ಚೆನ್ನೈ: ಏಕದಿನ ವಿಶ್ವಕಪ್‍ನಲ್ಲಿ (World Cup 2023) ನಿರಂತರ ಸೋಲಿನಿಂದ ಹತಾಶೆಯಲ್ಲಿರುವ ಪಾಕ್ (Pakistan) ತಂಡಕ್ಕೆ ಐಸಿಸಿ ದಂಡ ವಿಧಿಸಿದೆ.
ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಪಂದ್ಯದಲ್ಲಿ ಪಾಕ್ ನಿಧಾನಗತಿಯ ಬೌಲಿಂಗ್‍ಗಾಗಿ ಪಂದ್ಯದ ಶುಲ್ಕದ 20%ನಷ್ಟು ದಂಡವನ್ನು ವಿಧಿಸಿದೆ. ಇದು ಪಾಕ್ ಆಟಗಾರರ ವೇತನ ವಿಳಂಬದ ನಡುವೆ ಪಾಕ್ ತಂಡಕ್ಕೆ ಹೊರೆಯಾಗಿ ಪರಿಣಮಿಸಿದೆ. ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಿಧಾನಗತಿಯ ಬೌಲಿಂಗ್ ಬಗ್ಗೆ ಅಂಪೈರ್ ಆರೋಪ ಮಾಡಿದ್ದರು. ಇದನ್ನೂ ಓದಿ: ಧರ್ಮಶಾಲಾ ಅಂಗಳದಲ್ಲಿ ವಂದೇ ಮಾತರಂ ಝೇಂಕಾರ – ಅದ್ಭುತ ವೀಡಿಯೋ ನೀವೇ ನೋಡಿ
Advertisement
Advertisement
ಬೌಲಿಂಗ್ ವೇಳೆ ಪಾಕ್ ಆಟಗಾರರು ನಿಗದಿತ ಸಮಯಕ್ಕಿಂತ ನಾಲ್ಕು ಓವರ್‍ಗಳಷ್ಟು ಹೆಚ್ಚಿನ ಸಮಯವನ್ನು ವ್ಯರ್ಥ ಮಾಡಿದ್ದಾರೆ. ಈ ತಪ್ಪನ್ನು ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಒಪ್ಪಿಕೊಂಡಿದ್ದಾರೆ. ಇದರಿಂದ ಐಸಿಸಿ ದಂಡ ವಿಧಿಸಲು ನಿರ್ಧರಿಸಿದೆ. ಈ ಬಗ್ಗೆ ಐಸಿಸಿ, ನಾಯಕ ಒಪ್ಪಿಕೊಂಡಿರುವುದರಿಂದ ವಿಚಾರಣೆಯ ಅಗತ್ಯವಿಲ್ಲ ಎಂದಿದೆ.
Advertisement
Advertisement
ಅಕ್ಟೋಬರ್ 14ರ ಪಂದ್ಯದಲ್ಲಿ ಟೀಂ ಇಂಡಿಯಾ (Team India) ವಿರುದ್ಧ ಸೋತ ಬಳಿಕ ಗೆಲುವಿನ ದಾರಿಗೆ ಬರಲು ಪಾಕ್ ಸೆಣೆಸಾಡುತ್ತಿದೆ. ಪಾಕ್ ಆರು ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಅಕ್ಟೋಬರ್ 31 ರಂದು ಕೋಲ್ಕತ್ತದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕ್, ಬಾಂಗ್ಲಾದೇಶದ ವಿರುದ್ಧ ಸೆಣೆಸಲಿದೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ 87 ರನ್‌ಗಳ ಭರ್ಜರಿ ಜಯ – ಬಲಿಷ್ಠ ಇಂಗ್ಲೆಂಡ್ ತಂಡವನ್ನೇ ಹಿಂದಿಕ್ಕಿದ ಡಚ್ಚರು
Web Stories