ಅಹಮದಾಬಾದ್: ಸೋಲಿಗೆ ಸೇಡು ತೀರಿಸಿಕೊಂಡಿದ್ದ ಟೀಂ ಇಂಡಿಯಾ (Team India) ಇಂದು ಮತ್ತೊಂದು ಅಂತಹದ್ದೆ ಮೆಗಾ ರೈವರ್ಲಿಗೆ ಸಜ್ಜಾಗಿದೆ. ಆದರೆ ಇದು ನಿನ್ನೆ ಮೊನ್ನೆಯ ಸೇಡಲ್ಲ, ಬರೊಬ್ಬರಿ 20 ವರ್ಷಗಳ ಹಿಂದಿನ ಸೇಡು.
ಕಳೆದ 20 ವರ್ಷಗಳ ಹಿಂದೆ ಅಂದರೆ 2003ರ ವಿಶ್ವಕಪ್ (World Cup) ಫೈನಲ್ ಪಂದ್ಯ ಟೂರ್ನಿ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧವೇ ಮುಗ್ಗರಿಸಿತ್ತು. 2ನೇ ಬಾರಿಗೆ ಫೈನಲ್‌ಗೇರಿ ಚಾಂಪಿಯನ್ ಆಗೇಬಿಡುತ್ತೆ ಎಂದು ಕಾದು ಕುಳಿತಿದ್ದ ಕೋಟಿ ಕೋಟಿ ಭಾರತೀಯ ಅಭಿಮಾನಿಗಳ ಆಸೆ ನೂಚ್ಚುನೂರಾಗಿದ್ದ ದಿನ ಅದು. ಆ ದಿನ ಆಸ್ಟ್ರೇಲಿಯಾ ತಂಡದ ವಿರುದ್ಧ ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ ಈಗ ಹಳೆಯ ಸೋಲಿನ ನೋವನ್ನು ಮುಯ್ಯಿ ಸಮೇತ ವಾಪಸ್ ಕೊಡಲು ರೆಡಿ ಆಗಿದೆ.
Advertisement
Advertisement
ವಿಶ್ವಕಪ್ ಇತಿಹಾಸದಲ್ಲಿ 2 ತಂಡಗಳ ಮುಖಾಮುಖಿಯ ಬಲವನ್ನು ನೋಡುವುದಾದರೆ ಭಾರತ ತಂಡಕ್ಕಿಂತ ಆಸ್ಟ್ರೇಲಿಯಾ ತಂಡವೇ ಬಲಿಷ್ಠವಾಗಿರೋದು ಅಂಕಿ ಅಂಶಗಳ ಮೂಲಕ ಸಾಬೀತಾಗಿದೆ. ವಿಶ್ವಕಪ್ ಇತಿಹಾಸದಲ್ಲಿ 13 ಬಾರಿಗೆ ಮುಖಾಮುಖಿ ಆಗಿರೋ ಉಭಯ ತಂಡಗಳಲ್ಲಿ ಭಾರತ ಗೆದ್ದಿರೋದು ಕೇವಲ 5 ಪಂದ್ಯಗಳು ಮಾತ್ರ. ಉಳಿದಂತೆ ಆಸ್ಟ್ರೇಲಿಯಾ 8 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಮೇಲೆ ಹಿಡಿತ ಸಾಧಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ಪ್ರದರ್ಶನವನ್ನು ನೋಡುವುದಾದರೆ ಕಳೆದ 3 ಬಾರಿಯ ವಿಶ್ವಕಪ್ ಮುಖಾಮುಖಿಯಲ್ಲಿ ಭಾರತವೇ ಪ್ರಾಬಲ್ಯ ಮೆರೆದಿರೋದು. 2011-2023 ರವರೆಗೆ ಒಟ್ಟು 4 ಬಾರಿ ಎದುರಾಗಿದ್ದು, ಭಾರತ 3 ಬಾರಿ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿದೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾಗೆ 3ನೇ ಪ್ರಶಸ್ತಿ ಗೆಲ್ಲುವ ಕನಸು- ಆಸೀಸ್‍ಗೆ 6ನೇ ಟ್ರೋಫಿ ಮೇಲೆ ಕಣ್ಣು
Advertisement
Advertisement
ಆಸೀಸ್ ಮುಖಾಮುಖಿಯ ಅಂಕಿ ಅಂಶಗಳು:
* 1983ರ ವಿಶ್ವಕಪ್‌ನಲ್ಲಿ ಮೊದಲ ಮುಖಾಮುಖಿ ಭಾರತಕ್ಕೆ 162 ರನ್‌ಗಳ ಸೋಲು.
* 1984ರ ವಿಶ್ವಕಪ್‌ನಲ್ಲೆ 2ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಜಯ. ಆಸೀಸ್ ವಿರುದ್ಧ 118 ರನ್‌ಗಳ ಜಯ.
* 1987 ರಲ್ಲಿ 3ನೇ ಮುಖಾಮುಖಿ. ಭಾರತಕ್ಕೆ 1 ರನ್‌ಗಳ ವಿರೋಚಿತ ಸೋಲು.
* 1987 ರಲ್ಲಿ 4ನೇ ಬಾರಿ ಮುಖಾಮುಖಿ. ಭಾರತಕ್ಕೆ 56 ರನ್‌ಗಳ ಜಯ.
* 1992 ರಲ್ಲಿ 5ನೇ ಮುಖಾಮುಖಿ. ಭಾರತಕ್ಕೆ 3 ರನ್‌ಗಳ ವಿರೋಚಿತ ಸೋಲು.
* 1996 ರಲ್ಲಿ 6ನೇ ಮುಖಾಮುಖಿ. ಲೀಗ್ ಭಾರತಕ್ಕೆ 16 ರನ್‌ಗಳ ಸೋಲು.
* 2003 ರಲ್ಲಿ 7ನೇ ಮುಖಾಮುಖಿ. ಲೀಗ್ ಮ್ಯಾಚ್‌ನಲ್ಲಿ ಭಾರತಕ್ಕೆ 9 ವಿಕೆಟ್‌ಗಳ ಸೋಲು.
* 2003ರ ಫೈನಲ್‌ನಲ್ಲಿ 8ನೇ ಬಾರಿಗೆ ಮುಖಾಮುಖಿ. 125 ರನ್‌ಗಳ ಸೋಲು.
* 2011 ರಲ್ಲಿ 9ನೇ ಮುಖಾಮುಖಿ. ಸೆಮಿಸ್‌ನಲ್ಲಿ ಭಾರತಕ್ಕೆ 5 ವಿಕೆಟ್‌ಗಳ ಜಯ.
* 2015ರಲ್ಲಿ 10ನೇ ಮುಖಾಮುಖಿ ಸೆಮಿಸ್‌ನಲ್ಲಿ ಭಾರತಕ್ಕೆ 95 ರನ್‌ಗಳ ಸೋಲು.
* 2019 ರಲ್ಲಿ 11ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ 36 ರನ್‌ಗಳ ಜಯ.
* 2023 ರಲ್ಲಿ ಲೀಗ್‌ನಲ್ಲಿ 12ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ 6 ವಿಕೆಟ್‌ಗಳ ಜಯ.
ಒಟ್ಟಾರೆ ಇಲ್ಲಿಯತನಕ ಒಂದು ಲೆಕ್ಕ ಆದರೆ, ಇಂದಿನಿಂದ ಮತ್ತೊಂದು ಲೆಕ್ಕ. ಟೀಂ ಇಂಡಿಯಾ ಇಂದಿನ ಫೈನಲ್ ಗೆಲ್ಲೋ ಮೂಲಕ 2003 ನಿಮ್ಮ ಸಮಯ ಆದರೆ, 2023 ನಮ್ಮ ಸಮಯ ಅನ್ನೋದನ್ನು ತೋರಿಸಬೇಕಿದೆ. ಇದನ್ನೂ ಓದಿ: ಇಂದು IND Vs AUS ಸಮರ – 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ತವಕ