುವ ಮುನ್ಸೂಚನೆ ಇದ್ದು, ಪಂದ್ಯ ಶೇ.90ರಷ್ಟು ಅನುಮಾನ ಎನ್ನಲಾಗಿದೆ. ಮಳೆ ಬಿಡುವು ಕೊಡದಿದ್ದರೆ ಪಂದ್ಯ ರದ್ದು ಮಾಡಲಾಗುತ್ತದೆ. ಇದನ್ನೂ ಓದಿ: ಕ್ಲಾಸೆನ್ ಅಬ್ಬರದ ಶತಕ – ಇಂಗ್ಲೆಂಡ್ ವಿರುದ್ಧ ಆಫ್ರಿಕಾಗೆ 229 ರನ್ ಭರ್ಜರಿ ಜಯ
ಈ ಮಧ್ಯೆ ವಿಶ್ವಕಪ್‌ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಅಂಕಿ ಅಂಶ ಗಮನ ಸೆಳೆಯುತ್ತಿದೆ. ನಾಲ್ಕು ಪಂದ್ಯಗಳಲ್ಲಿ 37.5 ಓವರ್ ಬೌಲಿಂಗ್ ಮಾಡಿದ್ದು, ಅದರಲ್ಲಿ 21.5 ಓವರ್ ಡಾಟ್ ಬಾಲ್ ಎಸೆದಿದ್ದಾರೆ. ಅಂದ್ರೆ 227 ಎಸೆತಗಳಲ್ಲಿ 131 ಎಸೆತಗಳಿಗೆ ಬ್ಯಾಟರ್‌ಗಳು ಉತ್ತರಿಸಿಲ್ಲ. ಬೌಂಡರಿ ಬಾಲ್ಸ್ 11 ಮಾತ್ರ. ಅದರಲ್ಲಿ 9 ಫೋರ್, 2 ಸಿಕ್ಸ್ ಇವೆ.
Web Stories