ಅಹಮದಾಬಾದ್: ಸೋಲಿಲ್ಲದೆ 2023ರ ಏಕದಿನ ವಿಶ್ವಕಪ್ ಫೈನಲ್ಗೆ (World Cup Final 2023) ಲಗ್ಗೆ ಇಟ್ಟಿರುವ ಭಾರತ (India) ತಂಡ, ಮೂರನೇ ಬಾರಿ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಇಂದು ಅಹ್ಮದಾಬಾದ್‍ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ (Narendra Modi Stadium Ahemadabad) ನಡೆಯುವ ಫೈನಲ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಪ್ರಶಸ್ತಿಗಾಗಿ ಸೆಣಸಲಿದೆ. ಟೀಂ ಸ್ಟ್ರಾಟಜಿ ಏನು, ಪ್ಲೇಯಿಂಗ್ ಲೆವನ್ ಹೇಗಿರುತ್ತೆ. ಪಿಚ್ ರಿಪೋರ್ಟ್ ಏನ್ ಹೇಳುತ್ತೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Advertisement
ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗೋ ಕಾಲ. 12 ವರ್ಷಗಳ ವನವಾಸಕ್ಕೆ ಮುಕ್ತಿ ಸಿಗೋ ಕಾಲ. ಎಸ್, ಎದೆಬಡಿತ ಹೆಚ್ಚಿರೋ ವಿಶ್ವಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇಡೀ ಜಗತ್ತೇ ಕಾದು ಕುಳಿತಿದೆ. ಅಹಮದಾಬಾದ್‍ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಬಲಿಷ್ಟ ಎರಡು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದಾವೆ. ಒಂದು ದಶಕದ ಬಳಿಕ ಐಸಿಸಿ (ICC) ಟ್ರೋಫಿ ಎತ್ತಿಹಿಡಿಯಲು ಭಾರತ ಕಾಯ್ತಿದ್ರೆ, ಇತ್ತ ಆಸ್ಟ್ರೇಲಿಯಾ ಆರನೇ ವಿಶ್ವಕಪ್ ನ್ನು ತನ್ನದಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಇದನ್ನೂ ಓದಿ: ಇಂದು IND Vs AUS ಸಮರ – 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ತವಕ
Advertisement
Advertisement
ಎರಡು ತಂಡಗಳ ಕಾಳಗ ನಿಜಕ್ಕೂ ಮದಗಜಗಳ ಕಾದಾಟವಿದ್ದಂತೆ. ಎರಡು ತಂಡಗಳಲ್ಲೂ ಸ್ಟಾರ್ ಪ್ಲೇಯರ್ಸ್, ಬಿಗ್ ಬಿಟ್ಟರ್ಸ್, ಪಂದ್ಯದ ಗತಿಯನ್ನೇ ಬದಲಿಸೋ ತಾಕತ್ತಿರೋ ಆಟಗಾರರಿದ್ದಾರೆ. ಯಾರಿಗೆ ಯಾರು ಕಮ್ಮಿ ಇಲ್ಲ, ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ. ಅಂಥದ್ದೊಂದು ಹೈವೋಲ್ಟೇಜ್, ಬಿಗ್‍ಫೈಟ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ. ಯಾಕಂದ್ರೆ ಇದು 2 ಬಲಿಷ್ಠ ಚಾಂಪಿಯನ್ಸ್ ತಂಡಗಳ ಸೆಣಸಾಟ.
Advertisement
ಎಸ್, ಎರಡು ತಂಡಗಳಿಗೂ ವಿಶ್ವಕಪ್ ಮೇಲೆಯೇ ಕಣ್ಣು. ಹಾಗಾಗಿ ಉಭಯ ತಂಡಗಳು ಕಠಿಣ ತಾಲೀಮು ನಡೆಸಿವೆ. ಭಾರತ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ತವರು ನೆಲದ ಬೆಂಬಲ ಆತ್ಮವಿಶ್ವಾಸವನ್ನ ಹಿಮ್ಮಡಿಗೊಳಿಸಿದೆ. ರೋಹಿತ್ ಶರ್ಮಾ, ಗಿಲ್, ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ತಂಡದ ಟ್ರಂಪ್ ಕಾರ್ಡ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಮಿಡಲ್ ಆರ್ಡರ್ ನಲ್ಲಿ ನೆರವಾಗಲಿದ್ದಾರೆ. ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‍ಪ್ರೀತ್ ಬುಮ್ರಾ ಬೌಲಿಂಗ್ ದಾಳಿ ಆಸೀಸ್ ಬ್ಯಾಟ್ಸ್ ಮನ್‍ಗಳ ನಿದ್ದೆಗೆಡಿಸಿದೆ. ಆದರೆ ಪಿಚ್ ಸ್ಪಿನ್ನರ್ ಗೆ ಹೆಚ್ಚು ನೆರವಾಗಿರೋದ್ರಿಂದ ರವಿಚಂದ್ರನ್ ಅಶ್ವಿನ್‍ಗೂ ಸ್ಥಾನ ಸಿಗುತ್ತಾ ಕಾದುನೋಡಬೇಕಿದೆ.
ಆಸ್ಟ್ರೇಲಿಯಾಗೆ (Australia) ಬ್ಯಾಟಿಂಗ್ ಶಕ್ತಿಯೇ ದೊಡ್ಡ ಅಸ್ತ್ರ. ಆರಂಭಿಕ ಬ್ಯಾಟ್ಸ್‍ಮನ್ ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್ ಫಾರ್ಮ್‍ನಲ್ಲಿದ್ದಾರೆ. ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್ ವೆಲ್, ಜಾಶ್ ಇಂಗ್ಲಿಸ್ ಮಿಡಲ್ ಆರ್ಡರ್ ನಲ್ಲಿ ನೆರವಾಗಲಿದ್ದಾರೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಝಾಂಪ, ಹೇಝಲ್‍ವುಡ್ ಬೌಲಿಂಗ್ ಬಲವಿದೆ. ಇನ್ನು ವಿಶ್ವಕಪ್ ಮಹಾಸಮರಕ್ಕೆ ಸಾಕ್ಷಿಯಾಗುತ್ತಿರುವ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ನವವಧುವಿನಂತೆ ಸಿಂಗಾರಗೊಂಡಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸೆ (Anthony Albanese), ಬಾಲಿವುಡ್ ತಾರೆಯರು, ಸಚಿನ್ ತೆಂಡೂಲ್ಕರ್ (Sachin Tendulkar) ಸೇರಿದಂತೆ ವಿಶ್ವಕಪ್ ಗೆದ್ದ ತಂಡದ ಮಾಜಿ ನಾಯಕರು ಉಪಸ್ಥಿತಿ ಇರಲಿದ್ದಾರೆ. ಇದಲ್ಲದೆ ಏರ್‍ಶೋ, ಲೇಸರ್ ಶೋ, ಸಂಗೀತ, ನೃತ್ಯ ವೈಭವ ವಿಶ್ವಕಪ್ ಫೈನಲ್ ಮ್ಯಾಚ್‍ನ ಕಿಕ್ಕನ್ನ ಹೆಚ್ಚಿಸಲಿದೆ.