ಬೆಂಗಳೂರು: ವಿಶ್ವಕಪ್ ಮಹಾಸಮರಕ್ಕೆ ಅಹಮದಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಸಾಕ್ಷಿಯಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಇಂಡಿಯಾ ಹಾಗೂ ಆಸ್ಟ್ರೇಲಿಯಾ (IND Vs AUS) ನಡುವೆ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಉಡುಪಿ, ಮೈಸೂರು, ರಾಯಚೂರು ಹಾಗೂ ಬೆಳಗಾವಿ ಜಿಲ್ಲೆಯ ಅಭಿಮಾನಿಗಳು ವಿಶ್ ಮಾಡುವುದರ ಜೊತೆಗೆ ಆಯಾ ದೇಗುಲಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.
Advertisement
ದೇಶದಲ್ಲೆಲ್ಲಾ ವರ್ಲ್ಡ್ ಕಪ್ ನ (World Cup 2023) ಫೈನಲ್ ಫೀವರ್ ಹಬ್ಬಿದೆ. ಈ ಬಾರಿ ಟೀಂ ಇಂಡಿಯಾ ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಕ್ರಿಕೆಟ್ ಅಭಿಮಾನಿಗಳದ್ದಾಗಿದೆ. ಉಡುಪಿಯ ಎಂಜಿಎಂ ಕಾಲೇಜಿನ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಲ್ ದ ಬೆಸ್ಟ್ ಇಂಡಿಯಾ.. ಇಂಡಿಯಾ… ಎಂದು ಚೀಯರ್ ಅಫ್ ಮಾಡಿದ್ದಾರೆ. ಇನ್ನು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಕ್ರಿಕೆಟ್ ಪ್ರೇಮಿಗಳು ಶುಭಾಶಯ ಕೋರಿದ್ದಾರೆ. ಧಾನ್ಯಗಳ ಮೂಲಕ ಭಾರತದ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ
Advertisement
Advertisement
ವಿಶ್ವಕಪ್ ಕ್ರಿಕೆಟ್‍ನ ಹೈ ವೋಲ್ಟೇಜ್ ಮ್ಯಾಚ್ ನೋಡಲು ಜನ ಹೈ ಅಲರ್ಟ್ ಆಗಿದ್ದಾರೆ. ಎಲ್ಲಿ ನೋಡಿದರಲ್ಲಿ ಜಿತೇಗಾ ಬೈ ಜೀತೆಗಾ ಹಿಂದೂಸ್ತಾನ್ ಜೀತೆಗಾ ಈ ಸಲ ಕಪ್ ನಮ್ಮದೇ ಭಾರತ ತಂಡಕ್ಕೆ ಗೆಲುವಾಗಲಿ ಎಂಬ ಘೋಷಣೆಗಳು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿಯೂ ಕ್ರಿಕೆಟ್ ಪ್ರೇಮಿಗಳು, ಗಲ್ಲಿ ಕ್ರಿಕೆಟಿಗರು ಟೀಂ ಇಂಡಿಯಾಗೆ ವಿಶ್ ಮಾಡಿದ್ದಾರೆ.
Advertisement
ಇತ್ತ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ಗೆಲ್ಲಲಿ ಅಂತ ರಾಯಚೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಗರದ ನಂದೀಶ್ವರ ದೇವಾಲಯದಲ್ಲಿ ಮಹಿಳೆಯರು ಪ್ರಾರ್ಥನೆ ಸಲ್ಲಿಸಿ ಟೀಂ ಇಂಡಿಯಾಗೆ ಶುಭ ಹಾರೈಸಿದ್ದಾರೆ. ಈ ಬಾರಿಯ ವರ್ಲ್ಡ್ ಕಪ್ ನಮ್ಮದೇ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ರೀಡಾಪ್ರೇಮಿಗಳು ಟೀಂ ಇಂಡಿಯಾಗೆ ಶುಭಹಾರೈಸಿದ್ದಾರೆ. ಇನ್ನು ಟೀಂ ಇಂಡಿಯಾ ಗೆಲುವಿಗಾಗಿ ಯಾದಗಿರಿಯ ಶಾಂತಿನಗರದಲ್ಲಿ ಇನ್ನರ್ ವೀಲ್ ಕ್ಲಬ್‍ನಿಂದ ಮಹಿಳೆಯರು ಹೋಮ-ಹವನ ನಡೆಸಿದ್ದಾರೆ.
ಅಹಮದಾಬಾದ್‍ನಲ್ಲಿ ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸೆ, ಬಾಲಿವುಡ್ ತಾರೆಯರು, ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವಕಪ್ ಗೆದ್ದ ತಂಡದ ಮಾಜಿ ನಾಯಕರು ಉಪಸ್ಥಿತಿ ಇರಲಿದ್ದಾರೆ. ಇದಲ್ಲದೆ ಏರ್‍ಶೋ, ಲೇಸರ್ ಶೋ, ಸಂಗೀತ, ನೃತ್ಯ ವೈಭವ ವಿಶ್ವಕಪ್ ಫೈನಲ್ ಮ್ಯಾಚ್‍ನ ಕಿಕ್ಕನ್ನ ಹೆಚ್ಚಿಸಲಿದೆ.