– ವಿಶ್ವಕಪ್‌ನಲ್ಲಿ ಜನ್ಮದಿನದಂದೇ ಭಾರತದ ಪರ ಮೊದಲ ಸೆಂಚುರಿ
ಕೋಲ್ಕತ್ತಾ: ಕಿಂಗ್ ಕೊಹ್ಲಿ (Virat Kohli) ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೊಸ ದಾಖಲೆಯೊಂದನ್ನ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ವಿಶ್ವಕಪ್ (W0rld Cup) ಪಂದ್ಯದಲ್ಲಿ ಬರ್ತ್ ಡೇಯಂದೇ ಶತಕ ದಾಖಲಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ (South Africa) ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ತನ್ನ ವೃತ್ತಿ ಬದುಕಿನ 49ನೇ ಏಕದಿನ ಶತಕ ದಾಖಲಿಸಿದರು. 101 ರನ್ ಗಳಿಸಿದ ಕೊಹ್ಲಿ ಅಜೇಯರಾಗಿಯೇ ಉಳಿದರು. ಅಲ್ಲದೆ ವಿಶ್ವಕಪ್‌ನಲ್ಲಿ 4ನೇ ಸೆಂಚುರಿ ಬಾರಿಸಿದರು. ಈ ಮೂಲಕ 49 ಶತಕ ಬಾರಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು.
Advertisement
Advertisement
ಇನ್ನಿಂಗ್ಸ್ ಮಧ್ಯೆ ಬ್ರೇಕ್‌ನಲ್ಲಿ ಬರ್ತ್ ಡೇ ದಿನದ ಶತಕ ಹೇಗನ್ನಿಸ್ತು? ಎಂಬ ವೀಕ್ಷಕ ವಿವರಣೆಗಾರರ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ಭಾರತಕ್ಕಾಗಿ ಆಡುವುದು ನನಗೆ ಹೆಮ್ಮೆ. ಇಷ್ಟೊಂದು ಅಭಿಮಾನಿಗಳ ಮುಂದೆ ಈ ಸಾಧನೆ ನೀಡಿರುವುದು ಖುಷಿ ತಂದಿದೆ ಎಂದರು.
Advertisement
ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಇದುವರೆಗೆ 7 ಆಟಗಾರರು ಬರ್ತ್ ಡೇಯಂದೇ ಶತಕ ಬಾರಿಸಿದ್ದಾರೆ.
Advertisement
1. ವಿನೋದ್ ಕಾಂಬ್ಳಿ, ಭಾರತ 21ನೇ ಶತಕ, ಇಂಗ್ಲೆಂಡ್ ವಿರುದ್ಧ ಅಜೇಯ 100 ರನ್, ಜೈಪುರ, 1993
ಇಂಗ್ಲೆಂಡ್ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ 149 ಎಸೆತಗಳಲ್ಲಿ ಶತಕ ಬಾರಿಸಿದ ವಿನೋದ್ ಕಾಂಬ್ಳಿ (Vinod Kambli) ಅಜೇಯರಾಗಿ ಉಳಿದರು. 9 ಬೌಂಡರಿ ಹಾಗೂ ಒಂದು ಸಿಕ್ಸ್ ಒಳಗೊಂಡ ಶತಕ ಕಾಂಬ್ಳಿ ಬಾರಿಸಿದರೂ ಭಾರತ ಈ ಪಂದ್ಯವನ್ನು 4 ವಿಕೆಟ್‌ಗಳಿಂದ ಸೋತಿತ್ತು.
2. ಸಚಿನ್ ತೆಂಡೂಲ್ಕರ್, ಭಾರತ, 25ನೇ ಶತಕ, ಆಸ್ಟ್ರೇಲಿಯಾ ವಿರುದ್ಧ 134, ಶಾರ್ಜಾ, 1998
1998ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಒನ್‌ಡೇ ಮ್ಯಾಚ್ ದಿನ 25ನೇ ಬರ್ತ್ಡೇ ಆಚರಿಸಿದ ಸಚಿನ್ (Sachin Tendulkar) ತಮ್ಮ 25ನೇ ಶತಕವನ್ನು ಅರ್ಥಪೂರ್ಣವಾಗಿ ಬಾರಿಸಿದರು. 131 ಎಸೆತಗಳಲ್ಲಿ 12 ಬೌಂಡರಿ ಹಾಘೂ 3 ಸಿಕ್ಸರ್ ಒಳಗೊಂಡ 134 ರನ್ ಬಾರಿಸಿದರು. ಈ ಪಂದ್ಯವನ್ನು ಭಾರತ ಆರು ವಿಕೆಟ್‌ಗಳಿಂದ ಗೆದ್ದಿತ್ತು.
3. ಸನತ್ ಜಯಸೂರ್ಯ, ಶ್ರೀಲಂಕಾ, 39ನೇ ಬರ್ತ್ಡೇ, ಬಾಂಗ್ಲಾದೇಶದ ವಿರುದ್ಧ 130 ರನ್, ಕರಾಚಿ, 2008
2008ರಲ್ಲಿ 39ನೇ ಬರ್ತ್ಡೇ ದಿನ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಪಂದ್ಯಲ್ಲಿ ಸನತ್ ಜಯಸೂರ್ಯ ಶತಕ ಬಾರಿಸಿದರು. 88 ಎಸೆತಗಳಲ್ಲಿ 16 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡ ಇನ್ನಿಂಗ್ಸ್ನಲ್ಲಿ ಜಯಸೂರ್ಯ 130 ರನ್ ಗಳಿಸಿರು. ಈ ಪಂದ್ಯದಲ್ಲಿ ಶ್ರೀಲಂಕಾ 158 ರನ್ ಅಂತರದಿಂದ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿತ್ತು.
4. ರಾಸ್ ಟೇಲರ್, ನ್ಯೂಜಿಲೆಂಡ್, 27ನೇ ಬರ್ತ್ಡೇ, ಪಾಕಿಸ್ತಾನ ವಿರುದ್ಧ ಅಜೇಯ 131 ರನ್, ಪಲ್ಲೆಕೆಲೆ, 2011
ವಿಶ್ವಕಪ್ ಪಂದ್ಯಾವಳಿಯಲ್ಲಿ ಬರ್ತ್ಡೇ ಆಚರಿಸಿಕೊಂಡ ಮೊದಲ ಆಟಗಾರ ರಾಸ್ ಟೇಲರ್ (Ross Taylor). ಶತಕದ ಜೊತೆ 27ನೇ ಬರ್ತ್ಡೇ ಆಚರಿಸಿಕೊಂಡರು. ಪಾಕಿಸ್ತಾನ ವಿರುದ್ಧದ ಪಂದ್ಯಲ್ಲಿ 124 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸ್ ಜೊತೆ 131 ರನ್ ಬಾರಿಸಿದ್ದರು. ಈ ಪಂದ್ಯವನ್ನು ನ್ಯೂಜಿಲೆಂಡ್ 110 ರನ್ ಗಳಿಂದ ಗೆದ್ದಿತ್ತು.
5. ಟಾಮ್ ಲ್ಯಾಥಮ್, ನ್ಯೂಜಿಲೆಂಡ್, 30ನೇ ಶತಕ, ನೆದರ್ಲೆಂಡ್ ವಿರುದ್ಧ ಅಜೇಯ 140 ರನ್, ಹ್ಯಾಮಿಲ್ಟನ್, 2022
ನೆದರ್ಲೆಂಡ್ ವಿರುದ್ಧದ ಹ್ಯಾಮಿಲ್ಟನ್‌ನಲ್ಲಿ 2022ರಲ್ಲಿ ನಡೆದ 123 ಎಸೆತಗಳಲ್ಲಿ 140 ರನ್ ಗಳಿಸಿ ಟಾಮ್ ಲ್ಯಾಥಮ್ ಅಜೇಯರಾಗಿ ಉಳಿದರು. ಈ ಇನ್ನಿಂಗ್ಸ್ 10 ಬೌಂಡರಿ ಹಾಘೂ 5 ಸಿಕ್ಸರ್ ಗಳನ್ನೊಳಗೊಂಡಿತ್ತು. ನ್ಯೂಜಿಲೆಂಡ್ ಈ ಪಂದ್ಯವನ್ನು 118 ರನ್ ಅಂತರದಿಂದ ಗೆದ್ದಿತ್ತು.
6. ಮಿಚೆಲ್ ಮಾರ್ಷ್, ಆಸ್ಟ್ರೇಲಿಯಾ, 32ನೇ ಬರ್ತ್ಡೇ, ಪಾಕಿಸ್ತಾನ ವಿರುದ್ಧ 121, ಬೆಂಗಳೂರು 2023
ಈ ಬಾರಿಯ ವಿಶ್ವಕಪ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಬರ್ತ್ಡೇ ದಿನವೇ ಸೆಂಚುರಿ ಬಾರಿಸಿದರು. 108 ಬಾಲಲ್ಲಿ 121 ರನ್ ಗಳಿಸಿದರು. 10 ಫೋರ್ ಹಾಗೂ 9 ಸಿಕ್ಸರ್ ಒಳಗೊಂಡ ಇನ್ನಿಂಗ್ಸ್ ಇದಾಗಿತ್ತು.
7. ವಿರಾಟ್ ಕೊಹ್ಲಿ, ಭಾರತ, 35ನೇ ಬರ್ತ್ಡೇ, ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 101 ರನ್, ಕೋಲ್ಕತ್ತಾ, 2023
ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಭಾರತದ ಪರ ಬರ್ತ್ಡೇ ದಿನ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. 121 ಎಸೆತಗಳಲ್ಲಿ ಕೊಹ್ಲಿ 10 ಬೌಂಡರಿಗಳ ಸಹಿತ 101 ರನ್ ಬಾರಿಸಿದರು. ಅಲ್ಲದೇ ಇದೇ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಗೆ ತಮ್ಮ ಹೆಸರನ್ನೂ ಸೇರಿಸಿಕೊಂಡರು.